ಹತ್ತಾರು ಕಾರು ಇದ್ದರೂ ಆಮೀರ್‌ ಖಾನ್‌ ಮಗ ರಿಕ್ಷಾದಲ್ಲೇ ಪ್ರಯಾಣಿಸುವುದೇಕೆ?

Published : Mar 14, 2025, 07:40 PM ISTUpdated : Mar 14, 2025, 08:55 PM IST
ಹತ್ತಾರು ಕಾರು ಇದ್ದರೂ ಆಮೀರ್‌ ಖಾನ್‌ ಮಗ ರಿಕ್ಷಾದಲ್ಲೇ ಪ್ರಯಾಣಿಸುವುದೇಕೆ?

ಸಾರಾಂಶ

ಸೂಪರ್‌ಸ್ಟಾರ್ ಆಮೀರ್ ಖಾನ್ ಮಗ ಜುನೈದ್ ಖಾನ್ ಸರಳ ವ್ಯಕ್ತಿತ್ವಕ್ಕೆ ಹೆಸರುವಾಸಿ. ತಂದೆ ಬಳಿ ದುಬಾರಿ ಕಾರುಗಳಿದ್ದರೂ, ಆತ ಹೆಚ್ಚಾಗಿ ರಿಕ್ಷಾದಲ್ಲೇ ಪ್ರಯಾಣಿಸುತ್ತಾನೆ. ಆತನ ಮೊದಲ ಸಿನಿಮಾ ಸೋತರೂ, ಸರಳತೆಯಿಂದ ಗಮನ ಸೆಳೆದಿದ್ದಾನೆ.

ಸೂಪರ್‌ಸ್ಟಾರ್ ಆಮೀರ್ ಖಾನ್ ಇದೀಗ ಬೆಂಗಳೂರಿನ ಗೌರಿ ಎಂಬಾಕೆಯ ಜೊತೆಗೆ ಡೇಟಿಂಗ್‌ ಮಾಡುತ್ತಿರುವುದು ಮತ್ತು ಅವರಿಬ್ಬರೂ ಜೊತೆಯಾಗಿ ವಾಸಿಸುತ್ತಿರುವುದೂ ಸಾಕಷ್ಟು ಸುದ್ದಿಯಾಗಿದೆ. ಆಮೀರ್‌ಗೆ ಈಕೆ ಮೂರನೇ ಸಂಗಾತಿ. ಅದಿರಲಿ, ಈಗ ನಾವು ಹೇಳಲು ಹೊರಟಿರುವುದು ಆಮೀರ್‌ನ ಹಿಡಿಯ ಮಗ ಜುನೈದ್‌ ಖಾನ್‌ ಬಗ್ಗೆ. ಇವನೊಬ್ಬ ವಿಶಿಷ್ಟ ವ್ಯಕ್ತಿ. ತಂದೆ ಆಮೀರ್‌ ಬಳಿ ಹತ್ತಾರು ದುಬಾರ ಕಾರುಗಳಿದ್ದರೂ ಇವನು ಓಡಾಡುವುದು ಆಟೋ ರಿಕ್ಷಾದಲ್ಲೇ ಅಂತೆ.    

ಹೌದು, ಆಮೀರ್‌ ಮಗ ಜುನೈದ್ ಖಾನ್ ತಮ್ಮ ಸರಳತೆಗೆ ಹೆಸರುವಾಸಿ. ಜುನೈದ್‌ನ ಮೊದಲ ಫಿಲಂ ಲವ್‌ಯುಪಾ ಇತ್ತೀಚೆಗೆ ಬಿಡುಗಡೆಯಾಯ್ತು. ಜುನೈದ್‌ ಜೊತೆಗೆ ಆಮೀರ್‌ಗೂ ಈ ಫಿಲಂ ಸಕ್ಸಸ್‌ ಆಗಬೇಕು ಎಂಬ ಹಂಬಲವಿತ್ತು. ಜುನೈದ್‌ಗಿಂತಲೂ ಆಮೀರ್‌ಗೆ ಎದೆ ಹೆಚ್ಚು ಢವಢವ ಎನ್ನುತ್ತಿತ್ತಂತೆ. ಆದರೆ ಆ ಫಿಲಂ ಓಡಲೇ ಇಲ್ಲ, ಮಾರ್ಕೆಟ್‌ನಲ್ಲಿ ಅದು ಮಗುಚಿಹಾಕಿಕೊಂಡಿತು. 

