ಅಪ್ಸರೆ ಐಶ್ ಸೂರ್ಯದೇವ ರಂಜಿತ್ ಪ್ರೀತಿ ನೋಡಿ, ಆನೆ ಅದ್ಕೊಂಡಿದ್ವಿ ಮಗು ಹಿಂದೆ ಬಿದ್ದಿದ್ದಾನೆ ಎಂದ ಫ್ಯಾನ್ಸ್‌

By Roopa Hegde  |  First Published Oct 2, 2024, 9:54 AM IST

ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೇ ಕಾವೇರಿದೆ. ಒಂದ್ಕಡೆ ನರಕ – ಸ್ವರ್ಗದ ಕಿತ್ತಾಟ, ಇನ್ನೊಂದ್ಕಡೆ ನಾಮಿನೇಷನ್ ಜೊತೆ ಪ್ರೀತಿಯಾಟ ಎಲ್ಲರ ಗಮನ ಸೆಳೆದಿದೆ. ಸ್ವರ್ಗದ ಅಪ್ಸರೆ ಮೇಲೆ ನರಕವಾಸಿಗೆ ಮನಸ್ಸಾಗಿದ್ದು, ಮುಂದಿದೆ ಮಜಾ ಎನ್ನುತ್ತಿದ್ದಾರೆ ಫ್ಯಾನ್ಸ್. 
 


ಕನ್ನಡ ಬಿಗ್ ಬಾಸ್ 11 (Kannada Bigg Boss 11) ರ ಮನೆಯಲ್ಲಿ ನರಕ – ಸ್ವರ್ಗಗಳ ದರ್ಶನದ ಜೊತೆ ಪ್ರೀತಿ (love)ಯೊಂದು ಚಿಗುರೊಡೆಯಲು ಶುರುವಾಗಿದೆ. ನರಕದಲ್ಲಿರುವ ಹುಡುಗನಿಗೆ ಸ್ವರ್ಗದ ಅಪ್ಸರೆ ಮೇಲೆ ಮನಸ್ಸಾದಂತಿದೆ. ಈ ನರಕ ನಿವಾಸಿಗಳೇ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿಸುವ ಪ್ರಯತ್ನ ಆರಂಭಿಸಿದ್ದಾರೆ. ಬಿಗ್ ಬಾಸ್ ಶೋನ ಎರಡನೇ ದಿನವೇ ಐಶ್ ಮೇಲೆ ರಂಜಿತ್ (Ranjith) ಗೆ ಲವ್ ಆದಂತಿದೆ. 

ಐಶ್ವರ್ಯ ಸಿಂಧೋಗಿ (Aishwarya Sindhogi), ನರಕವಾಸಿಗಳ ಮುಂದೆ ನಿಂತು ತಿಂಡಿ ತಿನ್ನೋಕೆ ಶುರು ಮಾಡ್ತಾರೆ. ಇದನ್ನು ನೋಡಿದ ರಂಜಿತ್ ಹುಬ್ಬು ಹಾರಿಸ್ತಾರೆ. ತಿಂಡಿ ನೋಡಿನಾ ಇಲ್ಲ ನನ್ನ ನೋಡಿನಾ ಅಂತ ಐಶ್ ಕೇಳ್ತಾರೆ. ಅದಕ್ಕೆ ತಿಂಡಿಗಿಂತ ನೀವೇ ಚೆಂದ ಇದಿರಿ ಎನ್ನುವ ರಂಜಿತ್ ನಗ್ತಾರೆ. ಈ ಮಾತು ಕೇಳಿದ ಐಶ್, ನಿಮಗೆ ತಿಂಡಿ ಬೇಕಾ ಇಲ್ಲ ನಾನಾ ಎನ್ನುತ್ತಾರೆ. ಫಟ್ ಅಂತ, ನೀವು ಅಂತಾರೆ ರಂಜಿತ್. ಇದನ್ನು ಕೇಳಿ ಅಲ್ಲಿದ್ದವರೆಲ್ಲ ನಗ್ತಾರೆ.

