ಮೂವರು ಫ್ರೆಂಡ್ಸ್​ ಸೇರಿ 80 ಮಾರ್ಕ್ಸ್! ನಟಿ ಶಾನ್ವಿ ಎದುರು ಗೋಲ್ಡನ್​ ಸ್ಟಾರ್​ ಗಣೇಶ್​ ಹೇಳೇಬಿಟ್ರು ಆ ಗುಟ್ಟು-ನಟಿ ಸುಸ್ತು!

Published : Mar 14, 2025, 08:39 PM ISTUpdated : Mar 14, 2025, 09:13 PM IST
ಮೂವರು ಫ್ರೆಂಡ್ಸ್​ ಸೇರಿ 80 ಮಾರ್ಕ್ಸ್! ನಟಿ ಶಾನ್ವಿ ಎದುರು ಗೋಲ್ಡನ್​ ಸ್ಟಾರ್​ ಗಣೇಶ್​ ಹೇಳೇಬಿಟ್ರು ಆ ಗುಟ್ಟು-ನಟಿ ಸುಸ್ತು!

ಸಾರಾಂಶ

ಕೇರಳದ ಶಾನ್ವಿ ಶ್ರೀವಾಸ್ತವ ಕನ್ನಡ, ಮಲಯಾಳಂ, ತೆಲುಗು, ಮರಾಠಿ ಚಿತ್ರರಂಗದಲ್ಲಿ ನಟಿಯಾಗಿದ್ದಾರೆ. ಕಾಲೇಜು ಶುಲ್ಕ ಕಟ್ಟಲು ತೆಲುಗಿನ 'ಲವ್‌ಲೀ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. 'ಮಾಸ್ಟರ್‌ಪೀಸ್' ಚಿತ್ರಕ್ಕಾಗಿ ಸೈಮಾ ಪ್ರಶಸ್ತಿ ಪಡೆದರು. ಇತ್ತೀಚೆಗೆ, ಶಾಲಾ-ಕಾಲೇಜಿನ ಅಂಕಗಳ ಬಗ್ಗೆ ಗಣೇಶ್ ಜೊತೆಗಿನ ಅವರ ಸಂವಾದ ವೈರಲ್ ಆಗಿದೆ. ಪ್ರಸ್ತುತ, ಅವರು ಒಂದು ಚಿತ್ರಕ್ಕೆ 30 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

 ಕೇರಳ ಮೂಲದ ಶಾನ್ವಿ ನಾಯರ್​ ಈಗ  ಶಾನ್ವಿ ಶ್ರೀವಾಸ್ತವ ಎಂದೇ ಕನ್ನಡ ಸೇರಿದಂತೆ ಮಲಯಾಳಂ, ತೆಲಗು, ಮರಾಠಿ ಚಿತ್ರರಂಗದಲ್ಲಿ ಶೈನ್​  ಆಗ್ತಿದ್ದಾರೆ.  ನಟಿಯ ಜೊತೆ ರೂಪದರ್ಶಿಯೂ ಆಗಿರುವ ಶಾನ್ವಿಗೆ ಈಗ 33 ವರ್ಷ ವಯಸ್ಸು.  ಕಾಲೇಜು ದಿನಗಳಲ್ಲೇ  ತೆಲುಗಿನ 'ಲವ್‌ಲೀ' ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದ ಇವರಿಗೆ  'ಮಾಸ್ಟರ್‌ಪೀಸ್' ಚಿತ್ರಕ್ಕಾಗಿ ಸೈಮಾ ಕ್ರಿಟಿಕ್ಸ್ ಅವಾರ್ಡ್ ಸಹ ಸಿಕ್ಕಿತ್ತು. 2014ರಲ್ಲಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿರೋ ಶಾನ್ವಿ,  `ಚಂದ್ರಲೇಖಾ' ಚಿತ್ರದಲ್ಲಿ ನಟಿಸಿದರು. ಅದಾದ ಬಳಿಕ  `ಮಾಸ್ಟರ್ ಪೀಸ್',`ಭಲೇ ಜೋಡಿ', `ಸುಂದರಾಂಗ ಜಾಣ',`ಸಾಹೇಬ',ತಾರಕ್', `ಮಫ್ತಿ' ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಗೋಲ್ಡನ್‌ ಸ್ಟಾರ್‌ ಗಣೇಶ್‌ ಶೋನಲ್ಲಿ ನಟಿ ತಮ್ಮ ಮಾರ್ಕ್ಸ್ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್‌ ಆಗುತ್ತಿದೆ.

