ಲಾಕ್‌ಡೌನ್ ಎಫೆಕ್ಟ್‌: ಈ ಒಂದು ವಿಚಾರದಲ್ಲಿ ಅಮೆರಿಕವನ್ನೇ ಮೀರಿಸಿದ ಭಾರತ!

ವಿಶ್ವದ ದೊಡ್ಡಣ್ಣ ಅಮೆರಿಕವನ್ನೇ ಮೀರಿಸಿದ ಭಾರತ| ದೇಶದಲ್ಲೀಗ ನಗರಕ್ಕಿಂತ ಹಳ್ಳಿಗಳಲ್ಲೇ ಇಂಟರ್ನೆಟ್‌ ಬಳಕೆದಾರರು ಹೆಚ್ಚು!| ಅಮೆರಿಕಕ್ಕಿಂತ ಭಾರತದಲ್ಲಿ ಹೆಚ್ಚು ಇಂಟರ್ನೆಟ್‌ ಬಳಕೆದಾರರು, ಚೀನಾ ನಂ.1

Internet Usage In Rural India Surpasses Urban Areas For The First Time Says Report

ಬೆಂಗಳೂರು(ಮೇ.07): ದೇಶದಲ್ಲಿ ಇದೇ ಮೊದಲ ಬಾರಿಗೆ ನಗರ ಹಾಗೂ ಪಟ್ಟಣ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್‌ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ನಗರ ಪ್ರದೇಶಗಳಲ್ಲಿ 20.5 ಕೋಟಿ ಇಂಟರ್ನೆಟ್‌ ಬಳಕೆದಾರರಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ 22.7 ಕೋಟಿ ಇಂಟರ್ನೆಟ್‌ ಬಳಕೆದಾರರಿದ್ದಾರೆ. ಅಂದರೆ, ನಗರಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್‌ ಬಳಕೆದಾರರ ಸಂಖ್ಯೆ ಶೇ.10ರಷ್ಟುಹೆಚ್ಚಿದೆ.

ಇಂಟರ್ನೆಟ್‌ ಆ್ಯಂಡ್‌ ಮೊಬೈಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಹಾಗೂ ನೀಲ್ಸನ್‌ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. 2019ರ ನವೆಂಬರ್‌ ವೇಳೆಯಲ್ಲಿ ಸಮೀಕ್ಷೆ ನಡೆಸಲಾಗಿದೆ. ಅದರ ಪ್ರಕಾರ ದೇಶದಲ್ಲಿ 5-11 ವರ್ಷದೊಳಗಿನ 7.1 ಕೋಟಿ ಮಕ್ಕಳು ಕೂಡ ಕುಟುಂಬದ ಸದಸ್ಯರ ಮೊಬೈಲ್‌ ಅಥವಾ ಕಂಪ್ಯೂಟರ್‌ನಲ್ಲಿ ಇಂಟರ್ನೆಟ್‌ ಬಳಕೆ ಮಾಡುತ್ತಿದ್ದಾರೆ. ಇವರನ್ನೂ ಸೇರಿಸಿದರೆ ದೇಶದಲ್ಲಿ ಒಟ್ಟಾರೆ 50.4 ಕೋಟಿ ಇಂಟರ್ನೆಟ್‌ ಬಳಕೆದಾರರಿದ್ದಂತಾಗುತ್ತದೆ.

ಕೊರೋನಾಗೆ ನಲುಗಿದ ವಿಶ್ವಕ್ಕೆ ಸಿಹಿಸುದ್ದಿ ಕೊಟ್ಟಿದೆ ಈ ಔಷಧಿ!

50 ಕೋಟಿ ಇಂಟರ್ನೆಟ್‌ ಬಳಕೆದಾರರಿಂದಾಗಿ ಭಾರತ ಈಗ ಜಗತ್ತಿನಲ್ಲೇ ಎರಡನೇ ಅತಿಹೆಚ್ಚು ಇಂಟರ್ನೆಟ್‌ ಬಳಕೆದಾರರಿರುವ ದೇಶವಾಗಿ ಹೊರಹೊಮ್ಮಿದೆ. ಚೀನಾ ನಂ.1 ಸ್ಥಾನದಲ್ಲಿದ್ದು, ಅಲ್ಲಿ 85 ಕೋಟಿ ಇಂಟರ್ನೆಟ್‌ ಬಳಕೆದಾರರಿದ್ದಾರೆ. ಅಮೆರಿಕ ಮೂರನೇ ಸ್ಥಾನದಲ್ಲಿದ್ದು, ಅಲ್ಲಿ 30 ಕೋಟಿ ಇಂಟರ್ನೆಟ್‌ ಬಳಕೆದಾರರಿದ್ದಾರೆ. ಆದರೆ, ಇಂಟರ್ನೆಟ್‌ ಸಂಪರ್ಕ ತಲುಪಿರುವ ಸ್ಥಳದ ವಿಷಯದಲ್ಲಿ ಭಾರತವು ಈ ಎರಡೂ ದೇಶಗಳಿಗಿಂತ ಹಿಂದಿದೆ. ಅಮೆರಿಕದಲ್ಲಿ ಶೇ.88 ಸ್ಥಳದಲ್ಲಿ ಇಂಟರ್ನೆಟ್‌ ಲಭ್ಯವಿದೆ. ಚೀನಾದಲ್ಲಿ ಶೇ.61 ಹಾಗೂ ಭಾರತದಲ್ಲಿ ಶೇ.40ರಷ್ಟುಸ್ಥಳಕ್ಕೆ ಇಂಟರ್ನೆಟ್‌ ಸಂಪರ್ಕವಿದೆ.

ಇನ್ನು, ದೇಶದಲ್ಲಿ ಮಹಿಳಾ ಇಂಟರ್ನೆಟ್‌ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. 2019ರ ಮಾಚ್‌ರ್‍ನಿಂದ ನವೆಂಬರ್‌ವರೆಗಿನ ಅವಧಿಯಲ್ಲಿ ಮಹಿಳಾ ಇಂಟರ್ನೆಟ್‌ ಬಳಕೆದಾರರ ಸಂಖ್ಯೆ ಶೇ.21ರಷ್ಟುಹೆಚ್ಚಾಗಿದ್ದರೆ, ಪುರುಷ ಇಂಟರ್ನೆಟ್‌ ಬಳಕೆದಾರರ ಸಂಖ್ಯೆ ಶೆ.9ರಷ್ಟುಹೆಚ್ಚಾಗಿದೆ.

Latest Videos
Follow Us:
Download App:
  • android
  • ios