Tap to resize

Latest Videos

undefined

ಬಿಗ್​ಬಾಸ್​ಗೆ ಸೆಡ್ಡು ಹೊಡೆಯಲು ಅತಿದೊಡ್ಡ ರಿಯಾಲಿಟಿ ಷೋ ಸಜ್ಜು? ಫ್ಯಾನ್ಸ್​ ತಲೆಗೆ ಹುಳುಬಿಟ್ಟ ಪ್ರೊಮೋ

ಮತ್ತೊಮ್ಮೆ ಐಸ್ ಬರ್ತಾ ಇದ್ದಂತೆತನಾಡೋಕೆ ಬರ್ತಿದ್ದಂತೆ ನರಕದಲ್ಲಿದ್ದ ತುಕಾಲಿ ಸಂತು ಪತ್ನಿ ಮಾನಸಾ ಕಾಲೆಳೆಯೋಕೆ ಶುರು ಮಾಡ್ತಾರೆ. ಯಾರೋ ಇಲ್ಲಿಗೆ ಬಂದ್ರೆ ಮತ್ತ್ಯಾರದ್ದೋ ಮುಖ ಕೆಂಪಾಗುತ್ತೆ ಎನ್ನುತ್ಲೆ ಮಾತು ಶುರುಮಾಡುವ ಮಾನಸಾ ವರಸೆಯನ್ನು ಉಳಿದವರು ಅರ್ಥ ಮಾಡಿಕೊಳ್ತಾರೆ. ಐಶ್ವರ್ಯ ಹಾಗೂ ರಂಜಿತ್ ಬಗ್ಗೆ ನರಕವಾಸಿಗಳು ಸಾಕಷ್ಟು ಮಾತನಾಡ್ತಾರೆ. ನಿಮ್ಮ ಮುಖ ನೋಡಿ ಎಷ್ಟು ಕೆಂಪೇರಿದೆ. ಒಮ್ಮೆ ಕನ್ನಡಿಯಲ್ಲಿ ನೋಡ್ಕೊಳ್ಳಿ ಎನ್ನುವ ನರಕವಾಸಿಗಳ ಮಾತಿಗೆ ಎದ್ದು ನಿಂತು ಮುಖ ನೋಡಿಕೊಳ್ತಾರೆ ರಂಜಿತ್. ಇದೇ ವೇಳೆ ಐಶ್ ಮತ್ತೆ, ನಾನು ಬೇಕಾ ಸ್ವರ್ಗನ ಎನ್ನುತ್ತಾರೆ. ಮತ್ತೆ ಅದೇ ಉತ್ತರ ನೀಡುವ ರಂಜಿತ್, ನೀನು ಎನ್ನುತ್ತಾರೆ. ಅವರ ಮುಖದಲ್ಲಿರುವ ನಾಚಿಕೆ ನಗು ನೋಡಿ ನರಕವಾಸಿಗಳು ಅವರನ್ನು ಹುರಿದುಂಬಿಸ್ತಾರೆ. ನಾಚಿ ನೀರಾಗುವ ಐಶ್ವರ್ಯಗೆ ರಂಜಿತ್ ನೀವು ನನ್ನ ಮನಸ್ಸನ್ನು ಕದ್ದಿದ್ದೀರಿ. ನಾನು ಬೇಕಾ ಅಂತ ಕೇಳಿದ್ದಕ್ಕೆ ಖುಷಿಯಾಯ್ತು ಎನ್ನುತ್ತಾರೆ ರಂಜಿತ್. ರಂಜಿತ್ ಫ್ಲರ್ಟ್ ಮಾಡ್ತಿದ್ರೆ ಅದನ್ನು ಐಶ್ ಎಂಜಾಯ್ ಮಾಡ್ತಿದ್ದಾರೆ.

ಬಿಗ್ ಬಾಸ್ ಮನೆಗೆ ಬಂದ ಎರಡನೇ ದಿನವೇ ಇವರ ಆಟ ಶುರುವಾಗಿದೆ ಅಂತ ವೀಕ್ಷಕರು ಹೇಳ್ತಿದ್ದಾರೆ. ಬಿಗ್ ಬಾಸ್ ಮನೆಗೆ ಆನೆ ಬಂದಿದೆ ಅಂದ್ಕೊಂಡಿದ್ವಿ, ಆದ್ರೆ ರಂಜಿತ್, ಚಿಕ್ಕ ಹುಡುಗಿ ಜೊತೆ ಬಿದ್ದಿದ್ದಾರೆ ಎನ್ನುತ್ತಿದ್ದಾರೆ ಫ್ಯಾನ್ಸ್. ಪ್ರೀತಿ ಕುರುಡು ಯಾರ್ ಮೇಲೆ, ಯಾವಾಗ ಬೇಕಾದ್ರೂ ಹುಟ್ಟಬಹುದು ಎನ್ನುತ್ತಿದ್ದಾರೆ ಅಭಿಮಾನಿಗಳು. ಇದೇ ವೇಳೆ ಬಿಗ್ ಬಾಸ್ 10ರ ಸ್ಪರ್ಧಿ ಸಂಗೀತಾ ಹಾಗೂ ವಿನಯ್ ಮಿಸ್ ಮಾಡಿಕೊಳ್ತಿದ್ದಾರೆ ಅಭಿಮಾನಿಗಳು. 

