ಕಾಲಿಗೆ ಗಂಭೀರ ಗಾಯವಾದ್ರೂ ನೋರಾ ಫತೇಹಿ ಹಾಟ್​ ಐಟಂ ಡಾನ್ಸ್!​ ಕಣ್​ ಕಣ್​ ಬಿಟ್ಟು ನೋಡಿದ ಫ್ಯಾನ್ಸ್​

By Suchethana D  |  First Published Oct 1, 2024, 9:35 PM IST

ಕಾಲಿಗೆ ಗಂಭೀರ ಗಾಯವಾದ್ರೂ ನೋರಾ ಫತೇಹಿ ಐಫಾ ಅವಾರ್ಡ್​ ಫಂಕ್ಷನ್​ನಲ್ಲಿ ಹಾಟ್​ ಐಟಂ ಡಾನ್ಸ್ ಮಾಡಿದ್ದಾರೆ. ವಿಡಿಯೋ ವೈರಲ್​ ಆಗಿದ್ದು, ಅಭಿಮಾನಿಗಳು ಕಣ್​ ಕಣ್​ ಬಿಟ್ಟು ನೋಡುತ್ತಿದ್ದಾರೆ. 
 


 ಬಾಲಿವುಡ್​ನ ಹಾಟ್​ ಬ್ಯೂಟಿ ಎಂದೇ ಫೇಮಸ್​ ಆಗಿರುವ ನಟಿ ನೋರಾ ಫತೇಹಿ. ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಹಾಟ್​ನೆಸ್​ನಿಂದಲೇ ಫೇಮಸ್​ ಆಗಿದ್ದಾರೆ ಈಕೆ.  ಅಷ್ಟಕ್ಕೂ ನೋರಾ ಫತೇಹಿ ಐಟಂ ಗರ್ಲ್​ ಎಂದೇ ಫೇಮಸ್ಸು. ಈಕೆ ನೃತ್ಯ ಮಾಡುವುದಕ್ಕೆ ನಿಂತರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುವುದು ಇದೆ.  ಅಂದಹಾಗೆ ನಟಿ, ಯಾವುದೇ ನೃತ್ಯ ತರಬೇತಿ ಪಡೆದಿಲ್ಲ. ಸ್ವಯಂ ಅಭ್ಯಾಸದ ಮೂಲಕ ತಮ್ಮ ಅದ್ಭುತ ಡ್ಯಾನ್ಸರ್ ಆಗಿ ಬೆಳೆದಿದ್ದಾರೆ. ಇಂದು ಅವರ ನೃತ್ಯವನ್ನು ಮಾಧುರಿ ದೀಕ್ಷಿತ್ ಮತ್ತು ಮಲೈಕಾ ಅರೋರಾ ಅವರಂತಹ ನಟಿಯರೊಂದಿಗೆ ಹೋಲಿಸಲಾಗುತ್ತದೆ. ಇವರು ಸೊಂಟ ಕುಣಿಸುತ್ತಾ ಬೆಲ್ಲಿ ಡ್ಯಾನ್ಸ್​ ಮಾಡಿದರೆ ಕಣ್​ ಕಣ್​ ಬಿಟ್ಟು ನೋಡಬೇಕು ಹಾಗಿರುತ್ತದೆ!

ಕೆಲ ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ನಟಿ ತಮ್ಮ ಮುಂಬರುವ ಚಿತ್ರ ಮಟ್ಕಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಅವಘಡ ಸಂಭವಿಸಿ ಪಾದ ಮತ್ತು ಕಾಲಿಗೆ ತೀವ್ರ ಗಾಯವಾಗಿತ್ತು. ಗಾಯಗಳನ್ನು ಸರಿಪಡಿಸಲು ನೋರಾಗೆ ಎರಡು   ರೆಸ್ಟ್​ ಹೇಳಲಾಗಿತ್ತು.  ಫಿಸಿಯೋಥೆರಪಿಸ್ಟ್ ಜೊತೆಗೆ  ವೀಡಿಯೊವನ್ನು ಹಂಚಿಕೊಂಡಿದ್ದ ನಟಿ,  ವಾರಗಳ ಚಿಕಿತ್ಸೆ ಪಡೆದಿದ್ದೇನೆ.  ನನ್ನ ದೇಹದಲ್ಲಿ   ಕೆಜಿಗಟ್ಟಲೆ ಅರಿಶಿನ ಸೇರಿದಂತೆ ಪ್ರಪಂಚದ ಎಲ್ಲಾ ನೈಸರ್ಗಿಕ ಉತ್ಪನ್ನಗಳು ಸೇರಿವೆ. ಸದ್ಯ ಸುಧಾರಿಸಿಕೊಳ್ಳುತ್ತಿದ್ದೇನೆ ಎಂದಿದ್ದರು. ಆದರೆ ಇದರ ನಡುವೆಯೇ, ಐಫಾ ಅವಾರ್ಡ್​ ಫಂಕ್ಷನ್​ನಲ್ಲಿ ಹಾಟ್​ ಡಾನ್ಸ್​ ಮಾಡುವ ಮೂಲಕ ವೇದಿಕೆಗೆ ಕಿಚ್ಚು ಹೊತ್ತಿಸಿದ್ದಾರೆ. ಗಾಯದ ನಡುವೆಯೂ ಈ ಪರಿಯ ಡಾನ್ಸ್​ ನೋಡಿ ಉಫ್​ ಎಂದಿದ್ದಾರೆ ಫ್ಯಾನ್ಸ್​.

