ತಮಿಳುನಾಡು ಬಾವಿಯಲ್ಲಿ ಕನ್ನಡಿಗರ 17 ಕೆಜಿ ಬಂಗಾರ ಪತ್ತೆ! ಚಿನ್ನಾಭರಣ ನೋಡಿ ಬೆಚ್ಚಿಬಿದ್ದ ಪೊಲೀಸರು!

ತಮಿಳುನಾಡಿನ ಮದುರೈ ಬಾವಿಯಲ್ಲಿ ದಾವಣಗೆರೆಯ ಕನ್ನಡಿಗರಿಗೆ ಸೇರಿದ 17 ಕೆಜಿ ಚಿನ್ನಾಭರಣ ಪತ್ತೆಯಾಗಿದೆ. ಈ ಬಾವಿಯಲ್ಲಿ ಸಿಕ್ಕ ಚಿನ್ನಾಭರಣವನ್ನು ನೋಡಿದ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

17 Kg Gold jewellery box found in Tamil Nadu dilapidated well these all from Kannadigas sat

ದಾವಣಗೆರೆ (ಮಾ.31): ತಮಿಳುನಾಡಿನ ಮದುರೈ ಬಾವಿಯಲ್ಲಿ ಚಿನ್ನಾಭರಣಗಳಾದ ನೂರಾರು ಸರಗಳು, ನೆಕ್ಲೆಸ್, ಬ್ರಾಸ್‌ಲೇಟ್, ಉಂಗುರ, ತಾಳಿ ಸರ, ಕಡಗ ಸೇರಿದಂತೆ ಒಟ್ಟು 17 ಕೆಜಿ ಬಂಗಾರ ಪತ್ತೆಯಾಗಿದೆ. ಈ ಎಲ್ಲ ಬಂಗಾರದ ಆಭರಣಗಳು ಕನ್ನಡಿಗರದ್ದು ಎಂಬುದು ವಿಶೇಷವಾಗಿದೆ.

ಹೌದು, ತಮಿಳುನಾಡಿನ ಬಾವಿಯಲ್ಲಿ ಸಿಕ್ಕಿರುವ 17 ಕೆಜಿ ಬಂಗಾರ ಸಂಪೂರ್ಣವಾಗಿ ಕನ್ನಡಿಗರದ್ದು, ಅದರಲ್ಲಿಯೂ ದಾವಣಗೆರೆಯ ನ್ಯಾಮತಿ ಗ್ರಾಮದವರು ಕೂಡಿಟ್ಟಿದ್ದ ಚಿನ್ನಾಭಗರಣಗಳಾಗಿವೆ. ಈ ಬಂಗಾರವನ್ನು ದಾವಣಗೆರೆ ಪೊಲೀಸರೇ ಹುಡುಕಿಕೊಂಡು ಹೋಗಿದ್ದಾರೆ. ಪೊಲೀಸರಿಗೆ ಕಳ್ಳರನ್ನು ಹಿಡಿಯುವುದನ್ನು ಬಿಟ್ಟು ಬಂಗಾರ ಹುಡುಕುವ ಕೆಲಸ ಕೊಟ್ಟಿದ್ದಾರಾ? ಎಂಬ ಪ್ರಶ್ನೆ ಕೇಳಬೇಡಿ. ಕಾರಣ, ಅವರು ಕಳ್ಳರನ್ನು ಹುಡುಕಿಕೊಂಡಿ ಹೋಗಿದ್ದು, ಅಲ್ಲಿ ಕಳ್ಳರು ನ್ಯಾಮತಿಯಿಂದ ಕದ್ದುಕೊಂಡ ಹೋಗಿ ಬಾವಿಯಲ್ಲಿ ಬೀಸಾಡಿದ ಹದಿನೇಳು ಕೆಜಿ ಬಂಗಾರವನ್ನು ಪತ್ತೆಹಚ್ಚಿ ಹೊರಗೆ ತೆಗೆದಿದ್ದಾರೆ.

