ಇನ್ನೂ ಹತ್ತಿರ... ಹತ್ತಿರ... ಎನ್ನುತ್ತ ಈ ಅಜ್ಜ ಕಾಜೋಲ್‌ಗೆ ಹೀಗೆ ಮಾಡೋದಾ? ನೋವಿನಿಂದ ನಟಿ ಸುಸ್ತು!

Published : Mar 14, 2025, 08:27 PM ISTUpdated : Mar 14, 2025, 09:07 PM IST
ಇನ್ನೂ ಹತ್ತಿರ... ಹತ್ತಿರ... ಎನ್ನುತ್ತ ಈ ಅಜ್ಜ  ಕಾಜೋಲ್‌ಗೆ ಹೀಗೆ ಮಾಡೋದಾ? ನೋವಿನಿಂದ ನಟಿ ಸುಸ್ತು!

ಸಾರಾಂಶ

ಖ್ಯಾತ ನಟ-ನಟಿಯರೊಂದಿಗೆ ಫೋಟೊ ತೆಗೆಯಲು ಅಭಿಮಾನಿಗಳು ಮುಗಿಬೀಳುವುದು ಸಾಮಾನ್ಯ. ಕೆಲವರು ಕಿರಿಕಿರಿ ಅನುಭವಿಸಿದರೆ, ಇನ್ನು ಕೆಲವರು ಹಲ್ಲೆ ಮಾಡುತ್ತಾರೆ. ಇತ್ತೀಚೆಗೆ ಕಾಜೋಲ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ ವೃದ್ಧರೊಬ್ಬರು ಕಾಲು ಮೆಟ್ಟಿದ ಘಟನೆ ನಡೆಯಿತು. ಅಭಿಮಾನಿಗಳ ಅತಿಯಾದ ವರ್ತನೆಯಿಂದ ನಟರು ತೊಂದರೆ ಅನುಭವಿಸುತ್ತಾರೆ.

ಸಿನಿಮಾ ನಟ ನಟಿಯರನ್ನು ಕಂಡಾಗ ಅಭಿಮಾನಿಗಳು ಫೋಟೋಗಾಗಿ ಮುಗಿ ಬೀಳುವುದು ಸಾಮಾನ್ಯವಾಗಿದೆ. ಈ ವೇಳೆ ಸೆಲೆಬ್ರಿಟಿಗಳು ನಟರು ಎನಿಸಿಕೊಂಡವರು ಕಿರಿಕಿರಿಗೊಳಗಾಗುತ್ತಾರೆ. ಕೆಲವರು ಹೀಗೆ ಫೋಟೋ ತೆಗೆಸಿಕೊಳ್ಳಲು ಬಂದವರ ಮೇಲೆಯೇ ಹಲ್ಲೆ ಮಾಡಿದ ಘಟನೆ ಈ ಹಿಂದೆಯೂ ಹಲವು ಬಾರಿ ನಡೆದಿದೆ. ಕೆಲ ನಟರು ಫೋಟೋ ತೆಗೆದುಕೊಳ್ಳಲು ಬಂದ ಅಭಿಮಾನಿಯ ಕೆನ್ನೆಗೆ ಬಾರಿಸಿ ಬಳಿಕ ಕ್ಷಮೆ ಕೇಳಿದ ಘಟನೆಯೂ ನಡೆದಿದೆ. ಕೆಲ ದಿನಗಳ ಹಿಂದೆ  ಖಳನಟನ ಪಾತ್ರದಲ್ಲೇ ಹೆಸರುವಾಸಿಯಾಗಿರುವ ಬಾಲಿವುಡ್ ನಟ ನಾನಾ ಪಾಟೇಕರ್‌ ಕೂಡ  ಸೆಲ್ಫಿ ತೆಗೆಸಿಕೊಳ್ಳಲು ಬಂದ ಬಾಲಕನೋರ್ವನ ತಲೆಗೆ ಹೊಡೆದು  ಓಡಿಸಿದ್ದು ಭಾರಿ ಸುದ್ದಿಯಾಗಿತ್ತು, ಜೊತೆಗೆ ಅಭಿಮಾನಿಗಳ  ಆಕ್ರೋಶಕ್ಕೂ ಕಾರಣವಾಗಿತ್ತು. 

ಆದರೆ ಪಾಪ ಎಷ್ಟೋ ಸಂದರ್ಭದಲ್ಲಿ ನಟ-ನಟಿಯರು ಹೀಗೆ ವರ್ತಿಸಬೇಕಾದ ಅನಿವಾರ್ಯತೆಯೂ ಎದುರಾಗುತ್ತದೆ. ಅಭಿಮಾನಿಗಳು ಒಂದು ಹಂತ ಮೀರಿ ವರ್ತಿಸುತ್ತಾರೆ. ಅಷ್ಟಕ್ಕೂ ನಟ-ನಟಿಯರನ್ನು ದೇವರೆಂದೇ ನಂಬುವ, ಅವರ ಒಂದು ನೋಟಕ್ಕಾಗಿ ಜೀವವನ್ನೇ ಕೊಡುವ ಹುಚ್ಚು, ಅತಿರೇಕದ ಅಭಿಮಾನಿಗಳೂ ಇದ್ದಾರೆ. ಇಂಥವರಿಂದಲೇ ನಟ-ನಟಿಯರ ಚಿತ್ರಗಳು ಓಡುವುದು ಎನ್ನುವುದೂ ಸುಳ್ಳಲ್ಲ. ಇದೇ ಅಧಿಕಾರದ  ಮೇಲೆ ಅವರನ್ನು ಕಂಡಾಗ ಅಭಿಮಾನಿಗಳು ಮುಗಿ ಬೀಳುವುದು ಸಾಮಾನ್ಯ. ಆದರೆ ಕೆಲವರು ಇಂಥ ಸನ್ನಿವೇಶವನ್ನು ಕೂಲ್​ ಆಗಿ ಹ್ಯಾಂಡಲ್ ಮಾಡಿದರೆ, ಮತ್ತೆ ಕೆಲವರು ದೂರ ತಳ್ಳುವುದು, ಹೊಡೆಯುವುದು, ಕೆನ್ನೆಗೆ ಬಾರಿಸುವುದು... ಇತ್ಯಾದಿ ಮಾಡಿ ಟ್ರೋಲ್​  ಆಗುವುದು ಇದೆ.