ನೃತ್ಯ ಸಂಯೋಜಕಿ-ನಿರ್ದೇಶಕಿ ಫರಾ ಖಾನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಒಂದು ಇಂಟರ್‌ವ್ಯೂನಲ್ಲಿ ಜುನೈದ್ ಖಾನ್ ಅವರ ಲವ್‌ಯುಪಾ ಸಹನಟಿ, ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಖುಷಿ ಕಪೂರ್ ಜೊತೆಗೆ ಕಾಣಿಸಿಕೊಂಡರು. ಸಂಭಾಷಣೆಯಲ್ಲಿ ಫರಾ ತಮಾಷೆಯಾಗಿ ನೀವು ಸಾಮಾನ್ಯವಾಗಿ ನಿಮ್ಮ ಬ್ಯಾಗ್‌ನಲ್ಲಿ ಏನು ಒಯ್ಯುತ್ತೀರಿ ಎಂದು ಕೇಳಿದರು. 

ಖುಷಿ ಮೊದಲು ಜುನೈದ್ ಅವರ ಬ್ಯಾಗ್‌ನಿಂದ ಪೆನ್ನು ಹೊರತೆಗೆದರು. ಅದನ್ನು ಜಪಾನ್‌ನ ಸೆವೆನ್-ಇಲೆವೆನ್ ಅಂಗಡಿಯಿಂದ ಖರೀದಿಸಲಾಗಿದೆ ಎಂದು ಬಹಿರಂಗಪಡಿಸಿದರು. ನಂತರ ಅವಳು ಹೇರ್ ಡ್ರೈಯರ್ ಅನ್ನು ಹೊರತೆಗೆದಳು. ಜುನೈದ್ "ನಾನು ಸಾಮಾನ್ಯವಾಗಿ ನನ್ನ ಹೇರ್‌ಸ್ಟೈಲ್‌ ನಾನೇ ಮಾಡಿಕೊಳ್ಳುತ್ತೇನೆ. ಆದ್ದರಿಂದ ಕೆಲವೊಮ್ಮೆ ನನಗೆ ಅದು ಬೇಕಾಗುತ್ತದೆ" ಎಂದು ವಿವರಿಸಿದರು. 

ಇವುಗಳ ಜೊತೆಗೆ ಜುನೈದ್ ಒಂದು ರೇಜರ್, ವ್ಯಾಕ್ಸ್, ಟಾಯ್ಲೆಟ್‌ ಕಿಟ್‌ ಮತ್ತು ₹1,300 ಹಣ ಇದ್ದ ಪರ್ಸ್‌ ಕೂಡ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದ. ಇದನ್ನು ಗಮನಿಸಿದ ಫರಾಹ್, ತನ್ನ ತಂದೆ ಆಮಿರ್ ಖಾನ್ ಗಿಂತ ಭಿನ್ನವಾಗಿ ಜುನೈದ್ ಪರ್ಸ್‌ನಲ್ಲಿ ಹಣವನ್ನು ಇಟ್ಟುಕೊಳ್ಳುತ್ತಾನೆ ಎಂದು ತಮಾಷೆಯಾಗಿ ಹೇಳಿದಳು. ಜುನೈದ್, "ರಿಕ್ಷಾ ಚಾಲಕರು ಕ್ರೆಡಿಟ್ ಕಾರ್ಟ್‌ಗಳನ್ನು ಸ್ವೀಕರಿಸುವುದಿಲ್ಲ. ಆದ್ದರಿಂದ ನಾನು ರಿಕ್ಷಾ ಸವಾರಿಗಾಗಿ ಚಿಲ್ಲರೆ ಹಣವನ್ನು ಇಟ್ಟುಕೊಳ್ಳುತ್ತೇನೆ" ಎಂದು ಪ್ರತಿಕ್ರಿಯಿಸಿದ.

ಜುನೈದ್ ಸೂಪರ್‌ಸ್ಟಾರ್ ಕುಟುಂಬಕ್ಕೆ ಸೇರಿದವನಾಗಿದ್ದರೂ, ಅಪ್ಪನ ಬಳಿ ಹತ್ತಾರು ಕಾರು ಇದ್ದರೂ ಆತ ರಿಕ್ಷಾ ಪ್ರಯಾಣವನ್ನು ಇಷ್ಟಪಡುತ್ತಾನಲ್ಲ ಎಂದು ಫರಾಹ್ ಆಶ್ಚರ್ಯಪಟ್ಟಳು. ನುಜೈದ್‌ ಪ್ರಕಾರ ರಿಕ್ಷಾ ಹೆಚ್ಚು ಅನುಕೂಲಕರವಂತೆ. ಕಡಿಮೆ ದೂರಕ್ಕೆ ಪ್ರಯಣಿಸಲು ಆತ ರಿಕ್ಷಾವನ್ನೇ ಆರಿಸಿಕೊಳ್ಳುತ್ತಾನಂತೆ. "ಮನೆಯಲ್ಲಿ ಸಾಕಷ್ಟು ಕಾರುಗಳಿವೆ. ನಾನು ಅಗತ್ಯವಿದ್ದಾಗ ಒಂದು ಕಾರನ್ನು ಬಳಸುತ್ತೇನೆ. ಆದ್ರೆ ಹೆಚ್ಚಾಗಿ ಹೋಗುವುದು ರಿಕ್ಷಾದಲ್ಲೇ" ಎನ್ನುತ್ತಾನೆ ಜುನೈದ್.‌ 

