ಬಿಗ್ ಬಾಸ್ ಖ್ಯಾತಿಯ ನಟ ರಜತ್ ಕಿಶನ್ ವಿರುದ್ಧ ರೌಡಿಶೀಟರ್ ತೆರೆಯಲು ಬೆಂಗಳೂರು ಪೊಲೀಸರು ಚಿಂತನೆ ನಡೆಸಿದ್ದಾರೆ. ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣ ಮತ್ತು ಈ ಹಿಂದಿನ ಹಲ್ಲೆ ಪ್ರಕರಣಗಳು ಇದಕ್ಕೆ ಕಾರಣ.
ಬೆಂಗಳೂರು (ಮಾ.30): ಇತ್ತೀಚೆಗೆ ಮಚ್ಚು ಹಿಡಿದು ರೀಲ್ಸ್ ಮಾಡಿದ ಬಿಗ್ ಬಾಸ್ ಖ್ಯಾತಿಯ ಕಿರುತೆರೆ ನಟ ರಜತ್ ಕಿಶನ್ ಮೇಲೆ ಬೆಂಗಳೂರು ಪೊಲೀಸರು ರೌಡಿಶೀಟರ್ ಪಟ್ಟಿಯನ್ನು ತೆರೆಯಲು ಮುಂದಾಗಿದ್ದಾರೆ. ಇದಕ್ಕೆ ಕಾರಣ ಆತನ ಕ್ರೈಂ ಹಿಸ್ಟರಿಯನ್ನೂ ಕಲೆ ಹಾಕುತ್ತಿದ್ದಾರೆ.
ಹೌದು, ಕಳೆದ 10 ದಿನಗಳಿಂದೀಚೆಗೆ ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿ ರಜತ್ ಕಿಶನ್ ಮೇಲೆ ರೌಡಿಶೀಟರ್ ಪಟ್ಟಿ ಓಪನ್ ಮಾಡಲು ಚಿಂತನೆ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸರಿಂದ ಚಿಂತನೆ ಮಾಡಲಾಗುತ್ತಿದೆ. ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ರಜತ್ ಬ್ಯಾಕ್‌ಗ್ರಂಡ್ (ಕ್ರೈಂ ಹಿಸ್ಟರಿ) ಪರಿಶೀಲನೆ ಮಾಡುತ್ತಿದ್ದಾರೆ. ಜೊತೆಗೆ, ರಜತ್ ಚಲವಲನ, ಕ್ರಿಮಿನಲ್ ಹಿಸ್ಟರಿಯನ್ನು ಕಲೆ ಹಾಕಲಾಗುತ್ತಿದೆ. ನಿಮ್ಮ ಮೇಲೆ ಯಾಕೆ ರೌಡಿಶೀಟರ್ ಪಟ್ಟಿ ಓಪನ್ ಮಾಡಬಾರದು ಎಂಬ ಬಗ್ಗೆ ನೊಟೀಸ್ ಕೊಡಲು ಚಿಂತನೆ ಮಾಡಲಾಗುತ್ತಿದೆ ಎಂಬ ಮಾಹಿತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪೊಲೀಸ್ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ರಜತ್ ವಿರುದ್ಧ ರೌಡಿಶೀಟರ್ ಪಟ್ಟಿ ತೆರೆಯಲು ಹಲವು ಕ್ರಿಮಿನಲ್ ಬ್ಯಾಕ್‌ಗ್ರೌಂಡ್ ಹೊಂದಿರಬೇಕು. ಜೊತೆಗೆ, ಕೆಲವು ಸಮಾಜಬಾಹಿರ ಕೃತ್ಯಗಳಲ್ಲಿ, ಹಲ್ಲೆ, ಆಫ್ ಮರ್ಡರ್, ಮರ್ಡರ್ ಸೇರಿದಂತೆ ಇತರೆ ಕೃತ್ಯಗಳಲ್ಲಿ ಭಾಗಿಯಾದ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆಯೇ ಎಂಬುದನ್ನು ಪತ್ತೆ ಮಾಡಲಾಗಿದೆ. ಈ ವೇಳೆ ರಜತ್ ವಿರುದ್ದ ಈಗಾಗಲೇ ಎರಡು ಕೇಸ್ ದಾಖಲಾಗಿವೆ. ಅದರಲ್ಲಿ ಕೇಸ್ ನಂಬರ್ 1 ಸಂಬಂಧಿಯೊಬ್ಬರ ಜೊತೆಗೆ ಗಲಾಟೆ ಮಾಡಿಕೊಂಡು ಕೇಸ್ ದಾಖಲಾಗಿತ್ತು. ಇನ್ನು ಕೇಸ್ ನಂಬರ್ 2 ಇದೀಗ ಚಾಲ್ತಿಯಲ್ಲಿರುವ ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣವಾಗಿದೆ.
