ಮಿಡತೆಗಳ ದಾಳಿಗೆ ಹೈರಾಣ: ನ್ಯಾಶನಲ್ ಎಮರ್ಜೆನ್ಸಿ ಘೋಷಿಸಿದ ಪಾಕಿಸ್ತಾನ!
ಪಾಕಿಸ್ತಾನದಲ್ಲಿ ಮರಭೂಮಿ ಮಿಡತಡಗಳ ಹಾವಳಿ| ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಇಮ್ರಾನ್ ಸರ್ಕಾರ| ದಕ್ಷಿಣ ಪಂಜಾಬ್ ಪ್ರಾಂತ್ಯದ ಮೇಲೆ ದಾಳಿ ಆರಂಭಿಸಿರುವ ಮರಭೂಮಿ ಮಿಡತೆಗಳು| 9 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆದ ಬೆಳೆಗಳಿಗೆ ಹಾನಿ ಸಂಭವ | 7.3 ಬಿಲಿಯನ್ ಪಾಕಿಸ್ತಾನಿ ರೂ.ಗಳನ್ನು ಮೀಸಲಿರಿಸಿದ ಸರ್ಕಾರ| ಬೆಳೆ ನಷ್ಟ ತಡೆಗಟ್ಟಲು ಅಗತ್ಯ ಕ್ರಮಕ್ಕೆ ಇಮ್ರಾನ್ ಖಾನ್ ಸೂಚನೆ|
ನವದೆಹಲಿ(ಫೆ.02): ಮರಭೂಮಿ ಮಿಡತೆಗಳ ದಾಳಿಯಿಂದ ಹೈರಾಣಾಗಿರುವ ಪಾಕಿಸ್ತಾನ ರಾಷ್ಟ್ರೀಯ ವಿಪತ್ತನ್ನು ಘೋಷಿಸಿದ್ದು, ಬೆಳೆಗಳ ರಕ್ಷಣೆಗೆ ತುರ್ತು ಕ್ರಮ ಕೖಗೊಳ್ಳುವಂತೆ ಅಧಿಕಾರಿಗೆ ಖಡಕ್ ಸೂಚನೆ ನೀಡಿದೆ.
ಪಾಕ್’ನ ಸಿಂಧ್ ಪ್ರದೇಶದಲ್ಲಿ ಬೆಳೆಗಳನ್ನು ನಾಶ ಮಾಡಿರುವ ಮರಭೂಮಿ ಮಿಡತೆಗಳು, ಇದೀಗ ಪಂಜಾಬ್ ಪ್ರಾಂತ್ಯದ ಮೇಲೆ ದಾಳಿ ಆರಂಭಿಸಿವೆ.
ಈ ಹಿನ್ನೆಲೆಯಲ್ಲಿ ಮರುಭೂಮಿ ಮಿಡತೆಗಳ ಆಕ್ರಮಣಕಾರಿ ಹಿಂಡುಗಳನ್ನು ತೊಡೆದು ಹಾಕಲು ಪಾಕಿಸ್ತಾನ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ.
ನ್ಯೂಸ್ ಪೇಪರ್ ಓದೋದನ್ನೇ ಬಿಟ್ಟಿದ್ದಾರಂತೆ ಇಮ್ರಾನ್ ಖಾನ್!
ದೇಶದಲ್ಲಿ ಮಿಡತೆ ಹರಡುವುದನ್ನು ತಡೆಗಟ್ಟಲು ಮತ್ತು ಬೆಳೆ ನಷ್ಟವನ್ನು ತಡೆಗಟ್ಟಲು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಇಮ್ರಾನ್ ಖಾನ್ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
2019ರಿಂದಲೇ ಮರಭೂಮಿ ಮಿಡತೆಗಳ ದಾಳಿ ಆರಂಭವಾಗಿದ್ದು, ಪಾಕ್’ನ ಸಿಂಧ್, ದಕ್ಷಿಣ ಪಂಜಾಬ್ ಮತ್ತು ಖೈಬರ್ ಪಖ್ತುನ್ಖ್ವಾಗಳಲ್ಲಿ 9 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆದ ಬೆಳೆಗಳಿಗೆ ಆತಂಕ ಎದುರಾಗಿದೆ .
ಪಾಕಿಸ್ತಾನದಲ್ಲಿ ಗೋಧಿ ಹಿಟ್ಟು ಸಿಗ್ತಿಲ್ಲ: ಚಪಾತಿ ಪ್ರಿಯರು ಅಳು ನಿಲ್ಲಸ್ತಿಲ್ಲ!
ಇನ್ನು ಮರಭೂಮಿ ಮಿಡತಡಗಳ ದಾಳಿಯನ್ನು ತಪ್ಪಿಸಲು ಇಮ್ರಾನ್ ಖಾನ್ ಸರ್ಕಾರ 7.3 ಬಿಲಿಯನ್ ಪಾಕಿಸ್ತಾನಿ ರೂ.ಗಳನ್ನು ಮೀಸಲಿರಿಸಿದೆ.