ಮೇಕಪ್ಪೂ ಇಲ್ದೇ, ಎಣ್ಣೆ ತಲೆಯಲ್ಲೇ, ಮನೆ ಬಟ್ಟೆಯಲ್ಲೇ ಫಿಲ್ಮ್‌ಫೇರ್ ಪ್ರಶಸ್ತಿ ಸ್ವೀಕರಿಸಿದ ನಟಿ! ವಿಡಿಯೋ ವೈರಲ್‌

ಇದೀಗ ಕಾಜೋಲ್‌ ಅವರಿಗೂ ಅದೇ ರೀತಿ ಆಗಿದೆ. ವೃದ್ಧರೊಬ್ಬರು ಬಾಲಿವುಡ್‌ ನಟಿ ಕಾಜೋಲ್‌ ಅವರನ್ನು ನೋಡಿ ಫುಲ್‌ ರೋಮಾಂಚನಗೊಂಡಿದ್ದಾರೆ. ಅವರ ಬಳಿ ಹೋಗಿ ಆಟೋಗ್ರಾಫ್‌ ಕೇಳಿದ್ದಾರೆ. ಅದನ್ನು ಹಾಕಿಕೊಡಲು ನಟಿ ಅವರ ಬುಕ್‌ ತೆಗೆದುಕೊಂಡಿದ್ದಾರೆ. ಬಳಿಕ ತಮ್ಮ ಸ್ಮಾರ್ಟ್‌ಫೋನ್‌ ತಂದು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅಲ್ಲಿದ್ದ ಪಾಪರಾಜಿಗಳ ಕಣ್ಣು ತಮ್ಮ ಮೇಲೆ ನೆಟ್ಟಿದೆ ಎಂದು ಗೊತ್ತಿರುವ ಕಾರಣ, ಕಾಜೋಲ್‌ ನಗುತ್ತಲೇ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಆ ವ್ಯಕ್ತಿ ಹತ್ತಿರ ಹತ್ತಿರ ಬರುತ್ತಿದ್ದಂತೆಯೇ ನಟಿ ಸ್ವಲ್ಪ ಸ್ವಲ್ಪ ದೂರ ಸರೆದಿದ್ದಾರೆ.

ಆದರೆ ಸೆಲ್ಫಿ ಚೆನ್ನಾಗಿ ಬರಬೇಕು ಎಂದು ಅಜ್ಜ, ಹತ್ತಿರ ಹತ್ತಿರ ಬಂದು ಕೊನೆಗೆ, ಕಾಜೋಲ್‌ ಅವರ ಕಾಲನ್ನೇ ಮೆಟ್ಟಿಬಿಟ್ಟಿದ್ದಾರೆ. ಪಾಪ ನಟಿಯ ಗೋಳು ಯಾರಿಗೂ ಬೇಡ. ನೋವಾದರೂ ನಗುತ್ತಲೇ ಕಾಲನ್ನು ಎಳೆದುಕೊಂಡಿದ್ದಾರೆ ಕಾಜೋಲ್‌. ಆದರೆ ನಟಿಯ ಪಕ್ಕದಲ್ಲಿ ಇರುವ ಖುಷಿಯಲ್ಲಿದ್ದ ಆ ವ್ಯಕ್ತಿಗೆ ಮಾತ್ರ ತಾವು ನಟಿಯ ಕಾಲು ಮೆಟ್ಟಿದ್ದು ಗೊತ್ತಾಗಲೇ ಇಲ್ಲ. ಆದರೆ ಕ್ಯಾಮೆರಾ ಕಣ್ಣು ಮಾತ್ರ ಕಾಜೋಲ್‌ ಕಾಲಿನತ್ತ ಹೋಗಿತ್ತು. ಇದರಿಂದ ಕಾಲು ಮೆಟ್ಟಿರುವುದನ್ನು ನೋಡಬಹುದು. ಒಟ್ಟಿನಲ್ಲಿ ಚಿತ್ರತಾರೆಯ ಫಜೀತಿ ಮಾತ್ರ ಯಾರಿಗೂ ಬೇಡ ಎನ್ನುವಂತಾಗುತ್ತದೆ!

ತೋರಿಸಲ್ಲ, ತೋರಿಸಲ್ಲ ಎನ್ನುತ್ತಲೇ ಎಡವಟ್ಟು ಮಾಡಿಕೊಂಡ ನಟಿ ಶ್ರದ್ಧಾ ಕಪೂರ್: ಫೋಟೋ ವೈರಲ್‌

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?
ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?