Asianet Suvarna News Asianet Suvarna News

ಈ ಗಿಡ ಮನೆಯಲ್ಲಿದ್ರೆ ನೀವು ಕೋಟ್ಯಧೀಶರಾಗ್ತೀರಿ!

ಕೆಲವು ಶ್ರೀಮಂತರ ಮನೆಗಳಲ್ಲಿ ಕೆಲವು ನಿರ್ದಿಷ್ಡ ಗಿಡಗಳನ್ನು ಇಟ್ಟಿರುತ್ತಾರೆ. ಅದ್ಯಾಕೆ ಅಂತ ಕೇಳಿದ್ರೆ ಸತ್ಯ ಬಯಲಾಗುತ್ತೆ. ಅವರು ಅದನ್ನು ತಮ್ಮ‌ ಅದೃಷ್ಡ ಹೆಚ್ಚಿಸೋಕಾಗಿಯೇ ಇಟ್ಡಿರುತ್ತಾರೆ ಅಂತ. ಅಂಥ ಕೆಲವು ಸಸ್ಯಗಳನ್ನು ಇಂದೇ ಯಾಕೆ ನೀವು ಮನೇಲಿ ತಂದು ಇಟ್ಟುಕೋಬಾರದು?

Grow this plants to become rich according to vaastu
Author
Bengaluru, First Published Feb 29, 2020, 4:19 PM IST

ಕೋಟ್ಯಧೀಶರಾಗಬೇಕು ಅಂತ ಬಯಸುವವರಿಗೇನೂ ನಮ್ಮಲ್ಲಿ ಕಡಿಮೆಯಿಲ್ಲ. ಇದಕ್ಕೆ ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟವೂ ಕೈಗೂಡಿಸಬೇಕು. ನೀವು ನೋಡಿರ್ತೀರಾ, ಕೆಲವು ಶ್ರೀಮಂತರ ಮನೆಗಳಲ್ಲಿ ಕೆಲವು ನಿರ್ದಿಷ್ಡ ಗಿಡಗಳನ್ನು ಇಟ್ಟಿರುತ್ತಾರೆ. ಅದ್ಯಾಕೆ ಅಂತ ಕೇಳಿದ್ರೆ ಸತ್ಯ ಬಯಲಾಗುತ್ತೆ. ಅವರು ಅದನ್ನು ತಮ್ಮ‌ ಅದೃಷ್ಡ ಹೆಚ್ಚಿಸೋಕಾಗಿಯೇ ಇಟ್ಡಿರುತ್ತಾರೆ ಅಂತ. ಅಂಥ ಕೆಲವು ಸಸ್ಯಗಳನ್ನು ಇಂದೇ ಯಾಕೆ ನೀವು ಮನೇಲಿ ತಂದು ಇಟ್ಟುಕೋಬಾರದು?

ಈ ವಾಸ್ತು ಟಿಪ್ಸ್ ಪಾಲಿಸಿದ್ರೆ ನಿಮ್ಮ ಸಂಬಂಧ ಶಾಶ್ವತ 


ತುಳಸಿ
ಇದು ಸಾಮಾನ್ಯವಾಗಿ ಎಲ್ಲ ಹಿಂದೂಗಳ ಮನೇಲೂ ಇದ್ದೇ ಇರುತ್ತೆ. ಇದಕ್ಕೊಂದು ಕಟ್ಟೆ ಹಾಗೂ ಮನೆಯ ಮುಂದಿನ ಜಾಗ, ಅದಕ್ಕೆ ಪ್ರತಿದಿನ ಪೂಜೆ ಸಾಮಾನ್ಯ. ಪ್ರತಿದಿನ ಬೆಳಗ್ಗೆ ತುಳಸಿಯ ಮುಂದೆ ಕುಳಿತು ಧ್ಯಾನ, ನಮಸ್ಕಾರ, ಯೋಗ, ಮಾಡುವುದರಿಂದ ಅದೃಷ್ಟದ ಜೊತೆಗೆ ದೀರ್ಘಾಯುಸ್ಸು ಕೂಡ ಪ್ರಾಪ್ತಿ ಆಗುತ್ತೆ ಅಂತ ಶ್ರೀಮನ್ನಾರಾಯಣನ ವರ ಇದೆ. ಲಕ್ಷ್ಮೀದೇವಿ ಈ ಪುಟ್ಟ ಗಿಡದಲ್ಲಿ ನೆಲೆಸಿ ನಮಸ್ಕರಿಸಿದವರಿಗೆ ಅನುಗ್ರಹ ಮಾಡ್ತಾ ಇರ್ತಾಳೆ.


ಪಾಮ್
ಈ ಗಿಡ ಸ್ವಲ್ಪ ಎತ್ತರವಾಗಿ ಮತ್ತು ಅಗಲವಾಗಿ ಬೆಳೆಯುತ್ತೆ. ಮನೆಯ ಮುಂದೆ ಇಡೋಕೆ ಒಳ್ಳೆಯದು.  ಫೆಂಗ್ ಶುಯಿ ಪ್ರಕಾರ ಇದರಿಂದ ಹೊಮ್ಮುವ ಪಾಸಿಟಿವ್ ಎನರ್ಜಿ ಆರೋಗ್ಯಕ್ಕೂ ಮನೆಯ  ಹಣಕಾಸಿನ ಸ್ಥಿತಿಗತಿಗೂ ತುಂಬಾ ಒಳ್ಳೇದು. ದೊಡ್ಡ ಶ್ರೀಮಂತರ ಮನೇಲಿ ನೀವಿದನ್ನು ಕಾಣಬಲ್ಲಿರಿ.