Latest Videos

ಅಷ್ಟಕ್ಕೂ ಮೂಲ ಕಹಾನಿ ಇಲ್ಲಿದೆ ನೋಡಿ..!
ದಾವಣಗೆರೆ ಜಿಲ್ಲೆ ನ್ಯಾಮತಿ ಪಟ್ಟಣದಲ್ಲಿ 2024ರ ಆಕ್ಟೋಬರ್ 26 ರಂದು ಎಸ್‌ಬಿಐ ಬ್ಯಾಂಕ್‌ನಲ್ಲಿ ಕಳ್ಳತನ ನಡೆದಿತ್ತು. ಬೇಕರಿ ವ್ಯವಹಾರ ವಿಸ್ತರಣೆಗೆ ಅಗತ್ಯವಿದ್ದ ಸಾಲ ನೀಡಲು ನಿರಾಕರಿಸಿದ್ದಕ್ಕೆ  ಭಾರತೀಯ ಸ್ಟೇಟ್ ಬ್ಯಾಂಕಿನ (ಎಸ್‌ಬಿಐ) ನ್ಯಾಮತಿ ಶಾಖೆಗೆ ಕನ್ನ ಹಾಕಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಬರೋಬ್ಬರಿ 13 ಕೋಟಿ ರೂ. ಮೌಲ್ಯದ 17 ಕೆ.ಜಿ 705 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದರು. 6 ತಿಂಗಳ ಬಳಿಕ ನ್ಯಾಮತಿಯ ಬ್ಯಾಂಕ್ ಕಳವು ಪ್ರಕರಣ ಭೇದಿಸುವಲ್ಲಿ ದಾವಣಗೆರೆ ಜಿಲ್ಲಾ ಪೊಲೀಸರು ಯಶಸ್ವಿ ಆಗಿದ್ದಾರೆ. ಬ್ಯಾಂಕ್ ಸಮೀಪವೇ ವಾಸವಾಗಿದ್ದ ಆರೋಪಿಗಳು, ಮೊದಲ ಬಾರಿಗೆ ಅಪರಾಧ ಪ್ರಕರಣವೊಂದನ್ನು ನಡೆಸಿ ಸಣ್ಣ ಸುಳಿವೂ ಬಿಡದಂತೆ ಪಾರಾಗಿದ್ದರು.

ಎಸ್‌ಬಿಐ ಬ್ಯಾಂಕ್ ಅನತಿ ದೂರದಲ್ಲಿ ಪತ್ತೆಯಾದ ಸಿಲಿಂಡ‌ರ್ ಒಂದು ದುಷ್ಕರ್ಮಿಗಳ ಸುಳಿವು ನೀಡಿತ್ತು. ಮೂಲತಃ ತಮಿಳುನಾಡಿನವರಾದ ಅಜಯ್‌ಕುಮಾರ್ ಮತ್ತು ವಿಜಯ್‌ಕುಮಾ‌ರ್ ಸಹೋದರರು ನ್ಯಾಮತಿಯಲ್ಲಿ ನೆಲೆಸಿ ಬೇಕರಿ ವ್ಯವಹಾರ ನಡೆಸುತ್ತಿದ್ದರು. ಬ್ಯಾಂಕ್ ಹಿಂಭಾಗದ ನಿರ್ಜನ ಪ್ರದೇಶದಲ್ಲಿ 15 ದಿನಗಳ ಹಿಂದೆ ಅಡುಗೆ ಅನಿಲದ ಸಿಲಿಂಡ‌ರ್ ಒಂದು ಪತ್ತೆಯಾಗಿತ್ತು. ಗುಂಡಿಯೊಂದರಲ್ಲಿದ್ದ ಈ ಸಿಲಿಂಡ‌ರ್ ಬೇಸಿಗೆಯಲ್ಲಿ ನೀರು ಬತ್ತಿದ್ದರಿಂದ ಗೊಚರಿಸಿತ್ತು ಇದರ ಮೇಲಿದ್ದ ಸಂಖ್ಯೆ, ಅಕ್ಷರಗಳನ್ನು ಅಳಿಸಿಹಾಕಲಾಗಿತ್ತು. ಇದನ್ನು ವಶಕ್ಕೆ ಪಡೆದು ಪೊಲೀಸರು ತನಿಖೆಯನ್ನು ಮುಂದುವರಿಸಿದಾಗ ಅಜಯ್‌ಕುಮಾರ್ ಹಾಗೂ ವಿಜಯ್‌ ಕುಮಾ‌ರ್ ಸಹೋದರರ ಕೃತ್ಯ ಬೆಳಕಿಗೆ ಬರುತ್ತದೆ.

