ಬಿಗ್ ಬಾಸ್ ಖ್ಯಾತಿಯ ಮನಿಷಾ ರಾಣಿ ಮುಂಬೈನಲ್ಲಿ ಮೊದಲ ಮನೆ ಖರೀದಿಸಿದ್ದಾರೆ. 4.98 ಕೋಟಿ ಬೆಲೆಯ ಐಷಾರಾಮಿ ಅಪಾರ್ಟ್ಮೆಂಟ್ ಗೋರೆಗಾಂವ್‌ನಲ್ಲಿದೆ.
ರಿಯಾಲಿಟಿ ಶೋ 'ಬಿಗ್ ಬಾಸ್ ಒಟಿಟಿ 2' ಖ್ಯಾತಿಯ ಮನಿಷಾ ರಾಣಿ ಇತ್ತೀಚೆಗೆ ಮುಂಬೈನಲ್ಲಿ ತಮ್ಮ ಮೊದಲ ಕನಸಿನ ಮನೆಯನ್ನು ಖರೀದಿಸಿದ್ದಾರೆ. ಈ ವಿಷಯವನ್ನು ಅವರೇ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. 'ನವರಾತ್ರಿಯ ಮೊದಲ ದಿನ, ನಿಮ್ಮೆಲ್ಲರ ಪ್ರೀತಿಯಿಂದ ಮತ್ತು ನನ್ನ ಪರಿಶ್ರಮದಿಂದ ಗಳಿಸಿದ ಮುಂಬೈನ ನನ್ನ ಮೊದಲ ಮನೆ..ಇದೆಲ್ಲವೂ ನಿಮ್ಮೆಲ್ಲರಿಂದ ಸಾಧ್ಯವಾಯಿತು. ತುಂಬಾ ತುಂಬಾ ಧನ್ಯವಾದಗಳು. ಪ್ರತಿಯೊಂದಕ್ಕೂ ಕೃತಜ್ಞಳಾಗಿದ್ದೇನೆ' ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ಕೋಟ್ಯಾಂತರ ರೂ ಬೆಲೆ ಬಾಳುವ ಮನಿಷಾ ಅವರ ಕನಸಿನ ಮನೆ
ಈ ಸುದ್ದಿ ಕೇಳಿದ ನಂತರ ಜನರು ಮನಿಷಾಗೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ, ಅವರು ಒಬ್ಬಂಟಿಯಾಗಿ ಮುಂಬೈನಲ್ಲಿ ಮನೆ ಖರೀದಿಸಿದ್ದಕ್ಕಾಗಿ ಜನರು ಅವರನ್ನು ಹೊಗಳುತ್ತಿದ್ದಾರೆ. ಮನಿಷಾ ಅವರ ಈ ಐಷಾರಾಮಿ ಮನೆಯ ಬೆಲೆ 4.98 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಮನಿಷಾ ಅವರ ಈ ಅಪಾರ್ಟ್ಮೆಂಟ್ ಮುಂಬೈನ ಗೋರೆಗಾಂವ್ ಪ್ರದೇಶದಲ್ಲಿದೆ. ಇಲ್ಲಿಂದ ಮುಂಬೈನ ಸುಂದರ ನೋಟ ಕಾಣುತ್ತದೆ. ಮನಿಷಾ ಯಾವಾಗಲೂ ಬಾಲ್ಕನಿಯಿರುವ ಮನೆಯನ್ನು ಬಯಸುತ್ತಿದ್ದರು ಮತ್ತು ಈ ಕನಸನ್ನು ಅವರು ನನಸು ಮಾಡಿಕೊಂಡಿದ್ದರಿಂದ ಈ ಮನೆ ಅವರಿಗೆ ವಿಶೇಷವಾಗಿದೆ. ಈ ಹಿಂದೆ ಮನಿಷಾ ತಮ್ಮ ಸ್ವಂತ ಊರಾದ ಬಿಹಾರದಲ್ಲಿ ಆಸ್ತಿಯನ್ನು ಖರೀದಿಸಿದ್ದರು. ಆ ವಿಚಾರವನ್ನು ಕೂಡ ಅವರು ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ಯಾರು ಈ ಮನಿಷಾ ರಾಣಿ
ಸಲ್ಮಾನ್ ಖಾನ್ ಅವರ ಬಿಗ್ ಬಾಸ್ ಒಟಿಟಿ 2 ರಲ್ಲಿ ಭಾಗವಹಿಸಿದ ನಂತರ ಮನಿಷಾ ರಾಣಿ ಸಾಕಷ್ಟು ಜನಪ್ರಿಯರಾದರು. ಅದೇ ಸಮಯದಲ್ಲಿ, ಅವರು ಸೆಲೆಬ್ರಿಟಿ ಡ್ಯಾನ್ಸ್ ರಿಯಾಲಿಟಿ ಶೋ, ಝಲಕ್ ದಿಖ್ಲಾ ಜಾ ಸೀಸನ್ 11 ರಲ್ಲಿಯೂ ಭಾಗವಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ರಿಯಾಲಿಟಿ ಶೋನಲ್ಲಿ ಭಾಗವಹಿಸುವುದರ ಜೊತೆಗೆ, ಮನಿಷಾ ಅನೇಕ ಮ್ಯೂಸಿಕ್ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿಯೂ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಅವರು ತಮ್ಮ ಅಭಿಮಾನಿಗಳನ್ನು ರಂಜಿಸಲು ರೀಲ್ಸ್, ಫೋಟೋಗಳು ಮತ್ತು ವೀಡಿಯೊಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಯೂಟ್ಯೂಬ್‌ನಲ್ಲಿ ಅವರಿಗೆ 4 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ಗಳಿದ್ದಾರೆ.