ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯಲ್ಲಿ ನೆಗೆತ ಕಂಡ ರಿಷಿ ಸುನಕ್ ದಂಪತಿ, ಪತ್ನಿಯ ಆಸ್ತಿಯೇ ಜಾಸ್ತಿ!

By Gowthami K  |  First Published May 18, 2024, 11:16 AM IST

ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಮೂರ್ತಿ ಅವರ ಆಸ್ತಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಳವಾಗಿದೆ.


ಲಂಡನ್‌ (ಮೇ.18): ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಮೂರ್ತಿ ಅವರ ಆಸ್ತಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಳವಾಗಿದ್ದು, 275ನೇ ಸ್ಥಾನದಿಂದ ಈ ವರ್ಷ 245 ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.

ಎರಡು ವರ್ಷಗಳ ಹಿಂದೆ ‘ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿ’ಯಲ್ಲಿ ಪಾದಾರ್ಪಣೆ ಮಾಡಿದ ರಿಷಿ ಮತ್ತು ಪತ್ನಿ ಅಕ್ಷತಾ ಮೂರ್ತಿ ಈ ವರ್ಷ ತಮ್ಮ ಶ್ರೇಯಾಂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಶುಕ್ರವಾರ ಬಿಡುಗಡೆಯಾದ ಪಟ್ಟಿಯಲ್ಲಿ ದಂಪತಿಗಳ ಆದಾಯವು ಇನ್ಫೋಸಿಸ್‌ನ ಲಾಭದಾಯಕ ಷೇರುಗಳೊಂದಿಗೆ ಹೆಚ್ಚಳವಾಗಿದೆ.

Tap to resize

Latest Videos

undefined

ಕ್ಯಾನ್ಸರ್‌ ಬರುವ ಅಂಶ ಪತ್ತೆ, ಎವರೆಸ್ಟ್, ಎಂಡಿಎಚ್‌ ಮಸಾಲೆಗೆ ನೇಪಾಳ ನಿಷೇಧ

ರಿಷಿ ಮತ್ತು ಅಕ್ಷತಾ ಮೂರ್ತಿ 275ನೇ ಸ್ಥಾನದಿಂದ ಈ ವರ್ಷ 245 ನೇ ಸ್ಥಾನವನ್ನು ಗಳಿಸಿ, 651 ಮಿಲಿಯನ್ ಪೌಂಡ್‌ ಆಸ್ತಿ ಹೊಂದಿದ್ದಾರೆ. ದಂಪತಿಗಳ ಆಸ್ತಿಯ ಮೌಲ್ಯದಲ್ಲಿ ಅಕ್ಷತಾ ಮೂರ್ತಿ ಷೇರು ಹೊಂದಿರುವ ಇನ್ಫೋಸಿಸ್‌ ಕಂಪೆನಿಯ ಲಾಭವೇ ಮಹತ್ವದ ಆಸ್ತಿಯೆಂದು ವರದಿ ಹೇಳಿದೆ.

ಫೆಬ್ರವರಿಯಲ್ಲಿ ಪ್ರಕಟವಾದ ಹಣಕಾಸಿನ ವರದಿ ಪ್ರಕಾರ ಅಕ್ಷತಾ ಮೂರ್ತಿಯವರ ಗಳಿಕೆಯು ಅವರ ಪತಿಗಿಂತ ಹೆಚ್ಚು ಎಂದು ಹೇಳಲಾಗುತ್ತದೆ. ಏಕೆಂದರೆ ಕಳೆದ ವರ್ಷದಲ್ಲಿ ಮೂರ್ತಿಯವರ ಅಂದಾಜು GBP 13 ಮಿಲಿಯನ್ ಲಾಭಾಂಶಕ್ಕೆ ಹೋಲಿಸಿದರೆ ಸುನಕ್ ಅವರು 2022-23 ರಲ್ಲಿ GBP 2.2 ಮಿಲಿಯನ್ ಗಳಿಸಿದ್ದಾರೆಂದು ಹೇಳಲಾಗಿದೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ರೇಟ್‌ ಎಷ್ಟು ಎಂದ ನ್ಯಾಯಮೂರ್ತಿ ಅಭಿಜಿತ್‌ಗೆ ನೋಟಿಸ್‌

ಬ್ರಿಟನ್‌ನ ಶ್ರೀಮಂತ ಕುಟುಂಬಗಳ ವಾರ್ಷಿಕ ವರದಿಯಲ್ಲಿ ಮತ್ತೊಮ್ಮೆ ಭಾರತೀಯ ಮೂಲದ ಹಿಂದೂಜಾ ಕುಟುಂಬ  ಅಗ್ರಸ್ಥಾನದಲ್ಲಿದೆ. ಕಳೆದ ವರ್ಷದಲ್ಲಿ ಅವರ ಸಂಪತ್ತು GBP 37.196 ಶತಕೋಟಿಯನ್ನು ತಲುಪಿದ್ದು, ಲಂಡನ್ ನ ಹೃದಯಭಾಗದಲ್ಲಿ ಅವರ ಹೊಚ್ಚ ಹೊಸ ಐಷಾರಾಮಿ OWO ಹೋಟೆಲ್ ಅನ್ನು  ತೆರೆಯುವ ಮೂಲಕ  ಹೆಚ್ಚಿಸಿಕೊಂಡಿದ್ದಾರೆ.

ಯುಕೆ ಮೂಲದ ಕುಟುಂಬದ ಕಂಪನಿಗಳ ಸಮೂಹದ ಅಧ್ಯಕ್ಷ ಜಿ.ಪಿ. ಹಿಂದೂಜಾ ನೇತೃತ್ವದಲ್ಲಿ 48 ದೇಶಗಳಲ್ಲಿ ಮತ್ತು ಹಲವಾರು ವಲಯಗಳಲ್ಲಿ ಕಾರ್ಯನಿರ್ವಹಿಸುತ್ತದೆ. ವಾಹನ, ತೈಲ ಮತ್ತು ವಿಶೇಷ ರಾಸಾಯನಿಕಗಳು, ಬ್ಯಾಂಕಿಂಗ್ ಮತ್ತು ಹಣಕಾಸು, ಐಟಿ, ಸೈಬರ್ ಭದ್ರತೆ, ಆರೋಗ್ಯ ರಕ್ಷಣೆ, ವ್ಯಾಪಾರ, ಮೂಲಸೌಕರ್ಯ ಯೋಜನೆ ಅಭಿವೃದ್ಧಿ, ಮಾಧ್ಯಮ ಮತ್ತು ಮನರಂಜನೆ, ವಿದ್ಯುತ್ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಚಾಚಿಕೊಂಡಿದೆ.

click me!