ಭಾರತದ ಆರ್ಥಿಕತೆಗೆ ವಿಶ್ವಸಂಸ್ಥೆ ಮೆಚ್ಚುಗೆ;2024ನೇ ಸಾಲಿನ GDP ಪ್ರಗತಿ ನಿರೀಕ್ಷಿತ ದರ ಶೇ.6.2ರಿಂದ ಶೇ.6.9ಕ್ಕೆ ಏರಿಕೆ

By Anusha Shetty  |  First Published May 17, 2024, 5:42 PM IST

ಇತ್ತೀಚೆಗಷ್ಟೇ ಐಎಂಎಫ್ 2024ನೇ ಸಾಲಿನಲ್ಲಿ ಭಾರತದ ಆರ್ಥಿಕತೆ ವಿಶ್ವದಲ್ಲೇ ಅತ್ಯುತ್ತಮ ನಿರ್ವಹಣೆ ತೋರಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿತ್ತು. ಈಗ ವಿಶ್ವಸಂಸ್ಥೆ ಕೂಡ ಭಾರತ ಆರ್ಥಿಕಾಭಿವೃದ್ಧಿಯನ್ನು ಹೊಗಳಿದ್ದು, 2024ನೇ ಸಾಲಿನ ಜಿಡಿಪಿ ಪ್ರಗತಿ ನಿರೀಕ್ಷಿತ ದರವನ್ನು ಶೇ.6.2ರಿಂದ ಶೇ.6.9ಕ್ಕೆ ಏರಿಕೆ ಮಾಡಿದೆ. 
 


ನವದೆಹಲಿ (ಮೇ 17): ಇತ್ತೀಚಿನ ದಿನಗಳಲ್ಲಿ ಇಡೀ ವಿಶ್ವವೇ ಭಾರತವನ್ನು ಬೆರಗುಗಣ್ಣಿನಿಂದ ನೋಡುತ್ತಿದೆ. ಇದಕ್ಕೆ ಕಾರಣ ಇಡೀ ವಿಶ್ವವೇ ಹಣದುಬ್ಬರ ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಭಾರತದ ಆರ್ಥಿಕತೆ ಮಾತ್ರ ಏರುಗತಿಯ ಬೆಳವಣಿಗೆಯ ಪಥದಲ್ಲಿದೆ. ಇತ್ತೀಚೆಗಷ್ಟೇ 2024ನೇ ಸಾಲಿನಲ್ಲಿ ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯಾಗಿ ಮುಂದುವರಿಯಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತಿಳಿಸಿತ್ತು. ಈಗ ವಿಶ್ವಸಂಸ್ಥೆ 2024ನೇ ಸಾಲಿನ ಭಾರತದ ಜಿಡಿಪಿ ಪ್ರಗತಿ ದರವನ್ನು ಪರಿಷ್ಕರಿಸಿದೆ. ಈ ವರ್ಷದ ಜನವರಿಯಲ್ಲಿ ಭಾರತದ ಜಿಡಿಪಿ ಪ್ರಗತಿ ನಿರೀಕ್ಷಿತ ದರ  ಶೇ.6.2ರಷ್ಟಿರಲಿದೆ ಎಂದಿದ್ದ ವಿಶ್ವಸಂಸ್ಥೆ, ಗುರುವಾರ (ಮೇ 17) ಇದನ್ನು ಶೇ.6.9ಕ್ಕೆ ಹೆಚ್ಚಿಸಿದೆ. ನಿನ್ನೆ ಬಿಡುಗಡೆ ಮಾಡಿದ ವರದಿಯಲ್ಲಿ ವಿಶ್ವಸಂಸ್ಥೆ ಭಾರತದ ಜಿಡಿಪಿ ದರವನ್ನು ಪರಿಷ್ಕರಿಸಿದೆ. ಅಷ್ಟೇ ಅಲ್ಲ, 2025ನೇ ಸಾಲಿನಲ್ಲಿ ಭಾರತದ ಜಿಡಿಪಿ ಶೇ.6.6ರಷ್ಟಿರಲಿದೆ ಎಂದು ತಿಳಿಸಿದೆ. ಪ್ರಬಲವಾದ ಸಾರ್ವಜನಿಕ ಹೂಡಿಕೆ ಹಾಗೂ ಚೇತರಿಸಿಕೊಳ್ಳುತ್ತಿರುವ ಖಾಸಗಿ ಬಳಕೆ ಭಾರತದ ಆರ್ಥಿಕಾಭಿವೃದ್ಧಿಗೆ ಹೊಸ ದಿಕ್ಕನ್ನು ತೋರಲಿದೆ ಎಂದು  ವಿಶ್ವಸಂಸ್ಥೆ ತಿಳಿಸಿದೆ. 

