ವುಹಾನ್ ಇಸ್ಟಿಟ್ಯೂಟ್, WHOದ 25 ಸಾವಿರ ಪಾಸ್ ವರ್ಡ್ ಕಳ್ಳತನ, ಯಾರ ಕೈಚಳಕ?
ಕೊರೋನಾ ವೈರಸ್ ವಿರುದ್ಧದ ಸಮರದ ವೇಳೆ ಹೊರಬಂದ ಆತಂಕಕಾರಿ ಮಾಹಿತಿ/ ಬಿಲ್ ಗೇಟ್ಸ್ ಅವರ ಗೇಟ್ಸ್ ಫೌಂಡೇಶನ್, ವಿಶ್ವ ಆರೋಗ್ಯ ಸಂಸ್ಥೆ ಮತ್ತು ವುಹಾನ್ ಇಸ್ಟಿಟ್ಯೂಪ್ ಆಫ್ ವೈರೋಲಜಿಯ ಮಾಹಿತಿಗಳು ಹ್ಯಾಕ್/ ಅಮೆರಿಕದ ಮೂಲದ ಹ್ಯಾಕರ್ಸ್ ಗಳಿಂದ ಕೆಲಸ
ವಾಷಿಂಗ್ ಟನ್(ಏ. 22) ಕೊರೋನಾ ವೈರಸ್ ವಿಶ್ವವನ್ನೇ ವ್ಯಾಪಿಸಿರುವಾಗ ಮತ್ತೊಂದು ಸ್ಫೋಟಕ ಸುದ್ದಿ ಹೊರಬಂದಿದೆ. ಬಿಲ್ ಗೇಟ್ಸ್ ಅವರ ಗೇಟ್ಸ್ ಫೌಂಡೇಶನ್, ವಿಶ್ವ ಆರೋಗ್ಯ ಸಂಸ್ಥೆ ಮತ್ತು ವುಹಾನ್ ಇಸ್ಟಿಟ್ಯೂಪ್ ಆಫ್ ವೈರಾಲಜಿಯ ಅಮೂಲ್ಯ ಮಾಹಿತಿಗಳನ್ನು ಹ್ಯಾಕರ್ಸ್ ಗಳು ಕದ್ದಿದ್ದಾರೆ.
ಹೌದು ಇಂಥದ್ದೊಂದು ವರದಿ ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಆಗುತ್ತಿದೆ. ಯುಎಸ್‌ಎ ಮೂಲದ ಹ್ಯಾಕರ್ಸ್ ಗ್ರೂಪೊಂದು ಹ್ಯಾಕ್ ಮಾಡಿರುವುದಾಗಿ ಹೇಳಿಕೊಂಡಿದೆ. ಸಾವಿರಾರು ಇಮೇಲ್ ಗಳು, ಪಾಸ್ ವರ್ಡ್ ಗಳು ಮತ್ತು ಡಾಕ್ಯೂಮೆಂಟ್ ಗಳನ್ನು ಕಳ್ಳತನ ಮಾಡಿರುವುದಾಗಿ ಹೇಳಿಕೊಂಡಿದೆ.
ಕಾಮಾಸಕ್ತಿ ಹೆಚ್ಚಿಸಿಕೊಳ್ಳಲು ಕಿಮ್ ಕಮಾಲ್, ಸರ್ಪದ ವೈನ್ ಕುಡಿತಾನೆ ತಾಕತ್ ವಾಲ್
SITE ಗುಪ್ತಚರ ದಳ ನೀಡಿರುವ ಮಾಹಿತಿಯಂತೆ, ಈ ಸಂಸ್ಥೆಗಳಿಗೆ ಸೇರಿದ 25 ಸಾವಿರ ಇಮೇಲ್ ಅಡ್ರೆಸ್ ಮತ್ತು ಪಾಸ್ ವರ್ಡ್ ಗಳನ್ನು ಹ್ಯಾಕರ್ಸ್ ಗಳು ಕಳ್ಳತನ ಮಾಡಿದ್ದಾರೆ ಎಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರ ಚರ್ಚೆಹೆ ಕಾರಣವಾಗಿದ್ದು ಹಿಂದಿನ ಅನೇಕ ಲೀಕ್ ಗಳಿಗೆ ತಾಳೆ ಹಾಕಲಾಗುತ್ತಿದೆ.