ಇದನ್ನೂ ಓದಿ: ಇದು ದಾವಣಗೆರೆ ಬಂಗಾರದ ಕಥೆ! ಬ್ಯಾಂಕ್​ ರಾಬರಿ ರೋಚಕ ಇನ್ವೆಸ್ಟಿಗೇಷನ್! 6 ತಿಂಗಳ ನಂತರ ಖದೀಮರು ಅಂದರ್!

ಬ್ಯಾಂಕಿಗೆ ಕನ್ನ ಹಾಕಿದ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಳ್ಳರ ಜಾಡು ಹಿಡಿದು ಉತ್ತರ ಭಾರತದ ಹಲವು ರಾಜ್ಯಗಳನ್ನು ಸುತ್ತಿದ್ದರು. ಉತ್ತರಪ್ರದೇಶದ ತಂಡವೊಂದು ಸಕ್ರಿಯವಾಗಿರುವ ಬಗ್ಗೆ ಮಾಹಿತಿ ತಿಳಿದು ಮಾರ್ಚ್ 16ರಂದು ಮತ್ತೊಂದು ತಂಡ ಸವಳಂಗದ ಎಸ್‌ಬಿಐ ಶಾಖೆಗೆ ಹೊಂಚುಹಾಕಿ ಸಿಕ್ಕಿಬಿದ್ದಿತ್ತು. ಬ್ಯಾಂಕ್‌ಗೆ ಕನ್ನ ಹಾಕಿ ಕಳವು ಮಾಡಿದ್ದ 17 ಕೆ.ಜಿ 705 ಗ್ರಾಂ ಚಿನ್ನಾಭರಣದ ಪೈಕಿ ಗರಿಷ್ಠ ಪ್ರಮಾಣದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಬ್ಯಾಂಕ್‌ಗೆ ಕನ್ನ ಹಾಕಿದ ನಂತರ ಆರೋಪಿಗಳು ಎಲ್ಲ ಚಿನ್ನಾಭರಣವನ್ನು ತಮಿಳುನಾಡಿಗೆ ರವಾನಿಸಿದ್ದರು. ವಿಜಯ್‌ ಕುಮಾರ್ ಪೂರ್ವಜರು ನೆಲೆಸಿರುವ ಹಳ್ಳಿಯ ಪಾಳು ಬಾವಿಯೊಂದರಲ್ಲಿ ಗಂಟು ಕಟ್ಟಿ ಚಿನ್ನವನ್ನು ಎಸೆದಿದ್ದರು. ಇವರ ಸುಳಿವು ಹಿಡಿದು ಹೋದ ಪೊಲೀಸರು ಇದೀಗ ಬಾವಿಯಲ್ಲಿ ಇಟ್ಟಿದ್ದ 17 ಕೆಜಿ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಸಾವಿರಾರು ಚಿನ್ನದ ಸರಗಳು, ನೆಕ್ಲೆಸ್, ಉಂಗುರ ಸೇರಿ ಹಲವು ಚಿನ್ನದ ಆಭರಣಗಳಿದ್ದವು. ಅವುಗಳನ್ನು ನ್ಯಾಮತಿ ಪೊಲೀಸರು ಪ್ರದರ್ಶನ ಮಾಡಿದ್ದು, ಒಂದು ದೊಡ್ಡ ಸಭಾಂಗಣದ ವೇದಿಕೆ ಗೋಡೆ ತುಂಬಿ ಹೋಗಿತ್ತು.