ಗುರುವಾರ ವಿಶ್ವಸಂಸ್ಥೆ ಬಿಡುಗಡೆಗೊಳಿಸಿದ 'ವಿಶ್ವ ಆರ್ಥಿಕಾ ಪರಿಸ್ಥಿತಿ ಹಾಗೂ ನಿರೀಕ್ಷೆಗಳು -ಮಧ್ಯ 2024ರ ಅನ್ವಯ 'ಭಾರತದ ಆರ್ಥಿಕತೆ 2024ನೇ ಸಾಲಿನಲ್ಲಿ ಶೇ.6.9ರಷ್ಟು ವಿಸ್ತರಿಸಲಾಗಿದೆ. 2025ನೇ ಸಾಲಿನಲ್ಲಿ ಶೇ.6.6ರಷ್ಟಿರಲಿದೆ. ಪ್ರಬಲವಾದ ಸಾರ್ವಜನಿಕ ಹೂಡಿಕೆ ಹಾಗೂ ಖಾಸಗಿ ಬಳಕೆ ಚೇತರಿಕೆಯಿಂದ ಭಾರತದ ಆರ್ಥಿಕತೆ ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದೆ. ಈ ವರ್ಷದ ಜನವರಿಯಲ್ಲಿ ವಿಶ್ವಸಂಸ್ಥೆ ಭಾರತದ ಜಿಡಿಪಿ ಅಂದಾಜನ್ನು ಶೇ.6.2ಕ್ಕೆ ನಿಗದಿಪಡಿಸಿತ್ತು. ಆದರೆ, ಈಗ ಭಾರತದ ಆರ್ಥಿಕ ಬೆಳವಣಿಗೆ ಅಂದಾಜನ್ನು ಶೇ.6.9ರಷ್ಟಿರಲಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. 

Tap to resize

Latest Videos

undefined

2024ನೇ ಸಾಲಿನಲ್ಲೂ ಜಾಗತಿಕ ಆರ್ಥಿಕತೆಯಲ್ಲಿ ಭಾರತ ಬೆಸ್ಟ್ ಪರ್‌ಫಾರ್ಮರ್‌ : ಐಎಂಎಫ್ ಮೆಚ್ಚುಗೆ

ಭಾರತದಲ್ಲಿ ಗ್ರಾಹಕರ ಬೆಲೆ ಹಣದುಬ್ಬರ 2023ರಲ್ಲಿ ಶೇ.5.6ರಷ್ಟಿದ್ದು, 2024ರಲ್ಲಿ ಶೇ.4.5ಕ್ಕೆ ಇಳಿಕೆಯಾಗುವ ನಿರೀಕ್ಷೆ ವ್ಯಕ್ತಪಡಿಸಲಾಗಿದೆ. ಇದರಿಂದ ಹಣದುಬ್ಬರ ಆರ್ ಬಿಐ ನಿಗದಿತ ಗುರಿಯಾದ ಶೇ.2ರಿಂದ ಶೇ.6ರೊಳಗೆ ಇರಲಿದೆ. ಇದೇ ರೀತಿ 2023ನೇ ಸಾಲಿನಲ್ಲಿ ಇತರ ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಹಣದುಬ್ಬರ ದರ ಇಳಿಕೆಯಾಗಿದೆ. ಇನ್ನು 2024ನೇ ಸಾಲಿನಲ್ಲಿ ಇನ್ನಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ. ಮಾಲ್ಡೀವ್ಸ್ ನಲ್ಲಿ ಶೇ.2.2ರಷ್ಟಿದ್ದು, ಇರಾನ್ ನಲ್ಲಿ ಶೇ.33.6ರಷ್ಟಿದೆ. ಕೆಲವೊಂದು ಬದಲಾವಣಗಳ ಹೊರತಾಗಿ 2024ರ ಮೊದಲ ತ್ರೈಮಾಸಿಕದಲ್ಲಿ ಆಹಾರ ಬೆಲೆಗಳು ಬಾಂಗ್ಲಾದೇಶ ಹಾಗೂ ಭಾರತದಲ್ಲಿ ಏರಿಕೆಯ ಮಟ್ಟದಲ್ಲಿವೆ.

