ಇಶಾ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಮೆಹ್ತಾ, ಆನಂದ್ ಪಿರಮಾಲ್, ಮತ್ತು ಕೋಕಿಲಾಬೆನ್ ಅಂಬಾನಿ ಸೇರಿದಂತೆ ಇಡೀ ಅಂಬಾನಿ ಕುಟುಂಬ ಮಾರ್ಚ್‌ನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮೊದಲ ವಿವಾಹಪೂರ್ವ ಸಂಭ್ರಮದಲ್ಲಿ ಭಾಗಿಯಾಗಿತ್ತು. ಇದಕ್ಕೆ ಅಂದಾಜು 1260 ಕೋಟಿ ರೂಪಾಯಿ ಖರ್ಚಾಗಿತ್ತು.
ಮುಂಬೈ (ಮೇ.17): ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇನ್ನು 13 ದಿನಗಳಲ್ಲೇ ಈ ಜೋಡಿ ಮತ್ತೊಂದು ಐಷಾರಾಮಿ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದು ಅದರ ವಿವರಗಳು ಬರಲಾರಂಭಿಸಿವೆ. ಹೌದು ಕೋಟ್ಯಧಿಪತಿ ಜೋಡಿ ಶೀಘ್ರದಲ್ಲೇ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ 2ನೇ ವಿವಾಹ ಪೂರ್ವ ಕಾರ್ಯಕ್ರಮವನ್ನು ಆಯೋಜನೆ ಮಾಡಲಿದೆ. ಯುವ ಜೋಡಿಯ ಮೊದಲ ವಿವಾಹ ಪೂರ್ವ ಕಾರ್ಯಕ್ರಮ ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ 1 ರಿಮದ 3ರವರೆಗೆ ನಡೆದಿದ್ದವು. ಗಣ್ಯಾತಿಗಣ್ಯರು ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಪಾಪ್ ತಾರೆ ರಿಹಾನ್ನ ಅವರ ಶೋ, ಜಾಗತಿಕ ಟೆಕ್ ಕಂಪನಿಗಳ ಸಿಇಒ, ಬಾಲಿವುಡ್ ಸ್ಟಾರ್, ಪಾಪ್ ಐಕಾನ್, ರಾಜಕಾರಣಿಗಳು ಭಾಗಿಯಾಗಿದ್ದರು.ಈಗ ವಿಶ್ವದ ಶ್ರೀಮಂತ ಜೋಡಿಯಾದ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಮೇ 28 ರಿಂದ 30ರವರೆಗೆ ಮೂರು ದಿನಗಳ ಕಾಲ 2ನೇ ವಿವಾಹಪೂರ್ವ ಕಾರ್ಯಕ್ರಮವನ್ನು ಆಯೋಜನೆ ಮಾಡಲಿದ್ದಾರೆ. ಈ ಬಾರಿ ಮೂರು ದಿನದ ಕಾರ್ಯಕ್ರಮ ದಕ್ಷಿಣ ಫ್ರಾನ್ಸ್‌ನ ಕರಾವಳಿಯಲ್ಲಿರುವ ಐಷಾರಾಮಿ ಕ್ರೂಸ್ ಶಿಪ್‌ನಲ್ಲಿ ನಡೆಯಲಿದೆ.
ಇಟಲಿಯಿಂದ ಕ್ರೂಸ್ ಶಿಪ್ ಹೊರಡಲಿದ್ದು, ದಕ್ಷಿಣ ಫ್ರಾನ್ಸ್‌ನಲ್ಲಿ ತನ್ನ ಪ್ರಯಾಣ ಮಾಡಲಿದೆ. ಇದರಲ್ಲಿ ಒಟ್ಟು 800 ಗಣ್ಯರು ಇರಲಿದ್ದಾರೆ. ವರದಿಯ ಪ್ರಕಾರ, ಈ ಕ್ರೂಸ್ ಹಡಗಿನಲ್ಲಿರುವ ಅತಿಥಿಗಳ ಎಲ್ಲಾ ಅಗತ್ಯಗಳನ್ನು ಪೂರೈಸಲು 600 ಸಿಬ್ಬಂದಿಯನ್ನು ಈಗಾಗಲೇ ನೇಮಿಸಲಾಗಿದೆ. ಮೇ 28 ರಂದು ಇಟಲಿಯಿಂದ ಕ್ರೂಸ್ ಶಿಪ್ ಹೊರಡಲಿದ್ದು, 2365 ನಾಟಿಕಲ್ ಮೈಲು ದೂರು ಅಂದರೆ 4380 ಕಿಲೋಮೀಟರ್ ಪ್ರಯಾಣ ಮಾಡಲಿದೆ.
ಇಶಾ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಮೆಹ್ತಾ, ಆನಂದ್ ಪಿರಮಾಲ್, ಮತ್ತು ಕೋಕಿಲಾಬೆನ್ ಅಂಬಾನಿ ಸೇರಿದಂತೆ ಇಡೀ ಅಂಬಾನಿ ಕುಟುಂಬ ಮಾರ್ಚ್‌ನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮೊದಲ ವಿವಾಹಪೂರ್ವ ಸಂಭ್ರಮದಲ್ಲಿ ಭಾಗಿಯಾಗಿತ್ತು. ಇದಕ್ಕೆ ಅಂದಾಜು 1260 ಕೋಟಿ ರೂಪಾಯಿ ಖರ್ಚಾಗಿತ್ತು.
ಮಾರ್ಕ್ ಜುಕರ್‌ಬರ್ಗ್ ಸ್ಟೈಲ್‌ಅನ್ನೇ ಬದಲಾಯಿಸಿಬಿಟ್ಟ ಮುಖೇಶ್ ಅಂಬಾನಿ, ಫೇಸ್‌ಬುಕ್ ಮಾಲೀಕ ಇಂದು ಫ್ಯಾಶನ್ ಐಕಾನ್!
ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ತಮ್ಮ ಕಿರಿಯ ಮಗ ಅನಂತ್ ಅಂಬಾನಿ ಅವರ ಮದುವೆಯನ್ನು ಅತ್ಯಂತ ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ತಮ್ಮ ಕೈಯಲ್ಲಿ ಸಾಧ್ಯವಿರುವ ಎಲ್ಲದನ್ನೂ ಮಾಡುತ್ತಿದ್ದಾರೆ. ಅನಂತರ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಜುಲೈ 12 ರಂದು ಮುಂಬೈನಲ್ಲಿ ನಡೆಯಲಿದೆ.
ಮಧ್ಯರಾತ್ರಿ 3 ಗಂಟೆಗೆ ಊಟ ಮಾಡುತ್ತಿದ್ದರು; ಅನಂತ್ ಅಂಬಾನಿ ಪ್ರೀ-ವೆಡ್ಡಿಂಗ್ ಬಗ್ಗೆ ರಾಮೇಶ್ವರಂ ಕೆಫೆ ಮಾಲೀಕರ ಮಾತು