ತಮ್ಮ ಶಾಲಾ-ಕಾಲೇಜಿನ ದಿನಗಳ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ನಟಿ ಶಾನ್ವಿ, ಕಾಲೇಜಿನಲ್ಲಿ ಸುಮಾರಾಗಿ ಇದ್ದೆ. 80- 85 ಪರ್ಸೆಂಟ್‌ ಬರ್ತಾ ಇತ್ತು ಅಷ್ಟೇ ಎಂದಿದ್ದಾರೆ. ಅದಕ್ಕೆ ಗಣೇಶ್‌, ಅಬ್ಬಾ ಅಷ್ಟೋಂದಾ? ಇಷ್ಟು ಮಾರ್ಕ್ಸ್ ತೆಗೆದು ಸುಮಾರಾಗಿ ಅಂತಿರುವಿರಲ್ಲಾ ಎಂದಿದ್ದಾರೆ. ಅದಕ್ಕೆ ನಟಿ, ಅಯ್ಯೋ ಹಾಗಲ್ಲ, ಶಾಲಾ ದಿನಗಳಲ್ಲಿ 98 % ಮೇಲೆ ಬರ್ತಿತ್ತು ಎಂದರು. ಅದಕ್ಕೆ ತಮ್ಮ ಎಂದಿನ ಹಾಸ್ಯದ ಧಾಟಿಯಲ್ಲಿ ಗಣೇಶ್‌ ಅವರು, ನೀವು ಕಾಲೇಜಿನಲ್ಲಿ ಪಡೆದಿರೋ ಮಾರ್ಕ್ಸ್‌ನಲ್ಲಿ ನಾವು ಮೂವರು ಫ್ರೆಂಡ್ಸ್‌ ಸೇರಿ ಪಡೀತಾ ಇದ್ವಿನೋ ಇಲ್ವೋ ಗೊತ್ತಿಲ್ಲ 35 ಮಾರ್ಕ್ಸ್ ಬಂದರೆ ನಮಗೆ ಹಬ್ಬ ಆಗಿತ್ತು ಎಂದು ತಮಾಷೆ ಮಾಡಿದ್ದಾರೆ. ಒಟ್ಟಿನಲ್ಲಿ ನಟಿ ಶಾನ್ವಿ ಒಬ್ಬರ ಅಂಕ, ಗಣೇಶ್‌ ಮತ್ತು ಇಬ್ಬರು ಗೆಳೆಯರ ಅಂಕಕ್ಕೆ ಸಮ ಎಂದು ಹೇಳ್ತಿರುವಂತೆಯೇ, ಈ ವಿಡಿಯೋಗೆ ನಾವೂ ಹೀಗೆ ಗುರೂ ಎಂದು ಯುವಕರೆಲ್ಲಾ ಗಣೇಶ್‌ ಮಾತಿಗೆ ಸಮ್ಮತಿ ಸೂಚಿಸಿದ್ದಾರೆ!

ಕಾಲೇಜ್​ ಫೀಸ್​ ಕಟ್ಟಲು ಸಿನಿಮಾಕ್ಕೆ ಎಂಟ್ರಿ ಕೊಟ್ಟೆ... ಆದ್ರೆ ಕನ್ನಡ ಇಂಡಸ್ಟ್ರಿ.... ನಟಿ ಶಾನ್ವಿ ಓಪನ್ ಮಾತೇನು?