Tap to resize

Latest Videos

undefined

ಗೆಳೆಯನ ಜೊತೆ ಖ್ಯಾತ ನಟಿಯ ಬೆತ್ತಲು ವಿಡಿಯೋ ವೈರಲ್‌: ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿ

ಅಂದಹಾಗೆ, ಬಾಲಿವುಡ್‌ನಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿರುವ ನೋರಾ,  ಮೂಲತಃ ಕೆನಡಾದವರು. ಹಿಂದಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರು ನರ್ತಿಸಿದ ಹಾಡುಗಳು ಯೂಟ್ಯೂಬ್‌ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಾಣುತ್ತವೆ. ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ನೋರಾ ನಟಿಸಿದ್ದಾರೆ.  ಬಾಹುಬಲಿ ಸಿನಿಮಾದ 'ಮನೋಹರಿ..' ಹಾಡಿನ ಮೂಲಕ ನೋರಾಗೆ ದೊಡ್ಡ ಬ್ರೇಕ್‌ ಸಿಕ್ಕಿತ್ತು. ಕನ್ನಡ ಕೆಡಿ ಸಿನಿಮಾದಲ್ಲಿಯೂ ನೋರಾ ಫತೇಹಿ ಕಾಣಿಸಿಕೊಳ್ಳಲಿದ್ದಾರೆ. ಇವೆಲ್ಲವುಗಳ ನಡುವೆಯೇ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಜೊತೆ ನಟಿಯ ಹೆಸರು ಥಳಕು ಹಾಕಿಕೊಂಡಿದೆ. ಆರ್ಯನ್​ಗಿಂತ ಐದು ವರ್ಷ ದೊಡ್ಡವಳಾಗಿರುವ ನೋರಾ, ಆರ್ಯನ್​ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹಲವು ಫೋಟೋಗಳು ವೈರಲ್​ ಆಗಿವೆ. 

   ‘ಬಾಹುಬಲಿ: ದಿ ಬಿಗಿನಿಂಗ್’, ‘ಕಿಕ್ 2’ ನಂತಹ ಸೂಪರ್​ಹಿಟ್​ ಚಿತ್ರಗಳನ್ನು ನೀಡಿ, ಇದೀಗ ದೊಡ್ಡ ಸ್ಟಾರ್​ ಎನಿಸಿಕೊಂಡಿರುವ ನೋರಾ, ಈ ನಟಿ ‘ಬಿಗ್ ಬಾಸ್ 9’ ಮತ್ತು ‘ಝಲಕ್ ದಿಖ್ಲಾ ಜಾ’ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿದ್ದರು. ‘ಸತ್ಯಮೇವ ಜಯತೆ’ ಚಿತ್ರದ ‘ದಿಲ್ಬರ್’ ಹಾಡಿನಲ್ಲಿ ತಮ್ಮ ಅದ್ಭುತ ನೃತ್ಯದಿಂದ ಮನ ಗೆದ್ದರು. ಮೊದಲೇ ಹೇಳಿದಂತೆ ಬಾರ್​ ಗರ್ಲ್​ ಆಗಿದ್ದವರು. ಬಾಲಿವುಡ್​ನಲ್ಲಿ ಬಣ್ಣ ಹಚ್ಚಲು ಭಾರತಕ್ಕೆ ಬಂದಿದ್ದ ನಟಿ, ಬರುವಾಗ ತಂದದ್ದು ಕೇವಲ 5 ಸಾವಿರ ರೂಪಾಯಿಗಳು ಮಾತ್ರ. ಇದೀಗ ಅವರ ಒಟ್ಟೂ ಆಸ್ತಿ 50 ಕೋಟಿಗೂ ಅಧಿಕ ಎನ್ನಲಾಗುತ್ತದೆ. 

ಯಾರ ವಿರೋಧಕ್ಕೂ ಕ್ಯಾರೇ ಅನ್ನದೇ ಮಂಗಳಮುಖಿಯನ್ನು ಮದ್ವೆಯಾದ ವ್ಯಕ್ತಿ: ಲವ್​ ಸ್ಟೋರಿಯೇ ಕುತೂಹಲ

click me!