ಇದನ್ನೂ ಓದಿ: Breaking: ಮಚ್ಚು ಹಿಡಿದು ರೀಲ್ಸ್, 3 ದಿನ ಪೊಲೀಸ್ ಕಸ್ಟಡಿಗೆ ರಜತ್ ಕಿಶನ್, ವಿನಯ್ ಗೌಡ!
ಹಳೆಯ ಕೇಸ್‌ನಲ್ಲಿ ಮಹಿಳೆ ಒರ್ವವರಿಗೆ ರಜತ್ ಹಲ್ಲೆ ಮಾಡಿದ್ದನು. ಕೇವಲ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ಮಾಡಿ ಅಂಗಡಿ ಧ್ವಂಸ ಮಾಡಿದ್ದನು. ಇದನ್ನು ತಡೆಯಲು ಬಂದಿದ್ದ 3 ಜನರ ಮೇಲೆ ಹಲ್ಲೆ ಮಾಡಿದ್ದನು. 2018 ಫೆಬ್ರವರಿ 26ರಂದು ಕೇಸ್ ದಾಖಲಾಗಿತ್ತು. ಐಪಿಸಿ ಸೆಕ್ಷನ್ 448,323,324,354,427,504,506 ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ರಜತ್ ವಿರುದ್ದ ಪೊಲೀಸರಯ ಚಾರ್ಶಿಟ್ ಸಲ್ಲಿಕೆ ಮಾಡಿದ್ದರು. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿಯೇ ಹಳೆಯ ಕೇಸ್ ಕೂಡ ದಾಖಲಾಗಿತ್ತು. ಸದ್ಯ ಈ ಕೇಸ್ ಕೂಡ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಕೆಲದಿನಗಳ ಹಿಂದೆ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ವಾರಂಟ್ ಸಹ ಜಾರಿಯಾಗಿತ್ತು.
ಬಂಧನ ವಾರೆಂಟ್ ಜಾರಿಯಾದ ರಜತ್ ನ್ಯಾಯಾಲಯಕ್ಕೆ ಹಾಜರಾಗಿದ್ದನು. ಈಗಾಗಲೇ ರಜತ್ ವಿರುದ್ದ 2 ಕೇಸ್ ದಾಖಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಈತ ಒರ್ವ ಕ್ರಿಮಿನಲ್ ಇತಿಹಾಸ ಉಳ್ಳ ಆರೋಪಿ. ಈತನ ವಿರುದ್ದ ಎರಡು ಕ್ರಿಮಿನಲ್ ಕೇಸ್ ದಾಖಲಾಗಿದೆ ಎಂದು ಕೋರ್ಟ್ ಮುಂದೆ ವರದಿ ನೀಡಲಾಗಿದೆ. ಕೆಲವೇ ದಿನಗಳಲ್ಲಿ ರೌಡಿ ಶೀಟರ್ ತೆರೆಯುವ ಬಗ್ಗೆ ನೊಟೀಸ್ ನೀಡಿ, ಅದಕ್ಕೆ ನೀಡಲಾಗುವ ಉತ್ತರ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ರೀಲ್ಸ್ ಕೇಸಿನಲ್ಲಿ ಜೈಲಿಗೆ ಹೋಗಿಬಂದ ಮತ್ತೊಬ್ಬ ನಟ ವಿನಯ್ ಗೌಡ ವಿರುದ್ದ ಯಾವ ಕೇಸ್ ಇಲ್ಲ. ಇದೇ ಮೊದಲ ಬಾರಿಗೆ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ʼಒಂದು ಮಚ್ಚಿನ ಕಥೆ ನೋಡಿದ್ರಿ, ನನ್ನ ಕುಟುಂಬಕ್ಕೆ ತೊಂದರೆಯಾಗಿದೆʼ- Bigg Boss Vinay Gowda ಮೊದಲ ರಿಯಾಕ್ಷನ್