Asianet Suvarna News Asianet Suvarna News

ಕೊರೋನಾ ಚಿಕಿತ್ಸೆಗಾಗಿ 10 ದಿನದಲ್ಲಿ ತಲೆ ಎತ್ತಿದ ಅತ್ಯಾಧುನಿಕ ಆಸ್ಪತ್ರೆ!

ಕೊರೋನಾ ಚಿಕಿತ್ಸೆಗಾಗಿ 10 ದಿನದಲ್ಲಿ ತಲೆ ಎತ್ತಿದ ಆಸ್ಪತ್ರೆ!| ಪೂರ್ವ ನಿರ್ಮಿತ ಗೋಡೆಗಳ ರಚನೆ ಮೂಲಕ 25 ಸಾವಿರ ಚದರಡಿಯಲ್ಲಿ ಈ ಆಸ್ಪತ್ರೆ 

China finishes new hospital in 10 days for coronavirus victims
Author
Bangalore, First Published Feb 3, 2020, 9:28 AM IST

ವುಹಾನ್‌[ಫೆ.03]: ಕೊರೋನಾ ವೈರಸ್‌ಗೆ ತುತ್ತಾಗಿರುವ ಸಾವಿರಾರು ರೋಗಿಗಳ ತ್ವರಿತ ಚಿಕಿತ್ಸೆಗಾಗಿ ಚೀನಾದಲ್ಲಿ ಕೇವಲ 10 ದಿನಗಳಲ್ಲಿ ಅತ್ಯಾಧುನಿಕ ಆಸ್ಪತ್ರೆಯೊಂದನ್ನು ನಿರ್ಮಿಸಲಾಗಿದ್ದು, ಸೋಮವಾರ ಅದರ ಉದ್ಘಾಟನೆಗೆ ಸಿದ್ಧತೆ ನಡೆದಿದೆ.

ವಿಶ್ವದೆಲ್ಲೆಡೆ ಚೀನಿ ಪ್ರವಾಸಿಗರಿಗೆ ನಿಷೇಧ: ರೆಸ್ಟೋರೆಂಟ್‌ಗಳಿಗೂ ಪ್ರವೇಶವಿಲ್ಲ!

ಪೂರ್ವ ನಿರ್ಮಿತ ಗೋಡೆಗಳ ರಚನೆ ಮೂಲಕ 25 ಸಾವಿರ ಚದರಡಿಯಲ್ಲಿ ಈ ಆಸ್ಪತ್ರೆ ನಿರ್ಮಿಸಲಾಗಿದೆ. 100ಕ್ಕೂ ಹೆಚ್ಚು ಭಾರೀ ಸಾಮರ್ಥ್ಯದ ಯಂತ್ರಗಳು ಮತ್ತು 4000ಕ್ಕೂ ಹೆಚ್ಚು ಕಾರ್ಮಿಕರ ಸತತ ಪರಿಶ್ರಮದಿಂದಾಗಿ ತ್ವರಿತ ಅವಧಿಯಲ್ಲಿ ಆಸ್ಪತ್ರೆಗೆ ನಿರ್ಮಾಣಗೊಂಡಿದೆ. ಕಾರ್ಮಿಕರಿಗೆ ಸಾಮಾನ್ಯಕ್ಕಿಂತ 3 ಪಟ್ಟು ಹೆಚ್ಚು ವೇತನ ಕೊಟ್ಟು ಈ ಕೆಲಸಕ್ಕೆ ಬಳಸಿಕೊಳ್ಳಲಾಗಿತ್ತು.

ವಿಶ್ವದೆಲ್ಲೆಡೆ ಚೀನಿ ಪ್ರವಾಸಿಗರಿಗೆ ನಿಷೇಧ: ರೆಸ್ಟೋರೆಂಟ್‌ಗಳಿಗೂ ಪ್ರವೇಶವಿಲ್ಲ!

ಈ ಆಸ್ಪತ್ರೆ 1000 ಬೆಡ್‌ ಸಾಮರ್ಥ್ಯ ಹೊಂದಿದೆ. ಕೊರೋನಾಕ್ಕೆ ತುತ್ತಾಗಿರುವವರ ಚಿಕಿತ್ಸೆಗೆ ಅನುಕೂಲವಾಗಲೆಂದು ಈ ರೋಗದ ಕೇಂದ್ರ ಸ್ಥಾನ ವುಹಾನ್‌ ಮತ್ತು ಹುಬೇ ಪ್ರಾಂತ್ಯದ ಭಾಗದಲ್ಲೇ ಈ ಆಸ್ಪತ್ರೆ ತಲೆ ಎತ್ತಿದೆ. ಅಷ್ಟೇ ಅಲ್ಲದೆ, ಹುಬೇ ಸರ್ಕಾರ ಮತ್ತೊಂದು ಪ್ರತ್ಯೇಕ ಆಸ್ಪತ್ರೆ ನಿರ್ಮಾಣ ಮಾಡುತ್ತಿದ್ದು, 1600 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆ ಬುಧವಾರ ಕಾರ್ಯಪ್ರವೃತ್ತವಾಗಲಿದೆ ಎನ್ನಲಾಗಿದೆ.

Follow Us:
Download App:
  • android
  • ios