ಬಿಳಿ ಬಣ್ಣದ ಸೀರೆಯಲ್ಲಿ ಗೊಂಬೆಯಂತೆ ಕಾಣ್ತಿದ್ದ ಐಶ್ವರ್ಯ, ಚಿಕ್ಕ ಹುಡುಗಿಯಂತೆ ಕಾಣ್ತಾರೆ. ಈಗಾಗಲೇ ತಮ್ಮ ಮಾತು, ಬ್ಯೂಟಿಯಿಂದ ಅನೇಕ ಅಭಿಮಾನಿಗಳನ್ನು ಸೆಳೆದಿದ್ದಾರೆ. ಐಶ್ವರ್ಯಗೆ ಅಪ್ಪ ಅಮ್ಮ ಇಲ್ಲ. ಒಂಟಿಯಾಗಿ ಇಡೀ ಜೀವನವನ್ನು ಎದುರಿಸುತ್ತಿರುವ ಅವರ ಧೈರ್ಯಕ್ಕೆ ಮೆಚ್ಚಲೇಬೇಕು. ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಐಶ್ ಗೆ ಈಗ 30 ವರ್ಷ ವಯಸ್ಸು. ರಾಜ್ಯ ಮಟ್ಟದ ಹಾಕಿ ಆಟಗಾರ್ತಿಯಾಗಿದ್ದ ಅವರು ಅನೇಕ ಕ್ರೀಡೆಯನ್ನು ಬಲ್ಲವರು. ಹಾಗಾಗಿ ಅವರಿಗೆ ಬಿಗ್ ಬಾಸ್ ಮನೆ ಟಾಸ್ಕ್ ಸುಲಭವಾಗ್ಬಹುದು.

BBK11: ಸ್ವರ್ಗ ನರಕದ ಮಧ್ಯೆ ಜಗದೀಶ್ ಕನ್ನಿಂಗ್ ಆಟ, ನರಕವಾಸಿಗಳಿಗೆ ತಿಳಿಯಿತು ವಕೀಲರ ಗುಟ್ಟು!

ಇನ್ನು ಶನಿ ಸೀರಿಯಲ್ ನಲ್ಲಿ ಸೂರ್ಯನಾಗಿ ಮಿಂಚಿದ್ದ ರಂಜಿತ್, ಒಳ್ಳೆ ಪರ್ಸನಾಲಿಟಿ ಹೊಂದಿದ್ದಾರೆ. ಮಾಡೆಲ್ ರೀತಿ ಕಾಣುವ ಅವರು, ಮೀರಾ ಮಾಧವ, ಅಮೃತವರ್ಷಿಣಿ ಸೇರಿದಂತೆ ಕೆಲ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಸ್ಯಾಂಡಲ್ವುಡ್ ಸಿನಿಮಾಗಳಲ್ಲೂ ರಂಜಿತ್ ಮಿಂಚಿದ್ದಾರೆ. ಅವರು ಶಿವಾರ್ಜುನ, ಭರಾಟೆ, ಸೀತಾ ರಾಮ ಕಲ್ಯಾಣ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಸ್ಪೋರ್ಟ್ಸ್ ನಲ್ಲೂ ಮುಂದಿದ್ದಾರೆ. ಈಗ ಬಿಗ್ ಬಾಸ್ ನರಕಕ್ಕೆ ಹೋಗಿರುವ ಅವರು, ಅಲ್ಲಿ ಐಶ್ ನೋಡಿ ಬ್ಲಶ್ ಆಗ್ತಿದ್ದಾರೆ. 

click me!