ಇನ್ನು ಭಾರತದಲ್ಲಿ ಕಾರ್ಮಿಕ ಮಾರುಕಟ್ಟೆ ಸೂಚ್ಯಂಕ ಕೂಡ ಸಾಕಷ್ಟು ಬೆಳವಣಿಗೆ ಕಂಡಿದೆ. ಹಾಗೆಯೇ ಕಾರ್ಮಿಕರ ಪಾಲ್ಗೊಳ್ಳುವಿಕೆ ಕೂಡ ಹೆಚ್ಚಿದೆ. ವಿತ್ತೀಯ ಕೊರತೆಯನ್ನು ನಿಧಾನವಾಗಿ ತಗ್ಗಿಸಲು ಭಾರತ ಸರ್ಕಾರ ಬದ್ಧವಾಗಿದೆ. ಹಾಗೆಯೇ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಕೂಡ ಮುಂದಾಗಿದೆ. 

ಭಾರತದ ಆರ್ಥಿಕತೆಯ ಅತ್ಯುತ್ತಮ ನಿರ್ವಹಣೆ ಹಾಗೂ ಪಾಕಿಸ್ತಾನ ಮತ್ತು ಶ್ರೀಲಂಕಾ ಆರ್ಥಿಕತೆ ಸ್ವಲ್ಪ ಮಟ್ಟಿನ ಚೇತರಿಕೆ ಕಂಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಏಷ್ಯಾದ ಆರ್ಥಿಕತೆ ಬಲಿಷ್ಟವಾಗಿಯೇ ಇರಲಿದೆ ಎಂಬ ನಿರೀಕ್ಷೆಯಿದೆ. 

ಭಾರತದ ಆರ್ಥಿಕ ಶಿಸ್ತಿಗೆ ಐಎಂಎಫ್‌ ಮುಕ್ತ ಪ್ರಶಂಸೆ

ಪ್ರಾದೇಶಿಕ ಜಿಡಿಪಿ 2024ನೇ ಸಾಲಿನಲ್ಲಿ ಶೇ.5.8ರಷ್ಟು ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ. ಹಾಗೆಯೇ 2025ರಲ್ಲಿ ಶೇ.5.7ರಷ್ಟು ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ. ಆದರೆ, ಇದು 2023ನೇ ಸಾಲಿಗಿಂತ ಕಡಿಮೆ. 2023ನೇ ಸಾಲಿನಲ್ಲಿ ಜಿಡಿಪಿ ಶೇ.6.2ರಷ್ಟು ಬೆಳವಣಿಗೆ ದಾಖಲಿಸಿತ್ತು. ಈಗಲೂ ಬಿಗಿಯಾದ ಹಣಕಾಸಿನ ಪರಿಸ್ಥಿತಿಗಳು ಹಾಗೂ ಹಣಕಾಸು ಹಾಗೂ ಬಾಹ್ಯ ಅಸಮತೋಲನ ದಕ್ಷಿಣ ಏಷ್ಯಾದ ಬೆಳವಣಿಗೆ ನಿರ್ವಹಣೆ ಮೇಲೆ ಹೆಚ್ಚಿನ ಭಾರ ಹೇರಲಿದೆ. ಇದರ ಜೊತೆಗೆ ಭೌಗೋಳಿಕ ರಾಜಕೀಯ ಒತ್ತಡಗಳು ಹಾಗೂ ಕೆಂಪು ಸಮುದ್ರದಲ್ಲಿನ ಅಡಚಣೆಗಳಿಂದ ಪ್ರಾದೇಶಿಕ ಆರ್ಥಿಕಾ ಮೇಲ್ನೋಟಕ್ಕೆ ಅಪಾಯ ತಂದೊಡ್ತಂದೊಡ್ಡುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. 

click me!