ಬೇಕರಿ ಉದ್ಯಮ ವಿಸ್ತರಣೆಗೆ ಸಾಲ‌ ನೀಡಲು ನಿರಾಕರಿಸಿದ್ದ ಎಸ್‌ಬಿಐ ಬ್ಯಾಂಕ್‌ ಸಿಬ್ಬಂದಿ ವಿರುದ್ಧ  ಕುಪಿತಗೊಂಡ ಅಜಯ್ ಕುಮಾರ್  ಬ್ಯಾಂಕ್ ದರೋಡೆಗೆ ನಿರ್ಧರಿಸಿ ಸಹೋದರ ವಿಜಯ್‌ ಕುಮಾ‌ರ್ ಜೊತೆಗೆ ಚರ್ಚಿಸಿದ್ದನು. ಜೊತೆಗೆ, ತಮಿಳುನಾಡಿನ ಪರಮಾನಂದ, ಸ್ಥಳೀಯರಾದ ಅಭಿಷೇಕ್, ಚಂದ್ರಶೇಖರ್ ಹಾಗೂ ಮಂಜುನಾಥ್ ಬಳಿಯೂ ಚರ್ಚಿಸಿದ್ದನು. ಎಲ್ಲರೂ ಒಗ್ಗೂಡಿ ಬ್ಯಾಂಕ್ ದರೋಡೆಗೆ ಸಂಚು ರೂಪಿಸಿ  ಯೂಟ್ಯೂಬ್ ವೀಕ್ಷಿಸಿ ಮಾಹಿತಿ ಕಲೆ ಹಾಕಿದ್ದರು. ಅಜಯ್‌ ಕುಮಾ‌ರ್ ಮತ್ತು ವಿಜಯ್‌ ಕುಮಾರ್ ಸಹೋದರರು ಗ್ರಾಮೀಣ ಪ್ರದೇಶದಲ್ಲಿ ಬೇಕರಿ ಉತ್ಪನ್ನಗಳ ಮಾರಾಟ ಮಾಡುತ್ತಿದ್ದರು. ನ್ಯಾಮತಿ ತಾಲ್ಲೂಕಿನ ಹಲವು ಹಳ್ಳಿಯ ಜನರು ಚಿನ್ನಾಭರಣವನ್ನು ಬ್ಯಾಂಕ್‌ನಲ್ಲಿ ಆಡ ಇಟ್ಟಿರುವ ಬಗ್ಗೆ ಇವರಿಗೆ ಹಳ್ಳಿಗಳಲ್ಲಿ ಮಾಹಿತಿ ಸಿಕ್ಕಿತ್ತು. ಬ್ಯಾಂಕಿನಲ್ಲಿ 932 ಗ್ರಾಹಕರು ಚಿನ್ನಾಭರಣ ಅಡವಿಟ್ಟು ಸಾಲ ಪಡೆದಿದ್ದರು. ಅಡವಿಟ್ಟ ಚಿನ್ನಾಭರಣಗಳನ್ನು ಬ್ಯಾಂಕಿನ ಭದ್ರತಾ ಕೊಠಡಿಯ ಎರಡು ತಿಜೋರಿಗಳಲ್ಲಿ ಇಡಲಾಗಿತ್ತು.

ಇದನ್ನೂ ಓದಿ: ತಾಯಿ ಜೊತೆ ಜಗಳ, ಮನೆಬಿಟ್ಟು ಬಂದ ಅಪ್ರಾಪ್ತ ಯುವತಿ ಮೇಲೆ ಮೆಜೆಸ್ಟಿಕ್ ಹಣ್ಣು ವ್ಯಾಪಾರಿಯಿಂದ ಬಲತ್ಕಾರ, ಏನಿದು ಪ್ರಕರಣ?