ಇನ್ನು ನಟಿ ಶಾನ್ವಿ ಕುರಿತು ಹೇಳುವುದಾದರೆ, ಇವರು ಈ ಹಿಂದೆ, ತಾವು ಚಿತ್ರರಂಗಕ್ಕೆ  ಎಂಟ್ರಿ ಕೊಟ್ಟಿದ್ದು ಯಾಕೆ ಎನ್ನುವುದರ ಬಗ್ಗೆ ಮಾತನಾಡಿದ್ದರು.  ಕಾಲೇಜು ದಿನಗಳಲ್ಲೇ  ತೆಲುಗಿನ 'ಲವ್‌ಲೀ' ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದ ಇವರಿಗೆ  'ಮಾಸ್ಟರ್‌ಪೀಸ್' ಚಿತ್ರಕ್ಕಾಗಿ ಸೈಮಾ ಕ್ರಿಟಿಕ್ಸ್ ಅವಾರ್ಡ್ ಸಹ ಸಿಕ್ಕಿತ್ತು. ಅಷ್ಟಕ್ಕೂ ತಾವು ಕಾಲೇಜು ಫೀಸ್​ ಕಟ್ಟುವುದಕ್ಕಾಗಿ ಸಿನಿಮಾದಲ್ಲಿ ನಟಿಸಿದೆ ಎಂದು ಹೇಳಿಕೊಂಡಿದ್ದರು ನಟಿ. ಕಾಲೇಜು ಫೀಸ್​ ನನ್ನದೇ ದುಡ್ಡಿನಲ್ಲಿ ಕಟ್ಟಬೇಕು ಎನ್ನುವ ಕಾರಣಕ್ಕೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ. ಇದಕ್ಕೂ ಮುನ್ನ  ಕೋಚಿಂಗ್ ಸೆಂಟರ್‌ನಲ್ಲಿ ಒಂದರಲ್ಲಿ ಪಾಠ ಮಾಡ್ತಿದ್ದೆ. ಅಲ್ಲಿ ಕೆಲಸ ಮಾಡಿದ್ದು, ಮೂರು ತಿಂಗಳು ಆಗ ನನಗೆ  ತಿಂಗಳಿಗೆ 3,500 ರೂಪಾಯಿ ಸಂಬಳ ಬರುತ್ತಿತ್ತು ಎಂದು ಶಾನ್ವಿ ಹೇಳಿದ್ದರು. 

ನನಗೆ  ವರ್ಷಕ್ಕೆ 14 ಸಾವಿರ ರೂಪಾಯಿ ಫೀಸ್​ ಬೇಕಿತ್ತು. ಮನೆಯಲ್ಲಿ ಹಣ ಕೇಳಬಾರದು ಎಂದುಕೊಂಡಿದ್ದೆ. ಅದೇ ಸಮಯಕ್ಕೆ ಚಿತ್ರದಲ್ಲಿ ಆಫರ್​ ಬಂತು. ಆರಂಭದಲ್ಲಿ  3 ಲಕ್ಷ ಸಂಭಾವನೆ ಎಂದ್ರು. ಅಸಲಿಗೆ ನನಗೆ ಬೇಕಿದ್ದಿದ್ದು ವರ್ಷಕ್ಕೆ 14 ಸಾವಿರ ಮಾತ್ರ. ಆದರೆ ಇಷ್ಟು ಸಂಭಾವನೆ ಸಿಗುತ್ತದೆ ಎಂದಾಗ ಇಡೀ ಶಿಕ್ಷಣವನ್ನೇ ಮುಗಿಸಬಹುದು ಎಂದುಕೊಂಡು ಒಪ್ಪಿಕೊಂಡೆ. ಈಗ ನನಗೆ  30 ಲಕ್ಷ ಸಂಭಾವನೆ ಬರುತ್ತಿದೆ ಎಂದಿದ್ದರು. ಇದೇ ವೇಳೆ ಕನ್ನಡ ಇಂಡಸ್ಟ್ರಿಯ ಬಗ್ಗೆಯೂ ಮಾತನಾಡಿದ್ದ ನಟಿ, ಬೇರೆಯದ್ದಕ್ಕೆ ಹೋಲಿಸಿದರೆ ಕನ್ನಡದಲ್ಲಿ ಸಂಭಾವನೆ ಕಡಿಮೆಯೇ. ಆದರೆ ನನಗೆ ಸದ್ಯ ಚಿತ್ರವೊಂದಕ್ಕೆ 30 ಲಕ್ಷ ರೂಪಾಯಿ ಬರುತ್ತಿದೆ.  ಮಾರ್ಕೆಟ್‌ಗೆ ತಕ್ಕಂತೆ ಬದಲಾಗುತ್ತದೆ ಎಂದೂ ಹೇಳಿದ್ದರು.

ರಾಹುಲ್‌ ಗಾಂಧಿ ಜೊತೆ ಕರೀನಾಗೆ ಡೇಟಿಂಗ್‌ ಆಸೆ! ಫೋಟೋ ನೋಡಿ ಫಿದಾ ಆಗಿದ್ದ ನಟಿಯ ಮಾತು ಕೇಳಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