ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ಹೋಳಿ ಸಂದರ್ಭದಲ್ಲಿ ರೋಡಿಗಿಳಿದ ಅವರ ವಿಡಿಯೋ ವೇಗವಾಗಿ ವೈರಲ್ ಆಗ್ತಿದೆ.
ಭಾರತದಾದ್ಯಂತ ಹೋಳಿ (Holi) ಹಬ್ಬದ ಸಂಭ್ರಮ ಮನೆ ಮಾಡಿದೆ. ಜನರು ಬಹಳ ಉತ್ಸಾಹದಿಂದ ಹಬ್ಬವನ್ನು ಆಚರಿಸ್ತಿದ್ದಾರೆ. ಜನರು ಪರಸ್ಪರ ಬಣ್ಣ ಹಚ್ಕೊಂಡು ಹೋಳಿ ಎಂಜಾಯ್ ಮಾಡ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಹೋಳಿ ಹಬ್ಬವನ್ನು ಆಚರಿಸಿಕೊಳ್ತಿದ್ದು, ಅವ್ರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಈ ಮಧ್ಯೆ ಬಾಲಿವುಡ್ ಹಾಟ್ ಶೆರ್ಲಿನ್ ಚೋಪ್ರಾ (Bollywood hot Sherlyn Chopra) ಹೋಳಿಯ ಅನೇಕ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಬ್ಯಾಕ್ ಟು ಬ್ಯಾಕ್ ಪೋಸ್ಟ್ ಆಗ್ತಿದೆ.
ಸುದ್ದಿ ಮಾಡೋಕೆ ಸಣ್ಣ ಅವಕಾಶ ಸಿಕ್ಕಿದ್ರೂ ಶೆರ್ಲಿನ್ ಚೋಪ್ರಾ ಬಿಡೋದಿಲ್ಲ. ಇನ್ನು ಹೋಳಿಯಂತ ಹಬ್ಬವನ್ನು ಮಿಸ್ ಮಾಡಿಕೊಳ್ತಾರಾ? ಶೆರ್ಲಿನ್ ಎರಡು ದಿನಗಳಿಂದ ಬಣ್ಣದಲ್ಲಿ ಮಿಂದೇಳುತ್ತಿದ್ದಾರೆ. ನಿನ್ನೆ ಮನೆ ಮುಂದೆ ಫ್ಯಾನ್ಸ್ ಜೊತೆ ಹೋಳಿ ಆಚರಿಸಿಕೊಂಡಿದ್ದ ಶೆರ್ಲಿನ್ ಇಂದು ರಸ್ತೆಗಿಳಿದಿದ್ದಾರೆ. ರಸ್ತೆ ಮಧ್ಯೆ ಹೋಳಿ ಆಡಿದ್ದಾರೆ. ನೀರಿನಿಂದ ತುಂಬಿದ್ದ ಬಲೂನ್ ಒಡೆದು ಖುಷಿ ಪಟ್ಟಿದ್ದಾರೆ. ರಸ್ತೆಯಲ್ಲಿ ಶೆರ್ಲಿನ್ ಪಾಪರಾಜಿಗಳಿಗೆ ಫೋಸ್ ನೀಡ್ತಾ, ಹೋಳಿ ಆಡೋದನ್ನು ನೋಡ್ಬಹುದು.
ಫ್ಯಾನ್ಸ್ ಎದುರು ಆ ಹುಡುಗನಿಗೆ 'ಏಯ್ ಮನೆ ಹಿಂದೆ ಏನೋ ಇದೆ' ಎಂದು ಪುನೀತ್ ಗದರಿದ್ದು ಯಾಕೆ; ವಿಡಿಯೋ ವೈರಲ್
ಪಾಪರಾಜಿ ತಲೆಗೆ ನೀರಿನ ಬಲೂನ್ ಒಡೆಯುವ ಶೆರ್ಲಿನ್, ಮೈಗೆ ಬಣ್ಣ ಹಚ್ಚಿಕೊಂಡಿಲ್ಲ. ದಾರಿಯಲ್ಲಿ ಶೆರ್ಲಿನ್ ಮಸ್ತಿ ನೋಡ್ತಿದ್ದಂತೆ ಫ್ಯಾನ್ಸ್ ಮುತ್ತಿಕೊಂಡಿದ್ದಾರೆ. ಶೆರ್ಲಿನ್ ಮುಖಕ್ಕೆ ಬಣ್ಣ ಹಚ್ಚುವ ಪ್ರಯತ್ನ ನಡೆಸಿದ್ದಾರೆ. ಶೆರ್ಲಿನ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಒಬ್ಬರಾದ್ಮೇಲೆ ಒಬ್ಬರಂತೆ ಶೆರ್ಲಿನ್ ಹತ್ತಿರ ಬಂದಿದ್ದು, ಇದನ್ನು ನೋಡಿ ಶೆರ್ಲಿನ್ ಕೂಗಿಕೊಂಡಿದ್ದಾಳೆ. ಹಾಟ್ ಡ್ರೆಸ್ ಧರಿಸಿದ್ದ ಶೆರ್ಲಿನ್ ನನ್ನನ್ನು ಟಚ್ ಮಾಡ್ಬೇಡಿ, ಎಲ್ಲರೂ ಹತ್ತಿರ ಬರ್ತಿದ್ದಾರೆ ನೋಡಿ ಸರ್, ಇವ್ರೆಲ್ಲ ನನ್ನನ್ನು ಟಚ್ ಮಾಡೋಕೆ ನೋಡ್ತಿದ್ದಾರೆ ಅಂತ ಪಾಪರಾಜಿಗಳ ಸಹಾಯ ಪಡೆದಿದ್ದಾರೆ. ಪಾಪರಾಜಿಗಳು, ಶೆರ್ಲಿನ್ ಸಹಾಯ ಮಾಡಿದ್ದು, ಯಂಗ್ ಹುಡುಗ್ರನ್ನು ಶೆರ್ಲಿನ್ ನಿಂದ ದೂರ ಕಳಿಸಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೂರಾರು ಮಂದಿ ಈ ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ. ಬಹುತೇಕರು ಶೆರ್ಲಿನ್ ವಿರುದ್ಧ ಕೆಂಡ ಕಾರಿದ್ದಾರೆ. ಇಂಥ ಡ್ರೆಸ್ನಲ್ಲಿ ಬೀದಿಗೆ ಬಂದ್ರೆ ಜನರು ಬಿಡ್ತಾರಾ ಎನ್ನುವ ಪ್ರಶ್ನೆ ಕೇಳಿದ್ದಾರೆ. ನಟನೆ ಬರೋದಿಲ್ಲ ಸರಿ, ನಾಚಿಕೆ ಕೂಡ ಇಲ್ವ ಎಂದು ಮತ್ತೊಬ್ಬರು ಕೇಳಿದ್ದಾರೆ. ಮನೆಯಿಂದ ಹೊರಗೆ ಬರುವಾಗ ಅರೆಬರೆ ಡ್ರೆಸ್ ಹಾಕಿಕೊಂಡು ಬರೋದಲ್ಲದೆ, ಅವರು ಟಚ್ ಮಾಡ್ತಾರೆ ಅಂತ ಆರೋಪ ಮಾಡೋದು ಎಷ್ಟು ಸರಿ ಎಂದು ಇನ್ನೊಬ್ಬರು ಕೇಳಿದ್ದಾರೆ.
ʼನಿಮಗೆಲ್ಲ ಹಾಲು ಕುಡಿದಷ್ಟು ಖುಷಿ ಆಗಿರಬಹುದು, ನಾನ್ ಮದುವೆ ಆಗಲ್ಲʼ; ಕಿಪ್ಪಿ ಕೀರ್ತಿಗೆ ಬ್ರೇಕಪ್
ನಿನ್ನೆ ಮನೆ ಮುಂದೆ ಶೆರ್ಲಿನ್ ಹೋಳಿ ಆಚರಿಸಿಕೊಂಡಿದ್ದರು. ಬಿಳಿ ಡ್ರೆಸ್ ಧರಿಸಿ ಮನೆ ಹೊರಗೆ ಬಂದಿದ್ದ ಶೆರ್ಲಿನ್, ಅಭಿಮಾನಿಗಳಿಗೆ ಬಣ್ಣ ಹಚ್ಚಲು ಅವಕಾಶ ನೀಡಿದ್ದರು. ಅಭಿಮಾನಿ ಹೊಟ್ಟೆಗೆ ಶೆರ್ಲಿನ್ ಬಣ್ಣ ಹಚ್ಚಿದ್ದರು. ನಂತ್ರ ಅಭಿಮಾನಿ ಶೆರ್ಲಿನ್ ಕತ್ತಿಗೆ ಬಣ್ಣ ಹಚ್ಚಿದ್ದ. ಇಷ್ಟವಿಲ್ಲದೆ ಹೋದ್ರೂ ಶೆರ್ಲಿನ್ ಅಭಿಮಾನಿಯಿಂದ ಬಣ್ಣ ಹಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರ್ತಾರೆ ನಟಿ ಶೆರ್ಲಿನ್. ತುಂಡುಡುಗೆ ಅವರಿಗೆ ಹೊಸದೇನಲ್ಲ. ಸಿನಿಮಾದಲ್ಲಿ ಆಫರ್ ಸಿಕ್ಕಿಲ್ಲ ಅಂದ್ರೂ ಸದಾ ಫೋಟೋ, ವಿಡಿಯೋ ವೈರಲ್ ಆಗೋ ನಟಿಯಲ್ಲಿ ಶೆರ್ಲಿನ್ ಮೊದಲ ಸ್ಥಾನದಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಅಭಿಮಾನಿಗೆ ತನ್ನನ್ನು ಎತ್ತಿಕೊಳ್ಳುವಂತೆ ದುಂಬಾಲು ಬಿದ್ದಿದ್ದ ಶೆರ್ಲಿನ್ ಚೋಪ್ರಾ, ದೇಹದ ಬಹುತೇಕ ಭಾಗಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಚಿಕ್ಕ ಮಕ್ಕಳು ಕಂಡ್ರೆ ಅವರನ್ನು ಎತ್ತಿಕೊಂಡು ಫೋಟೋಕ್ಕೆ ಫೋಸ್ ನೀಡುವ ಶೆರ್ಲಿನ್ ಇನ್ನೂ ಮದುವೆ ಆಗಿಲ್ಲ. 40 ಕೋಟಿಗೂ ಹೆಚ್ಚು ಆಸ್ತಿಯನ್ನು ಶೆರ್ಲಿನ್ ಹೊಂದಿದ್ದಾರೆ.