Asianet Suvarna News Asianet Suvarna News

ಗಣರಾಜ್ಯೋತ್ಸವ ಸಂಭ್ರಮಾಚರಣೆ ರದ್ದುಗೊಳಿಸಿದ ಚೀನಾದ ಭಾರತೀಯ ರಾಯಭಾರ ಕಚೇರಿ!

ಈ ಬಾರಿ ಚೀನಾದ ಭಾರತೀಯ ರಾಯಭಾರ ಕಚೇರಿ ಗಣರಾಜ್ಯೋತ್ಸವ ಆಚರಿಸುವುದಿಲ್ಲ| ಗಣರಾಜ್ಯೋತ್ಸವ ಸಂಭ್ರಮಾಚರಣೆ ರದ್ದುಗೊಳಿಸಿದ ಭಾರತೀಯ ರಾಯಭಾರ ಕಚೇರಿ| ಮಾರಕ ಕೊರೋನಾ ವೈರಸ್ ಪರಿಣಾಮವಾಗಿ ಸಂಭ್ರಮಾಚರಣೆಯನ್ನು ರದ್ದು| ಟ್ವೀಟ್ ಮೂಲಕ ಮಾಹಿತಿ ನೀಡಿರುವ ಭಾರತೀಯ ರಾಯಭಾರ ಕಚೇರಿ|

Due To Corona Virus Indian Embassy In Beijing Cancels Republic Day Ceremony
Author
Bengaluru, First Published Jan 24, 2020, 1:30 PM IST

ಬೀಜಿಂಗ್(ಜ.24): ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ಸಜ್ಜುಗೊಂಡಿದ್ದ ಚೀನಾದ ಭಾರತೀಯ ರಾಯಭಾರ ಕಚೇರಿ, ಮಾರಕ ಕೊರೋನಾ ವೈರಸ್ ಪರಿಣಾಮವಾಗಿ ಸಂಭ್ರಮಾಚರಣೆಯನ್ನು ರದ್ದುಗೊಳಿಸಿದೆ.

ಚೀನಾದಲ್ಲಿ ಮಾರಕ ಕೊರೋನಾ ವೈರಸ್ ನೂರಾರು ಮಂದಿಯನ್ನು ಬಲಿ ಪಡೆದಿದ್ದು, ಈ ಹಿನ್ನೆಲೆಯಲ್ಲಿ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂಭ್ರಮಾಚರಣೆಯನ್ನು ರದ್ದುಗೊಳಿಸುವ ನಿರ್ಣಯ ಕೈಗೊಂಡಿದೆ.

ಕೊರೋನಾ ವೈರಸ್‌ಗೆ 5 ಚೀನಾ ನಗರ ಸಂಪೂರ್ಣ ಬಂದ್‌!

ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ರಾಯಭಾರ ಕಚೇರಿ, ಕೊರೋನಾ ವೈರಸ್ ಇಡೀ ಚೀನಾದಲ್ಲಿ ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಗಳನ್ನು ಹಾಗೂ ಸಭೆಗಳನ್ನು ಚೀನಾ ಸರ್ಕಾರ ರದ್ದುಪಡಿಸಿದೆ. ಹೀಗಾಗಿ ಜ.26ರ ಗಣರಾಜ್ಯೋತ್ಸವ ಸಂಭ್ರಮಾಚರಣೆ ಮಾಡದಿರುವ ನಿರ್ಣಯ ಕೈಗೊಂಡಿರುವುದಾಗಿ ಹೇಳಿದೆ.

ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಭಾರತೀಯ ರಾಯಭಾರ ಕಚೇರಿ, ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಚೀನಾ ವಿದೇಶಾಂಗ ಸಚಿವಾಲಯದ ಉಪ ಸಚಿವ ಹಾಗೂ ಭಾರತಕ್ಕೆ ಚೀನಾ ರಾಯಭಾರಿ ಲುವೋ ಝಾವೌಹುಯಿ ಅವರನ್ನು ಆಹ್ವಾನಿಸಿತ್ತು. 

ಚೀನಾದಲ್ಲಿ ಭಾರತೀಯ ಶಿಕ್ಷಕಿಗೆ ಕರೋನಾ ವೈರಸ್‌?

ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಒಟ್ಟು 830 ಜನರಲ್ಲಿ ಈ ಮಾರಕ ವೈರಾಣು ಕಂಡುಬಂದಿದೆ. ಇದರಲ್ಲಿ 177 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಚೀನಾ ಸರ್ಕಾರ ಮಾಹಿತಿ ನೀಡಿದೆ.

Follow Us:
Download App:
  • android
  • ios