ತಮನ್ನಾ-ವಿಜಯ್ ವರ್ಮಾ ಬ್ರೇಕಪ್ ಸುಳ್ಳಾ? ಹೋಳಿ ಸಂಭ್ರಮದಲ್ಲಿ ಪ್ರಣಯ ಪಕ್ಷಿಗಳ ವಿಡಿಯೋ ವೈರಲ್!

Tamannaah Bhatia Vijay Varma holi celebration viral video: ನಟಿ ತಮನ್ನಾ ಮತ್ತು ವಿಜಯ್ ವರ್ಮಾ ಬ್ರೇಕ್ಅಪ್ ಸುದ್ದಿ ವೈರಲ್ ಆದ ಬೆನ್ನಲ್ಲೇ, ಇಬ್ಬರೂ ಹೋಳಿ ಆಚರಿಸುತ್ತಿರುವ ವಿಡಿಯೋ ಸದ್ದು ಮಾಡಿದೆ. ರವೀನಾ ಟಂಡನ್ ಆಯೋಜಿಸಿದ್ದ ಹೋಳಿ ಆಚರಣೆಯಲ್ಲಿ ಇಬ್ಬರೂ ಭಾಗವಹಿಸಿದ್ದು, ಬ್ರೇಕಪ್ ವದಂತಿ ಸುಳ್ಳಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.

tamannaah bhatia vijay varma in holi celebrations amid breakup rumours watch video goes viral instagram rav

Tamannaah Bhatia Vijay Varma holi celebration viral video: ನಟಿ ತಮನ್ನಾ ಮತ್ತು ಬಾಲಿವುಡ್ ನಟ ವಿಜಯ್ ವರ್ಮಾ ಅವರ ಬ್ರೇಕ್ಅಪ್ ಆದ ಬಗ್ಗೆ ಬಿಸಿಬಿಸಿ ಸುದ್ದಿ ಬಿತ್ತರವಾದ ನಂತರ, ಇದೀಗ ಇಬ್ಬರೂ ಹೋಳಿ ಆಚರಿಸುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

ಕಳೆದ ಕೆಲವು ದಿನಗಳಿಂದ ಮಿಲ್ಕಿ ಬ್ಯೂಟಿ ತಮನ್ನಾ ಮತ್ತು ಬಾಲಿವುಡ್ ನಟ ವಿಜಯ್ ವರ್ಮಾ ನಡುವೆ ಬ್ರೇಕ್ ಅಪ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿರುವುದು ಗೊತ್ತೇ ಇದೆ. ಆದರೆ ಬ್ರೇಕ್ ಸುದ್ದಿ ಬೆನ್ನಲ್ಲೇ ಹೋಳಿ ಆಚರಣೆಯ ಸಂದರ್ಭದಲ್ಲಿ ಇಬ್ಬರೂ ಸುತ್ತಾಡುತ್ತಿರುವುದು ಮತ್ತೆ ಸದ್ದು ಮಾಡಿದೆ. ಬಾಲಿವುಡ್ ನಟಿ ರವೀನಾ ಟಂಡನ್ ಆಯೋಜಿಸಿದ್ದ ಹೋಳಿ ಆಚರಣೆಯಲ್ಲಿ ಇಬ್ಬರೂ ಭಾಗವಹಿಸಿದ್ದಾರೆ. 

Latest Videos

ಪ್ರತ್ಯೇಕವಾಗಿ ಆಗಮಿಸಿದ ಜೋಡಿ:

ಹಿಂದೆ ಅವರು ಪ್ರೀತಿಸುತ್ತಿದ್ದಾಗ, ಪ್ರತಿಯೊಂದು ಪಾರ್ಟಿ ಮತ್ತು ಕಾರ್ಯಕ್ರಮಕ್ಕೂ ಒಟ್ಟಿಗೆ ಹೋಗುತ್ತಿದ್ದರು. ಆದರೆ ಬ್ರೇಕ್ ಬಳಿಕ ಇದೇ ಮೊದಲ ಬಾರಿಗೆ ರವೀನಾಳ ಮನೆಗೆ ಪ್ರತ್ಯೇಕವಾಗಿ ಬಂದಿದ್ದಾರೆ. ಅವರು ಛಾಯಾಗ್ರಾಹಕರನ್ನು ಸ್ವಾಗತಿಸಿ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದರು. ಅದ್ಯಾಗೂ ಬ್ರೇಕಪ್ ಸಂಬಂಧಿಸಿದ ಸುದ್ದಿಗೆ ಇಬ್ಬರೂ ಇನ್ನೂ ಪ್ರತಿಕ್ರಿಯಿಸಿಲ್ಲ. ಈ ಸಂದರ್ಭದಲ್ಲಿ, ಇಬ್ಬರೂ ಒಂದೇ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಆಸಕ್ತಿ ಇತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ತಮನ್ನಾ ಭಾಟಿಯಾ ಹೊಸ ಫೋಟೋಗಳು ವೈರಲ್; ಮಿಲ್ಕಿ ಬ್ಯೂಟಿಯಾ ಸೌಂದರ್ಯ ಕಂಡು 'ಅಪ್ಸರೆ' ಎಂದ ಫ್ಯಾನ್ಸ್!

