ಬೆಂಗಳೂರಿನಲ್ಲಿ ವಿವಾಹಿತ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆಕೆಯ ಗಂಡನೇ ಕೊಲೆ ಮಾಡಿದ್ದಾನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಗಂಡನ ಅಕ್ರಮ ಸಂಬಂಧವೇ ಸಾವಿಗೆ ಕಾರಣವೆಂದು ಶಂಕಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು (ಮಾ.31): ಉದ್ಯಾನನಗರಿಯಲ್ಲಿ ವಿವಾಹಿತ ಮಹಿಳೆ ಅನುಮಾನಾಸ್ಪದವಾಗಿ ಸಾವು ಕಂಡಿದ್ದಾರೆ. ಈ ಬಗ್ಗೆ ಅವರ ಕುಟುಂಬವೇ ಆರೋಪ ಮಾಡಿದೆ. 44 ವರ್ಷದ ಹೇಮಾ ಮೃತಪಟ್ಟ ಮಹಿಳೆ. ಕಳೆದ ಶನಿವಾರ ಆಕೆ ಸಾವು ಕಂಡಿದ್ದರು. ಆಡುಗೋಡಿಯ ನಂಜಪ್ಪ ಲೇಔಟ್ ನಡೆಯಲ್ಲಿ ಘಟನೆ ನಡೆದಿತ್ತು. ರಷ್ಯಾದಲ್ಲಿದ್ದ ಆಕೆಯ ಪುತ್ರ ಭಾನುವಾರ ವಾಪಾಸ್ ಬಂದ ಹಿನ್ನಲೆಯಲ್ಲಿ, ಆಡುಗೋಡಿ ಶವಗಾರದಲ್ಲಿ ನಿನ್ನೆ ಸಂಜೆ ಹೇಮಾ ಅಂತ್ಯಕ್ರಿಯೆ ನೆರವೇರಿದೆ.
ಈ ನಡುವೆ ಆಕೆಯ ಗಂಡನೇ ಪತ್ನಿಯನ್ನ ಕೊಲೆ ಮಾಡಿದ್ದಾನೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಗಂಡ ರಮೇಶ್ ಮೇಲೆ ಹೇಮಾ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ರಮೇಶ್ ಗೆ ಅಕ್ರಮ ಸಂಬಂಧ ಇದೆ. ವಾಸವಿದ್ದ ಮನೆ ಸಮೀಪವೇ ಬೇರೆ ಮಹಿಳೆಗೂ ಮನೆ ಮಾಡಿಕೊಟ್ಟಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಕಳೆದ ಜನವರಿಯಲ್ಲಿ ಹೇಮಾ ವಿಷ ಕುಡಿದು ಆತ್ಮಹತ್ಯೆಗೂ ಯತ್ನಿಸಿದ್ದಳು ಎನ್ನುವುದು ಗೊತ್ತಾಗಿದೆ.
ಗಂಡನ ಅಕ್ರಮ ಸಂಬಂಧ ಬಗ್ಗೆ ಹೇಮಾ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಳು. ಹೀಗಿದ್ದಾಗ ಕಳೆದ ಶನಿವಾರ ಹೇಮಾ ಸಾವನ್ನಪ್ಪಿದ್ದಾಳೆ ಎಂಬ ಸುದ್ದಿ ಸಿಕ್ಕಿದೆ. ಮಗಳ ವಿದ್ಯಾಭ್ಯಾಸ ವಿಚಾರಕ್ಕೆ ಹೇಮಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗಂಡ ಹೇಳಿದ್ದ. ಆದರೆ ಹೇಮಾ ನೇಣು ಬಿಗಿದ ಸ್ಥಿತಿಯಲ್ಲಿರೋದನ್ನ ಯಾರು ನೋಡಿಲ್ಲ. ಹೇಮಾ ಮೃತದೇಹವನ್ನು ಕುಟುಂಬಸ್ಥರು ಹಾಗೂ ಪೊಲೀಸರು ಆಸ್ಪತ್ರೆಯಲ್ಲಿಯೇ ನೋಡಿದ್ದಾರೆ.
ನಟನಾಗುವ ಮೊದಲೇ ಜೈಲೂಟ ಮಾಡಿಬಂದ ದರ್ಶನ್ ಅಭಿಮಾನಿ ರಜತ್ ಕಿಶನ್! ರೌಡಿಶೀಟರ್ ತೆರೆಯಲು ಪೊಲೀಸರ ಚಿಂತನೆ!
ಹೀಗಾಗಿ ಗಂಡ ರಮೇಶ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಹಲ್ಲೆ ಮಾಡಿದ್ದು ಹೌದು ಎಂದು ರಮೇಶ್ ಹೇಳಿದ್ದಾನೆ. ಸದ್ಯ ಮರಣೋತ್ತರ ಪರೀಕ್ಷಾ ವರದಿಗೆ ಪೊಲೀಸರು ಕಾಯುತ್ತಿದ್ದು. ಅನುಮಾನಸ್ಪದ ಸಾವು ಎಂದು ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ʼಒಂದು ಮಚ್ಚಿನ ಕಥೆ ನೋಡಿದ್ರಿ, ನನ್ನ ಕುಟುಂಬಕ್ಕೆ ತೊಂದರೆಯಾಗಿದೆʼ- Bigg Boss Vinay Gowda ಮೊದಲ ರಿಯಾಕ್ಷನ್