ಹೂಡಿಕೆಗೆ ಚೀನಾಕ್ಕಿಂತ ಭಾರತವೇ ಬೆಸ್ಟ್: ಜಾಗತಿಕ ಸಿಇಒ ಸಮೀಕ್ಷೆ ಅಭಿಪ್ರಾಯ

By Suvarna NewsFirst Published May 30, 2023, 11:34 AM IST
Highlights

ಚೀನಾದಲ್ಲಿ ಹೆಚ್ಚುತ್ತಿರುವ ಹಲವು ಸಂಘರ್ಷಗಳ ಕಾರಣದಿಂದ ಭಾರತವೇ ಜಾಗತಿಕ ಕಂಪನಿಗಳಿಗೆ ಹೂಡಿಕೆ ಮಾಡಲು ಬೆಸ್ಟ್ ಎಂಬ ಅಭಿಪ್ರಾಯ ಐಎಂಎ ಇಂಡಿಯಾ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. 

ಹೊಸದಿಲ್ಲಿ (ಮೇ 30): ಸಂಶೋಧನಾ ಸಂಸ್ಥೆ ಐಎಂಎ ಇಂಡಿಯಾ ಸಮೀಕ್ಷೆಯೊಂದನ್ನು ನಡೆಸಿದ್ದು, ಬಹುತೇಕ ಸಿಇಒಗಳು ಚೀನಾ ಬದಲಾಗಿ ಭಾರತವನ್ನೇ ಹೂಡಿಕೆಗೆ ಬೆಸ್ಟ್ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಂತರ ವಿಯೆಟ್ನಾಂ ಮತ್ತು ಥಾಯ್ಲೆಂಡ್‌ ದೇಶಗಳತ್ತ ಒಲವು ತೋರುತ್ತಿರುವುದು ಸ್ಪಷ್ಟವಾಗುತ್ತಿದೆ. 

ಚೀನಾದಲ್ಲಿ ದಿನದಿಂದ ದಿನಕ್ಕೆ ಭೌಗೋಳಿಕ ರಾಜಕೀಯ ಸಂಘರ್ಷ ಹೆಚ್ಚುತ್ತಿದೆ. ವಾಣಿಜ್ಯ ನೀತಿಗಳ ಕಿರಿಕಿರಿ ಹಾಗೂ ಹೆಚ್ಚಾಗುತ್ತಿರುವ ಕಾರ್ಮಿಕ ವೆಚ್ಚಗಳಿಂದ ಬಹು ದೇಶಗಳ ಕಂಪನಿಗಳು ಚೀನಾಗೆ ಪರ್ಯಾಯವನ್ನು ಹುಡುಕುತ್ತಿದ್ದು, ಭಾರತವೇ ಬೆಸ್ಟ್ ಎಂದು ಹೇಳಲಾಗುತ್ತಿದೆ.  ಶೇ. 88ರಷ್ಟು ಜಾಗತಿಕ ಸಿಇಒಗಳು ಚೀನಾಕ್ಕೆ ಪರ್ಯಾಯವಾಗಿ ಭಾರತದಲ್ಲಿಯೇ ಇನ್ವೆಸ್ಟ್ ಮಾಡಲು ಒಲವು ತೋರುತ್ತಿರುವುದು ಸ್ಪಷ್ಟವಾಗಿದೆ. ಈ ಸಮೀಕ್ಷೆಯಲ್ಲಿ ವಿದೇಶಿ ಬಿ2ಬಿ ಕೇಂದ್ರಿತ ಸಂಸ್ಥೆಗಳನ್ನು ಪ್ರತಿನಿಧಿಸುವ 100 ಸಿಇಒಗಳು ಭಾಗಿಯಾಗಿದ್ದರು. 

ಅಂಚೆ ಕಚೇರಿ ಈ ಯೋಜನೆಯಲ್ಲಿ 10 ಲಕ್ಷ ರೂ. ಹೂಡಿಕೆ ಮಾಡಿ, ದುಪ್ಪಟ್ಟು ಹಣ ಗಳಿಸಿ!

ಕಳೆದ ಮೂರು ವರ್ಷಗಳಲ್ಲಿ ಚೀನಾದಲ್ಲಿಸುಮಾರು ಶೇ. 70ರಷ್ಟು ಕಂಪನಿಗಳು ತಮ್ಮ ವ್ಯಾಪಾರ ತಂತ್ರಗಳು ಮತ್ತು ಕಾರ್ಯಾಚರಣೆಗಳಲ್ಲಿ ಬಹು ಬದಲಾವಣೆ ಮಾಡಿಕೊಂಡಿವೆ. ಸೇವಾ ವಲಯಕ್ಕೆ ಹೋಲಿಸಿದರೆ ಕೈಗಾರಿಕಾ ವಲಯದಲ್ಲಿಯೂ ಹಲವಾರು ಬದಲಾವಣೆಗಳಾಗಿವೆ. ಶೇ. 56ರಷ್ಟು ಕಂಪನಿಗಳು ಚೀನಾದಲ್ಲಿ ತಮ್ಮ ಕಾರ್ಯ ವೈಖರಿಯನ್ನೇ ಬದಲಾಯಿಸಿಕೊಂಡಿವೆ. ಈಗಾಲೇ ಶೇ. 41ರಷ್ಟು ಕಂಪನಿಗಳು ಚೀನಾದಲ್ಲಿ ಹೂಡಿಕೆಯನ್ನೇ ಕಡಿಮೆ ಮಾಡಿವೆ.