ತಮನ್ನಾ-ವಿಜಯ್ ವರ್ಮಾ ಬ್ರೇಕಪ್ ವದಂತಿ ಸುಳ್ಳಾ? 

2023 ರಲ್ಲಿ ಬಿಡುಗಡೆಯಾದ 'ಲಸ್ಟ್ ಸ್ಟೋರೀಸ್ 2' ವೆಬ್ ಸರಣಿಯನ್ನು ಚಿತ್ರದ ವೇಳೆ ತಮನ್ನಾ ವಿಜಯ್ ವರ್ಮಾ ಪರಸ್ಪರ ಪ್ರೀತಿಸುತ್ತಿದ್ದರು. ಈ ಸರಣಿಯ ಬಿಡುಗಡೆಯ ಮೊದಲು, ಅವರು ಗೋವಾದಲ್ಲಿ ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸಿದ್ದರು. ನಂತರ, ಒಂದು ಸಂದರ್ಶನದಲ್ಲಿ, ತಮನ್ನಾ ವಿಜಯ್ ವರ್ಮಾ ಅವರೊಂದಿಗಿನ ತಮ್ಮ ಪ್ರೇಮ ಸಂಬಂಧವನ್ನು ಓಪನ್ ಆಗಿ ಹೇಳಿಕೊಂಡಿದ್ದರು. ಅಂದಿನಿಂದ ಜೋಡಿ ಎಲ್ಲಿಗೆ ಹೋದರೂ ಕೈ ಹಿಡಿದು ಜೊತೆಯಾಗಿಯೇ ಹೋಗುತ್ತಿದ್ದರು. ಅವರು  ಸುಮಾರು ಎರಡು ವರ್ಷಗಳ ಕಾಲ ಒಟ್ಟಿಗೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಈ ವರ್ಷ ಮದುವೆಯಾಗಲಿದ್ದಾರೆಂಬ ಸುದ್ದಿ ಹಬ್ಬಿದ್ದ ಬೆನ್ನಲ್ಲೇ ಬ್ರೇಕಪ್ ಆಗುತ್ತಿರುವ ಸುದ್ದಿಯೂ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಕಳೆದ ಕೆಲವು ದಿನಗಳಿಂದ ಬಾಲಿವುಡ್‌ನಲ್ಲಿ 'ಪ್ರಣಯ ಪಕ್ಷಿಗಳು' ಎಂಬ ಹಣೆಪಟ್ಟಿ ಗಳಿಸಿರುವ ಈ ಇಬ್ಬರ ನಡುವಿನ ಸಂಬಂಧ ಮುರಿದುಬಿದ್ದಿದೆ ಎಂಬ ಸುದ್ದಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮದುವೆ ಮತ್ತು ವೃತ್ತಿಜೀವನದ ಬಗ್ಗೆ ಇಬ್ಬರಿಗೂ ಭಿನ್ನಾಭಿಪ್ರಾಯಗಳಿದ್ದವು, ಅದಕ್ಕಾಗಿಯೇ ಅವರು ಬೇರೆಯಾಗಲು ನಿರ್ಧರಿಸಿದರು ಎಂಬ ಮಾತು ಬಿ-ಟೌನ್‌ನಲ್ಲಿ ಕೇಳಿಬರುತ್ತಿದೆ. ಈ ನಡುವೆ ಇದೀಗ ಹೋಳಿ ಹಬ್ಬದಂದು ಇಬ್ಬರೂ ಭಾಗಿಯಾಗಿ ಅಚ್ಚರಿ ಮೂಡಿಸಿದ್ದಾರೆ.

 

click me!