509 ಗ್ರಾಹಕರ ಚಿನ್ನಾಭರಣ ಇದ್ದ ತಿಜೋರಿಯನ್ನು ಕತ್ತರಿಸುವಲ್ಲಿ ಆರೋಪಿಗಳು ಯಶಸ್ವಿಯಾಗಿದ್ದರು. 423 ಗ್ರಾಹಕರ ಚಿನ್ನಾಭರಣಗಳಿದ್ದ ಮತ್ತೊಂದು ತಿಜೋರಿ ಕತ್ತರಿಸಲು ಸಾಧ್ಯವಾಗಿರಲಿಲ್ಲ. ಬ್ಯಾಂಕ್ ಹಿಂಭಾಗದಲ್ಲಿ ಮುಳ್ಳು. ಪೊದೆಗಳು ಬೆಳೆದುಕೊಂಡಿವೆ. 4 ಕಿ.ಮೀ ದೂರದಿಂದ ಕಾಲ್ನಡಿಗೆಯಲ್ಲಿ ಬ್ಯಾಂಕ್ ಹಿಂಬದಿಗೆ ಬಂದಿದ್ದರು. ಕಟ್ಟಡದ ಬಲಭಾಗದ ಕಿಟಕಿಯ ಸರಳುಗಳನ್ನು ಮುರಿದು ಒಳನುಗ್ಗಿ ಸಿ.ಸಿ.ಟಿ.ವಿ ಕ್ಯಾಮೆರಾ ಧ್ವಂಸಗೊಳಿಸಿ, ಡಿವಿಆರ್ ಕಿತ್ತಿಟ್ಟುಕೊಂಡಿದ್ದರು. ಗ್ಯಾಸ್ ಕಟ್ಟರ್ ನೆರವಿನಿಂದ ಲಾಕರ್ ಮುರಿದು ಭದ್ರತಾ ಕೊಠಡಿಗೆ ನುಗ್ಗಿ ತಿಜೋರಿ (ಚೆಬ್) ಕತ್ತರಿಸಿದ್ದರು. 30 ವರ್ಷ ವಯೋಮಾನದ ಯಾರಿಗೂ ಕಳ್ಳತನ‌ಕೃತ್ಯದ ಹಿನ್ನಲೆ ಇಲ್ಲದಿದ್ದರೂ, ವೃತ್ತಿಪರ ಆರೋಪಿಗಳು ನಡೆಸುವ ರೀತಿಯಲ್ಲಿ ಕೃತ್ಯ ಎಸಗಿದ್ದರು.

ಇನ್ನು ಕಳ್ಳತನ ಮಾಡಿದ ನಂತರ ಸಾಕ್ಷ್ಯಗಳು ಲಭ್ಯವಾಗಬಾರದು ಎಂಬ ಕಾರಣಕ್ಕೆ ಖಾರದ ಪುಡಿಯನ್ನು ಚೆಲ್ಲಿದ್ದರು.  ಇದನ್ನೂ ಯೂಟ್ಯೂಬ್ ನೋಡಿ ಅರಿತುಕೊಂಡಿದ್ದರು. ಇದರಿಂದ ಶ್ವಾನದಳ, ಬೆರಳಚ್ಚು ವಿಭಾಗಕ್ಕೆ ಯಾವ ಸುಳಿವೂ ಸಿಕ್ಕಿರಲಿಲ್ಲ. ಕೃತ್ಯ ಎಸಗಿದ ಬಳಿಕ ಅನುಮಾನ ಬಾರದಂತೆ ನ್ಯಾಮತಿಯಲ್ಲೇ ಇದ್ದು ಎಂದಿನ ಕೆಲಸದಲ್ಲಿ ತೊಡಗಿಕೊಂಡಿದ್ದರು. ಬ್ಯಾಂಕ್ ಸಮೀಪದ ಸಿಡಿಆರ್ ಪರಿಶೀಲಿಸಿದಾಗಲೂ ಇವರ ಮೊಬೈಲ್ ಪೋನ್‌ಗಳ ಮೇಲೆ ಪೊಲೀಸರಿಗೆ ಅನುಮಾನ ಬಂದಿರಲಿಲ್ಲ. ಸ್ಥಳೀಯರು ಹಾಗೂ ಗ್ರಾಹಕರಾಗಿದ್ದ ಕಾರಣಕ್ಕೆ ಇವರ ಮೇಲೆ ಯಾರಿಗೂ ಸಂಶಯ ಮೂಡಿರಲಿಲ್ಲ.

ಇದನ್ನೂ ಓದಿ: ವೃದ್ಧ ದಂಪತಿ ₹6 ಲಕ್ಷ ಕೊಟ್ಟರೂ ಬೆದರಿಕೆ ನಿಲ್ಲಿಸದ ಸೈಬರ್ ವಂಚಕರು; ಮಾನಕ್ಕೆ ಹೆದರಿ ಪ್ರಾಣವನ್ನೇ ಬಿಟ್ಟರು!

vuukle one pixel image
click me!