ಹಲ್‌ಚಲ್ ಎಬ್ಬಿಸಿದ ತಮನ್ನಾ ಹಸಿಬಿಸಿ ದೃಶ್ಯ: ನೋ ಕಿಸ್ಸಿಂಗ್ ಎಂದಿದ್ದ ಮಿಲ್ಕಿ ಬ್ಯೂಟಿ ನೋಡಿ ಫ್ಯಾನ್ಸ್ ಶಾಕ್

By Shruthi KrishnaFirst Published Jun 6, 2023, 1:01 PM IST
Highlights

ತಮನ್ನಾ ಸದ್ಯ ಹಾಟ್ ದೃಶ್ಯಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಲಸ್ಟ್ ಸ್ಟೋರಿ -2 ಮತ್ತು ಜೀ ಕರ್ದ ಸೀರಿಸ್‌ಗಾಗಿ ತಮನ್ನಾ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ. 

ಉತ್ತರ ಭಾರತ ಮೂಲದ ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ತಮನ್ನಾ ಸಿನಿಮಾಗಳು ಕಡಿಮೆಯಾಗಿದೆ. ಹಾಗಂತ ತಮನ್ನಾ ಸೈಲೆಂಟ್ ಆಗಿದ್ರು ಅಂತ ಅಂದ್ಕೋಬೇಡಿ. ವೆಬ್ ಸೀರಿಸ್‌ಗಳಲ್ಲಿ ತಮನ್ನಾ ಬ್ಯುಸಿಯಾಗಿದ್ದರು. ಮಿಲ್ಕಿ ಬ್ಯೂಟಿ ಸದ್ಯ ಎರಡು ಸಿರೀಸ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಟೀಸರ್ ಮತ್ತು ಟ್ರೈಲರ್ ರಿಲೀಸ್ ಆಗಿದ್ದು ತಮನ್ನಾ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ತಮನ್ನಾ ಸದ್ಯ ಲಸ್ಟ್ ಸ್ಟೋರಿ 2 ಮತ್ತು ಜೀ ಕರ್ದ ಸೀರಿಸ್‌ನಲ್ಲಿ ನಟಿಸಿದ್ದು ರಿಲೀಸ್‌ಗೆ ರೆಡಿಯಾಗಿವೆ. 

ಈ ಎರಡು ಸೀರಿಸ್‌ಗಳಲ್ಲಿ ತಮನ್ನಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಲಸ್ಟ್ ಸ್ಟೋರಿ 2 ಸೀರಿಸ್‌ನಲ್ಲಿ ತಮನ್ನಾ ರೂಮರ್ ಬಾಯ್ ಫ್ರೆಂಡ್ ವಿಜಯ್ ವರ್ಮಾ ಜೊತೆ ಕಾಣಿಸಿಕೊಂಡಿದ್ದಾರೆ. ನೀನಾ ಗುಪ್ತಾ, ಕಾಜೋಲ್, ಮೃಣಾಲ್ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ. ತಮನ್ನಾ ವಿಜಯ್ ವರ್ಮಾ ಜೊತೆ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ವರ್ಮಾ ಜೊತೆ ಕಿಸ್ಸಿಂಗ್ ದೃಶ್ಯಗಲ್ಲಿ ತೆರೆಯಾಗಿದ್ದಾರೆ. ತಮನ್ನಾ ಫೋಟೋಗಳು ಮತ್ತು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. 

Latest Videos

ಲಸ್ಟ್ ಸ್ಟೋರಿ-2 ಜೊತೆಗೆ ತಮನ್ನಾ ಜೀ ಕರ್ದ ಸೀರಿಸ್ ಕೂಡ ಸಿಕ್ಕಾಪಟ್ಟೆ ಹಾಟ್ ಆಗಿದೆ. ಸುಹೇಲ್ ನಯ್ಯರ್ ಅವರಿಗೆ ಜೋಡಿಯಾಗಿ ತಮನ್ನಾ ನಟಿಸಿದ್ದಾರೆ. ಲಸ್ಟ್ ಸ್ಟೋರಿ-2 ಸೀರಿಸ್‌ಗಿಂತ ತಮನ್ನಾ ಮತ್ತಷ್ಟು ಹಾಟ್ ಆಗಿ ಕಾಣಸಿಕೊಂಡಿದ್ದಾರೆ. ತಮನ್ನಾ ಹಸಿಬಿಸಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ. ಇದು ನಿಜಕ್ಕೂ ತಮನ್ನಾನೆನಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಅನೇಕರು ಇದು ಓವರ್ ಆಯ್ತು ಎಂದು ಹೇಳುತ್ತಿದ್ದಾರೆ. 

ಬಾಯ್‌ಫ್ರೆಂಡ್ ವಿಜಯ್ ವರ್ಮಾ ಜೊತೆ ತಮನ್ನಾ ಡಿನ್ನರ್‌; ವಿಡಿಯೋ ವೈರಲ್

ತಮನ್ನಾ ಹಸಿಬಿಸಿ ಫೋಟೋಗಳನ್ನು ಶೇರ್ ಮಾಡಿ, ಅಂದು ನೋ ಕಿಸ್ಸಿಂಗ್ ದೃಶ್ಯ ಎಂದು ತಮನ್ನಾ ಹೇಳಿದ್ದರು. ಆದರೆ ಇಂದು ತಮನ್ನಾ ಅವರನ್ನು ಈ ಪರಿ ಹಾಟ್ ಅಂಡ್ ಹಸಿಬಿಸಿ ದೃಶ್ಯಗಳಲ್ಲಿ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ರೀತಿಯ ಪಾತ್ರಗಳು ತಮನ್ನಾ ಅವರಿಗೆ ಬೇಡವಾಗಿತ್ತು ಎಂದು ಹೇಳುತ್ತಿದ್ದಾರೆ. ಅಂದಹಾಗೆ ಲಸ್ಟ್ ಸ್ಟೋರಿ 2 ಸೀರಿಸ್ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತಿದೆ. ಜೀ ಕರ್ದ ಸೀರಿಸ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

NBK108: ಒಂದು ಹಾಡಿಗೆ ಸೊಂಟ ಬಳುಕಿಸಲು 5 ಕೋಟಿ ಕೇಳಿದ್ರಾ ನಟಿ ತಮನ್ನಾ?

ತಮನ್ನಾ ದಕ್ಷಿಣ ಭಾರತದಲ್ಲಿ ಭೋಲಾ ಶಂಕರ, ಜೈಲರ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೊನೆಯದಾಗಿ ತಮನ್ನಾ ಪ್ಲಾನ್ ಎ ಮತ್ತು ಪ್ಲಾನ್ ಬಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇನ್ನು ಕನ್ನಡದ ಸೂಪರ್ ಹಿಟ್ ಲವ್ ಮಾಕ್ಟೇಲ್ ಸಿನಿಮಾದ ತೆಲುಗು ರಿಮೇಕ್ ನಲ್ಲೂ ನಟಿಸಿದ್ದರು. ಆದರೆ ಆ ಸಿನಿಮಾ ಕನ್ನಡದ ಲವ್ ಮಾಕ್ಟೇಲ್ ಅಷ್ಟು ಸಕ್ಸಸ್ ಕಂಡಿಲ್ಲ. ಸದ್ಯ ವೆಬ್ ಸೀರಿಸ್ ಮೂಲಕ ಸದ್ದು ಮಾಡುತ್ತಿದ್ದಾರೆ.  
 

click me!