ಅಮೆರಿಕದಲ್ಲಿ ಭಾರತೀಯರ ಮೇಲೆ ಪ್ಲಾಸ್ಮಾ ಥೆರಪಿ ಯಶಸ್ವಿ!

ಅಮೆರಿಕದಲ್ಲಿ ಭಾರತೀಯರ ಮೇಲೆ ಪ್ಲಾಸ್ಮಾ ಥೆರಪಿ ಯಶಸ್ವಿ| ಮೂವರ ಆರೋಗ್ಯದಲ್ಲಿ ಚೇತರಿಕೆ| ಕೇರಳದಲ್ಲೂ ನಡೆಯಲಿರುವ ಪ್ರಯೋಗಕ್ಕೆ ಬಲ

3 Indian Americans show recovery after transfused with plasma from recovered Coronavirus patients

ಹೂಸ್ಟನ್‌(ಏ.14): ಮಹತ್ವದ ಬೆಳವಣಿಗೆಯೊಂದರಲ್ಲಿ, ಕೊರೋನಾ ಸೋಂಕಿನಿಂದಾಗಿ ಗಂಭೀರ ಸ್ಥಿತಿಗೆ ತಲುಪಿದ್ದ ಮೂವರು ಭಾರತೀಯ ಅಮೆರಿಕನ್ನರಿಗೆ ಪ್ಲಾಸ್ಮಾ ಥೆರಪಿ ನೀಡಲಾಗಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ವಿಶ್ವದಾದ್ಯಂತ 1 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಈ ಸೋಂಕಿಗೆ ಇನ್ನೂ ಯಾವುದೇ ನಿರ್ದಿಷ್ಟಔಷಧಿ ಲಭ್ಯವಿಲ್ಲದೇ ಇರುವಾಗ ಪ್ಲಾಸ್ಮಾ ಥೆರಪಿಯಿಂದ ಹೊರಬಂದಿರುವ ಈ ಫಲಿತಾಂಶ ಸಹಜವಾಗಿಯೇ ಹೊಸ ಆಶಾಕಿರಣವಾಗಿದೆ ಕಂಡುಬಂದಿದೆ. ಭಾರತದಲ್ಲಿ ಕೇರಳ ಕೂಡ ಇಂತಹುದೇ ಪ್ರಯೋಗ ನಡೆಸಲು ಮುಂದಾಗಿದ್ದು, ಅಮೆರಿಕದಲ್ಲಿ ಸಿಕ್ಕಿರುವ ಫಲಿತಾಂಶದಿಂದ ಆ ರಾಜ್ಯದ ತಜ್ಞರಿಗೆ ಬಲ ದೊರೆತಂತಾಗಿದೆ.

ಹಂದಿ ಜ್ವರಕ್ಕಿಂತ ಕೊರೋನಾ 10 ಪಟ್ಟು ಮಾರಣಾಂತಿಕ!

ಹೂಸ್ಟನ್‌ನ ಬೇಯರ್‌ ಸೆಂಟ್‌ ಲ್ಯೂಕ್‌ ಮೆಡಿಕಲ್‌ ಸೆಂಟರ್‌ ದಾಖಲಾಗಿದ್ದ ಭಾರತೀಯ ಮೂಲದ ಟೆಕ್ಕಿಗಳಾದ ರೋಹ್‌ ಬಾವಡೇಕರ್‌, ಲವಂಗ ವೇಲುಸ್ವಾಮಿ ಮತ್ತು ಸುಶಮ್‌ ಸಿಂಗ್‌ ಸೇರಿದಂತೆ ಒಟ್ಟು 5 ಕೊರೋನಾ ಸೋಂಕಿತರ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯರು, ಅಮೆರಿಕದ ಎಫ್‌ಡಿಎ (ಆಹಾರ ಮತ್ತು ವೈದ್ಯಕೀಯ ಪ್ರಾಧಿಕಾರ)ದಿಂದ ಅನುಮತಿ ಪಡೆದು ಮೂವರಿಗೂ ಪ್ಲಾಸ್ಮಾ ಥೆರಪಿ ನೀಡಿದ್ದಾರೆ. ಇದಾದ ಬಳಿಕ ಮೂವರ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದೆ ಎಂದು ಬೇಯರ್‌ ವೈದ್ಯಕೀಯ ಕಾಲೇಜಿನ ಶೈಕ್ಷಣಿಕ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಅಶೋಕ್‌ ಬಾಲಸುಬ್ರಹ್ಮಣ್ಯಂ ತಿಳಿಸಿದ್ದಾರೆ.

ಕೊರೋನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಆ್ಯಂಟಿಬಾಡಿಗಳು ಇರುತ್ತವೆ. ಅವು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ಆ ಪ್ಲಾಸ್ಮಾವನ್ನು ತೆಗೆದು ಸೋಂಕಿತ ಅಥವಾ ಸೋಂಕು ಶಂಕೆ ಹೊಂದಿರುವ ವ್ಯಕ್ತಿಗೆ ನೀಡುವುದನ್ನೇ ಪ್ಲಾಸ್ಮಾ ಥೆರಪಿ ಎನ್ನಲಾಗುತ್ತದೆ. ಪ್ಲಾಸ್ಮಾ ಥೆರಪಿಗೆ ಒಳಗಾದ ವ್ಯಕ್ತಿಗಳು ಬೇಗನೆ ಕೊರೋನಾದಿಂದ ಗುಣಮುಖರಾಗುತ್ತಾರೆ.

ಇದೇ ವೇಳೆ 5 ರೋಗಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಇನ್ನೊಂದು ಹಂತದಲ್ಲಿ ಪ್ಲಾಸ್ಮಾ ಥೆರಪಿಗೆ ನಿರ್ಧರಿಸಲಾಗಿದೆ. ಇದಕ್ಕಾಗಿ ಅರ್ಹ ಪ್ಲಾಸ್ಮಾ ದಾನಿಗಳ ನಿರೀಕ್ಷೆಯಲ್ಲಿ ಇರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಹಂದಿ ಜ್ವರಕ್ಕಿಂತ ಕೊರೋನಾ 10 ಪಟ್ಟು ಮಾರಣಾಂತಿಕ!

ಎಫ್‌ಡಿಎ, ಅಮೆರಿಕದಲ್ಲಿ ಈವರೆಗೆ ಸಾಮಾನ್ಯ ರೋಗಿಗಳಿಗೆ ಪ್ಲಾಸ್ಮಾ ಥೆರಪಿಗೆ ಅನುಮತಿ ನೀಡಿಲ್ಲ. ಪ್ಲಾಸ್ಮಾ ಥೆರಪಿ ಕುರಿತು ಪ್ರಾಯೋಗಿಕ ಪರೀಕ್ಷೆಗಳಿಗಷ್ಟೇ ಅನುಮತಿ ನೀಡಿದೆ. ಆದರೆ ಗಂಭೀರ ಪ್ರಕರಣಗಳಲ್ಲಿ ಮಾತ್ರವೇ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ನೀಡಲು ಅನುಮತಿ ನೀಡುತ್ತಿದೆ.

ಭಾರತದಲ್ಲೂ ಇತ್ತೀಚೆಗಷ್ಟೇ ಕೇರಳ ಸರ್ಕಾರಕ್ಕೆ ಪ್ಲಾಸ್ಮಾ ಥೆರಪಿ ನೀಡಲು ಕೇಂದ್ರ ಸರ್ಕಾರ ತನ್ನ ಅನುಮತಿ ನೀಡಿತ್ತು.

ಕೊರೋನಾ ಸೋಂಕಿತರಿಗೆ ಕೇರಳದಲ್ಲಿ ಪ್ಲಾಸ್ಮಾ ಚಿಕಿತ್ಸೆ, 3-7 ದಿನದಲ್ಲಿ ಗುಣಮುಖ

ಯಾರು ಪ್ಲಾಸ್ಮಾ ದಾನ ಮಾಡಬಹುದು?

- ರೋಗಮುಕ್ತವಾದ 28 ದಿನಗಳ ಬಳಿಕ ಚೇತರಿಸಿಕೊಂಡ ವ್ಯಕ್ತಿ ನೀಡಬಹುದು.

- ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದು, 2ನೇ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದವರು

- ದಾನಿಯೊಬ್ಬನ ಪ್ಲಾಸ್ಮಾವನ್ನು ಅದೇ ರಕ್ತದ ಗುಂಪಿನ ರೋಗಿಗಳಿಗೆ ಮಾತ್ರ ನೀಡಬಹುದು

Latest Videos
Follow Us:
Download App:
  • android
  • ios