ಜುನೈದ್ ಖಾನ್ ಮತ್ತು ಖುಷಿ ಕಪೂರ್ ಅವರ ಲವ್‌ಯುಪಾ ಸಿನಿಮಾವನ್ನು ಫ್ಯಾಂಟಮ್ ಸ್ಟುಡಿಯೋಸ್ ಮತ್ತು ಎಜಿಎಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ. ಈ ಚಿತ್ರದಲ್ಲಿ ಗ್ರುಷಾ ಕಪೂರ್, ಅಶುತೋಷ್ ರಾಣಾ, ತನ್ವಿಕಾ ಪಾರ್ಲಿಕರ್, ದೇವಿಶಿ ಮದನ್, ಆದಿತ್ಯ ಕುಲಶ್ರೇಷ್ಠ, ನಿಖಿಲ್ ಮೆಹ್ತಾ, ಜೇಸನ್ ಥಾಮ್, ಯೂನಸ್ ಖಾನ್, ಯುಕ್ತಮ್ ಖೋಸ್ಲಾ ಮತ್ತು ಕುಂಜ್ ಆನಂದ್ ಇದ್ದರು. 

ಒಮ್ಮೆ ಗೌರಿ ಸ್ಪ್ರಾಟ್ ಆಮೀರ್ ಖಾನ್ ಕುಟುಂಬವನ್ನು ಭೇಟಿಯಾದ್ರು.. ಮುಂದೆ ಏನಾಯ್ತು...?!

ಸೂಪರ್‌ಸ್ಟಾರ್‌ ಮಗನಾದರೂ ಜುನೈದ್‌ ಅಹಂಕಾರವಿಲ್ಲದ ಸರಳ ವ್ಯಕ್ತಿ. ತಮ್ಮ ಹಿಂದಿ ಸಿನಿಮಾ ವೃತ್ತಿ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಅವರು ನ್ಯೂಯಾರ್ಕ್‌ನಲ್ಲಿರುವ ಪ್ರತಿಷ್ಠಿತ ಅಮೇರಿಕನ್ ಅಕಾಡೆಮಿ ಆಫ್ ಡ್ರಾಮ್ಯಾಟಿಕ್ ಆರ್ಟ್ಸ್‌ನಲ್ಲಿ ತಮ್ಮ ನಟನಾ ಕಲಿಕೆ ಮಾಡಿದರು. 2017 ರಲ್ಲಿ "ಮದರ್ ಕರೇಜ್ ಅಂಡ್ ಹರ್ ಚಿಲ್ಡ್ರನ್" ಎಂಬ ನಾಟಕದಲ್ಲಿ ಅಭಿನಯಿಸಿದರು. ತಮ್ಮ ಸಹೋದರಿ ಇರಾ ಖಾನ್ ಅವರ "ಮೀಡಿಯಾ" ಸೇರಿದಂತೆ ಹಲವಾರು ಇತರ ನಾಟಕಗಳಲ್ಲಿ ಪ್ರದರ್ಶನ ನೀಡಿದರು. 2024ರಲ್ಲಿ ಮೂರು ನಾಟಕಗಳಲ್ಲಿ ಕಾಣಿಸಿಕೊಂಡರು: ರನ್‌ಅವೇ ಬ್ರೈಡ್ಸ್, ಶಿಖಂಡಿ ಮತ್ತು ಸ್ಟ್ರಿಕ್ಟ್ಲಿ ಅನ್‌ಕನ್ವೆನ್ಷನಲ್. ಶಿಖಂಡಿಯಲ್ಲಿ ಬಹು ಪಾತ್ರಗಳನ್ನು ನಿರ್ವಹಿಸಿದರು ಮತ್ತು "ಸ್ಟ್ರಿಕ್ಟ್ಲಿ ಅನ್‌ಕನ್ವೆನ್ಷನಲ್" ನಲ್ಲಿ ಟ್ರಾನ್ಸ್ ಮಹಿಳೆಯ ದಿಟ್ಟ ಪಾತ್ರವನ್ನು ನಿರ್ವಹಿಸಿ ಪ್ರಶಂಸೆ ಗಳಿಸಿದರು.

ಆಮೀರ್ ಖಾನ್‌ ರಿಜೆಕ್ಟ್ ಮಾಡಿದ 8 ಚಿತ್ರಗಳು ಸೂಪರ್‌ಹಿಟ್, ಸೂಪರ್‌ ಸ್ಟಾರ್ ಪಟ್ಟಕ್ಕೇರಿದ ಇಬ್ಬರು ನಟರಿವರಿರು!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?