Santosh Naik | Updated: Mar 31, 2025, 11:46 PM IST
ಬೆಂಗಳೂರು (ಮಾ.31): ಬಿಜೆಪಿಯಿಂದ ಉಚ್ಛಾಟನೆ ಆದ ಬೆನ್ನಲ್ಲಿಯೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮುಂದಿನ ನಡೆ ಏನು ಅನ್ನೋದರ ಬಗ್ಗೆ ಪ್ರಶ್ನೆಗಳು ಎದುರಾಗಿದ್ದವು. ಈಗ ಹೊಸ ಪಕ್ಷ ಕಟ್ಟುವ ಬಗ್ಗೆ ಅವರು ಅಭಿಪ್ರಾಯ ಸಂಗ್ರಹಣೆ ಮಾಡುತ್ತಿದ್ದಾರೆ.
ಬಿಜೆಪಿಯಿಂದ ಉಚ್ಛಾಟನೆ ಆದ ಬೆನ್ನಲ್ಲಿಯೇ ಬಸನಗೌಡ ಪಾಟೀಲ್ ಯತ್ನಾಳ್ ಹೈಪರ್ ಆಕ್ಟೀವ್ ಆಗಿದ್ದಾರೆ. ಮಠಗಳಿಗೆ ಭೇಟಿ ನೀಡಿ ವಿಶ್ವಾಸಗಳಿಸಲು ಯತ್ನಾಳ್ ಮುಂದಾಗಿದ್ದಾರೆ.
ಶಾಸಕ ಯತ್ನಾಳ್ ಉಚ್ಚಾಟನೆಗೆ ಪ್ರತಿಕ್ರಿಯಿಸಲ್ಲ: ಸಂಸದ ಜಗದೀಶ್ ಶೆಟ್ಟರ್
ಮುಂದಿನ ದಸರಾ ಹೊತ್ತಿಗೆ ಹೊಸ ಪಕ್ಷ ಕಟ್ಟುತ್ತೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಆದರೆ, ರಾಜ್ಯ ರಾಜಕಾರಣದಲ್ಲಿ ಸ್ವಪಕ್ಷದಿಂದ ಸಿಡಿದೆದ್ದು ಹೊಸ ಪಕ್ಷ ಕಟ್ಟಿ ಅದರಲ್ಲು ಯಶಸ್ಸು ಕಂಡವರು ಬಹಳ ಕಡಿಮೆ.