'ವಿದೇಶಿ ಬಹುರಾಷ್ಟ್ರೀಯ ಕಂಪನಿಗಳು ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ತಮ್ಮ ಅಸ್ತಿತ್ವ ಹೆಚ್ಚಿಸಿಕೊಂಡಿವೆ. ಅದರಲ್ಲಿಯೂ ವಿಶೇಷವಾಗಿ ಐಟಿ ಮತ್ತು ಬಿಟಿ ಹಾಗೂ ಐಟಿಇಎಸ್‌ ಕಂಪನಿಗಳು ಭಾರತದಲ್ಲಿಯೇ ಅಸ್ತಿತ್ವ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಆ ಮೂಲಕ ಜಾಗತಿಕ ಉದ್ಯೋಗಿಗಳು ಹೆಚ್ಚುವಂತೆ ನೋಡಿಕೊಂಡಿವೆ,' ಎನ್ನುತ್ತಾರೆ IMA India ಸಂಶೋಧನಾ ನಿರ್ದೇಶಕ ಸೂರಜ್‌ ಸೈಗಲ್‌.

ನಿಲ್ಲದ ಕೊರೋನಾ ಕಾಟದಿಂದ ಚೀನಿಯರು ಬೇಸತ್ತಿದ್ದಾರೆ. ಅಲ್ಲಿಯ ವಾಣಿಜ್ಯ ಮತ್ತು ಭೌಗೋಳಿಕ ರಾಜಕೀಯ ಪರಿಸ್ಥಿತಿಗಳಿಂದ (Geo Political Issues) ಜಾಗತಿಕ ಕಂಪನಿಗಳು ಹೂಡಿಕೆಯಿಂದ ದೂರವಾಗುವಂತೆ ಮಾಡುವಲ್ಲಿ ವಿಶೇಷ ಪಾತ್ರವಹಿಸಿವೆ. ಅದೇ ಟೈಮಲ್ಲಿ ಭಾರತದಲ್ಲಿ ಜಾಗತಿಕ ಕಂಪನಿಗಳಿಗೆ ಅಗತ್ಯ ಪರಿಸರವನ್ನು ಸೃಷ್ಟಿ ಮಾಡುತ್ತಿದ್ದು, ಸಹಜವಾಗಿ ಭಾರತದತ್ತೆ ಅನೇರ ಬಹುರಾಷ್ಟ್ರೀಯ ಕಂಪನಿಗಳು ಹೂಡಿಕೆಗೆ ಮನಸ್ಸು ಮಾಡುತ್ತಿವೆ. 

ನಿಮಗೆ ವಯಸ್ಸು 40 ಆಯ್ತಾ? ಹಾಗಾದ್ರೆ ಈ ಹಣಕಾಸು ಸಂಗತಿಗಳನ್ನು ತಪ್ಪದೇ ಪರಿಶೀಲಿಸಿ

ಭಾರತ ಬಿಟ್ಟು ಹಲವು ದೇಶಗಳು ಚೀನಾಕ್ಕೆ ಪರ್ಯಾಯವಾಗಿ ತಮ್ಮ ದೇಶದಲ್ಲಿ ಹೂಡಿಕೆ ಮಾಡಲು ಮನಸ್ಸು ಮಾಡುತ್ತಿರುವುದು ಈ ಸಮೀಕ್ಷೆಯಿಂದ ಸ್ಪಷ್ಟವಾಗಿದೆ. ಆ ನಂತರ ವಿಯೆಟ್ನಾಂ, ಥಾಯ್ಲೆಂಡ್‌, ಬ್ರೆಜಿಲ್‌, ಇಂಡೋನೇಷ್ಯಾ, ಮಲೇಷ್ಯಾ, ಮೆಕ್ಸಿಕೊ, ಫಿಲಿಪ್ಪಿನ್ಸ್‌ ದೇಶಗಳಲ್ಲಿ ಹೂಡಿಕೆ (Invest) ಮಾಡಲು ಮನಸ್ಸು ಮಾಡುತ್ತಿವೆ, ಎನ್ನಲಾಗಿದೆ. 

ನಿರುದ್ಯೋಗಕ್ಕೆ (Unemployment) ಮದ್ದು:
ಈ ಸಮೀಕ್ಷೆಯಿಂತೆ ಭಾರತದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜಾಗತಿಕ ಕಂಪನಿಗಳು (Global Companies) ಹೂಡಿಕೆ ಮಾಡುತ್ತಿದ್ದು, ಈಗಾಗಲೇ ಜಾಗತಿಕ ಕಂಪನಿಗಳು ಉದ್ಯೋಗಳ ಸಂಖ್ಯೆ ಸುಮಾರು ಶೇ.25ರಷ್ಟು ಹೆಚ್ಚಾಗಿದೆ. ಆದಾಯವೂ (Revenue) ಹೆಚ್ಚುತ್ತಿದ್ದು, ಭಾರತವೂ ಅಗತ್ಯ ಮೂಲ ಸೌಕರ್ಯವನ್ನು ಪೂರೈಸುವತ್ತ ಕಾರ್ಯ ನಿರ್ವಹಿಸುತ್ತಿದೆ. ಭಾರತದಲ್ಲಿ ಕೌಶಲ್ಯ (Skill) ಸಮಸ್ಯೆಯೂ ಹೆಚ್ಚುತ್ತಿದ್ದು, ಇದಕ್ಕೆ ಸೂಕ್ತ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಭಾರತ ಕಾರ್ಯ ಪ್ರವೃತ್ತವಾಗುವ ಅಗತ್ಯವಿದೆ. 

click me!