ಹಾರ್ಟ್ ಸರ್ಜರಿ ಬಳಿಕ ರಜನಿಕಾಂತ್ ಆರೋಗ್ಯ ಹೇಗಿದೆ? ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ!

By Chethan Kumar  |  First Published Oct 1, 2024, 9:54 PM IST

ದಿಢೀರ್ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾದ ಸೂಪರ್ ಸ್ಟಾರ್ ರಜನಿಕಾಂತ್‌ಗೆ ಸರ್ಜರಿ ಮಾಡಿ ಸ್ಟಂಟ್ ಅಳವಡಿಸಲಾಗಿದೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲಿದ ನಟ ಇದೀಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಜರಿ ಹಾಗೂ ನಟನ ಆರೋಗ್ಯ ಕುರಿತು ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.


ಚೆನ್ನೈ(ಅ.01) ಸೂಪರ್ ಸ್ಟಾರ್ ರಜನಿಕಾಂತ್ ಸೆಪ್ಟೆಂಬರ್ 30 ರಂದು ದಿಢೀರ್ ಅಸ್ವಸ್ಥಗೊಂಡು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ವೇಳೆ ರಜನಿಕಾಂತ್‌ಗೆ ಹೃದಯ ಸಂಬಂಧಿ ಸಮಸ್ಯೆ ಇರುವುದು ಪತ್ತೆಯಾಗಿದೆ. ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಜನಿಕಾಂತ್‌ಗೆ ಎಂಡೋವಾಸ್ಕುಲರ್ ಚಿಕಿತ್ಸೆ ಮೂಲಕ ಸ್ಟಂಟ್ ಅಳವಡಿಕೆ ಮಾಡಲಾಗಿದೆ. ಟ್ರಾನ್ಸ್‌ಕ್ಯಾಥಟರ್ ಚಿಕಿತ್ಸೆ ಮೂಲಕ ಹೃದಯದಲ್ಲಿನ ಊತಕ್ಕೆ ಚಿಕಿತ್ಸೆ ನೀಡಲಾಗಿದೆ ಎಂದು ಅಪೋಲೋ ಆಸ್ಪತ್ರೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್‌ನಲ್ಲಿ ಉಲ್ಲೇಖಿಸಲಾಗಿದೆ.

ರಜನಿಕಾಂತ್‌ಗೆ ಯಶಸ್ವಿಯಾಗಿ ಚಿಕಿತ್ಸೆ ಮಾಡಲಾಗಿದೆ. ಹೃದಯಲ್ಲಿ ಕಂಡು ಬಂದ ರಕ್ತನಾಳಗಳ ಊತಕ್ಕೆ ಸ್ಟಂಟ್ ಅಳವಡಿಕೆ ಮಾಡಲಾಗಿದೆ. ಸದ್ಯ ರಜನಿಕಾಂತ್ ಆರೋಗ್ಯ ಸ್ಥಿರವಾಗಿದೆ.  ಸರ್ಜರಿ ಮಾಡದೆ ಟ್ರಾನ್ಸ್‌ಕ್ಯಾಥಟರ್ ಚಿಕಿತ್ಸೆ ಮೂಲಕ ಸ್ಟಂಟ್ ಅಳವಡಿಸಲಾಗಿದೆ. ಈ ಮೂಲಕ ರಜನಿಕಾಂತ್ ಆಪ್ತರು, ಅಭಿಮಾನಿಗಳಿಗೆ ಮಾಹಿತಿ ನೀಡುತ್ತಿದ್ದೆವೆ. ಈ ಚಿಕಿತ್ಸೆ ವೈದ್ಯರ ರಜನಿಕಾಂತ್ ಆರೋಗ್ಯ ಗಮದಲ್ಲಿಟ್ಟುಕೊಂಡು ಯಸಸ್ವಿಯಾಗಿ ನೀಡಿದ್ದಾರೆ. ರಜನಿಕಾಂತ್ ಸದ್ಯ ಚೇತರಿಸಿಕೊಳ್ಳುತ್ತಿದ್ದು, ಇನ್ನೆರಡು ದಿನದಲ್ಲಿ ಬಿಡುಗಡೆಯಾಗಲಿದ್ದಾರೆ ಎಂದು ಹೆಲ್ತ್ ಬುಲೆಟಿನ್‌ನಲ್ಲಿ ಉಲ್ಲೇಖಿಸಲಾಗಿದೆ.

Tap to resize

Latest Videos

undefined

Breaking News: ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು

ಅಪೋಲೋ ಆಸ್ಪತ್ರೆಯ ಹಿರಿಯ ಹೈದ್ರೋಗ ತಕ್ಷ ಡಾ. ಸಾಯಿ ಸತೀಶ್ ನೇತೃತ್ವದಲ್ಲಿ ಸ್ಟಂಟ್ ಅಳವಡಿಕೆ ಮಾಡಲಾಗಿದೆ. 73ರ ಹರೆಯದ ರಜನಿಕಾಂತ್ ತಮ್ಮ ಸಿನಿಮಾ, ನಟನೆಯಲ್ಲಿ ಸದಾ ಬ್ಯೂಸಿಯಾಗಿದ್ದಾರೆ. ರಜನಿಕಾಂತ್ 2 ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಅನ್ನೋ ಖಚಿತ ಮಾಹಿತಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳ ಆತಂಕ ತಗ್ಗಿದೆ. ಸಮಾಧಾನ ಕಾಣಿಸುತ್ತಿದೆ. ಕಾರಣ ರಜನಿಕಾಂತ್ ಆಸ್ಪತ್ರೆ ದಾಖಲಾಗುತ್ತಿದ್ದಂತೆ ಅಭಿಮಾನಿಗಳು ಚೆನ್ನೈನ ಅಪೊಲೋ ಆಸ್ಪತ್ರೆಯತ್ತ ದೌಡಾಯಿಸಿದ್ದರು. ಹಲವರು ಪೂಜೆ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡಿದ್ದರು.

ಜೈಲರ್ ಚಿತ್ರದ ಯಶಸ್ವಿನ ಬಳಿಕ ರಜನಿಕಾಂತ್ ವೆಟ್ಟೈಯನ್ ಚಿತ್ರದ  ಶೂಟಿಂಗ್‌ನಲ್ಲಿ ಮುಗಿಸಿ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಸೇರಿದಂತೆ ಭಾರಿ ತಾರಗಣದ ಸಮಾಗಮವಾಗಿದೆ. ಅಕ್ಟೋಬರ್ 10 ರಂದು ಈ ಚಿತ್ರ ಬಿಡುಗಡೆ ಕಾಣುತ್ತಿದೆ. ಚಿತ್ರದ ಪ್ರಮೋಶನ್ ನಡೆಯುತ್ತಿರುವ ಬೆನ್ನಲ್ಲೇ ರಜನಿಕಾಂತ್ ಆಸ್ಪತ್ರೆ ದಾಖಲಾಗಿರುವುದು ಆತಂಕ ಹೆಚ್ಚಿಸಿತ್ತು. 
 

click me!