ಬೆಡ್‌ರೂಂನಲ್ಲಿ ಎಂಥ ಫೋಟೋಗಳಿದ್ರೆ ರೋಮಾಂಚನ ಗೊತ್ತಾ? 

ಲಕ್ಕಿ ಬ್ಯಾಂಬೂ
ಈ ಪುಟಾಣಿ ಬಿದಿರಿನ ಗಿಡವನ್ನು ಚೀನೀಯರು ಮತ್ತು ಜಪಾನೀಯರು ಶತಮಾನಗಳಿಂದ ಲಕ್ಕಿ ಗಿಡ ಅಂತ ಮನೆಯಲ್ಲಿ ಬೆಳೆಯುತ್ತಾ ಬಂದಿದ್ದಾರೆ. ಇದು ಧ್ಯಾನಕ್ಕೆ ಬಹಳ ಹೆಲ್ಪ್ ಮಾಡುತ್ತೆ ಅಂತ ಜಪಾನಿನ ಝೆನ್ ಬೌದ್ಧರು ನಂಬಿದ್ದರು. ಹಾಗಂತ ಇದು ಸನ್ಯಾಸಿಗಳಿಗೆ ಮಾತ್ರ ಖುಷಿ ಕೊಡುತ್ತೆ ಅಂತಲ್ಲ. ಇದು ಇದ್ದಲ್ಲಿ ನೆಮ್ಮದಿ ಖಚಿತ. ನಿಮ್ಮ ಚಿಂತನಾಶಕ್ತಿಯನ್ನು ಇದು ಹೆಚ್ಚಿಸುತ್ತೆ. ಇದನ್ನು ಸಾಮಾನ್ಯವಾಗಿ ಮನೆಯ ಪೂರ್ವ ದಿಕ್ಕಿನಲ್ಲಿ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡ್ತಾರೆ. ಇದು ಒಳ್ಳೆಯ ರೂಢಿ. 

ಜೇಡ್ ಪ್ಲಾಂಟ್
ಪುಟ್ಟದಾಗಿದ್ದು, ಒಂದ್ರೂಪಾಯಿ ನಾಣ್ಯದ ಅಗಲದ ಎಲೆಗಳನ್ನು ಹೊಂದಿರೋ ಈ ಗಿಡ ಯಾವುದೇ ಟೇಬಲ್ ಮೇಲೆ ಅನಾಯಾಸವಾಗಿ ಕೂತು ನಿಮ್ಮ ಕಚೇರಿಯ ಅಂದ ಹೆಚ್ಚಿಸಬಲ್ಲದು. ದೊಡ್ಡ ಬ್ಯುಸಿನೆಸ್‌ಮನ್‌ಗಳು ಪರಸ್ಪರ ಇದನ್ನು ಗಿಫ್ಟ್ ಕೊಟ್ಟುಕೊಳ್ಳುವುದು ವಾಡಿಕೆ. ನಿಮ್ಮಲ್ಲಿರೋ ನೆಗೆಟಿವ್ ಎನರ್ಜಿಯನ್ನೆಲ್ಲ ಹೀರಿಕೊಂಡು ಮುಖದಲ್ಲಿ ನಗು ಅರಳಿಸುವಂತೆ ಮಾಡುವ ಶಕ್ತಿ ಇದಕ್ಕೆ ಇದೆ.

ಮನಿ ಪ್ಲಾಂಟ್
ಇದನ್ನಂತೂ ನೀವು ಕೇಳೇ ಇರ್ತೀರಾ. ಎಲ್ಲ ಮನೆಗಳಲ್ಲೂ ನೋಡಿರ್ತೀರಿ. ಇದು ಹೇಗೆ ಅದೃಷ್ಟ ಅಂತ ಕೇಳಿದರೆ ಅವರಿಗೆ ಗೊತ್ತೇ ಇರಲ್ಲ. ನೀವಿದನ್ನು ಚೆನ್ನಾಗಿ ಮೇಂಟೇನ್ ಮಾಡಬೇಕು. ಒಣ ಎಲೆಗಳನ್ನು ತೆಗೆದು, ಸಾಕಷ್ಟು ಬೆಳಕಿರುವಲ್ಲಿ ಇಟ್ಟು ಪೋಷಿಸಬೇಕು. ಪೂರ್ವ ದಿಕ್ಕು ಪ್ರಶಸ್ತ. ನಿಮ್ಮ ಮನೆಯ ದಾರಿದ್ರ್ಯದ ಅಂಶವನ್ನು ಇದು ಹೀರಿಕೊಂಡು, ಅದೃಷ್ಟದ ಅಂಶವನ್ನು ಉಂಟುಮಾಡುತ್ತೆ. 

ಮನೆಯೊಳಗೆ ಈ ಗಿಡಗಳಿದ್ದರೆ ಅದೃಷ್ಟ ಒಲಿಯೋದು ಗ್ಯಾರಂಟಿ

ಸುವಾಸನೆಯುಕ್ತ ಆರ್ಕಿಡ್
ಕೆಲವು ಆರ್ಕಿಡ್‌ಗಳು ನಿಮಗೆ ಅದೃಷ್ಟವನ್ನು ತರುತ್ತವೆ. ಆದರೆ ಇದನ್ನು ಆರಿಸಿಕೊಳ್ಳುವಾಗ ಹುಷಾರಾಗಿರಬೇಕು. ಗಾಢ ಕಪ್ಪು ಬಣ್ಣದ ಆರ್ಕಿಡ್‌ಗಳಿಗಿಂತ, ತಿಳಿ ಹಸಿರು ಬಣ್ಣದ, ಪಿಂಕ್ ಕಲರ್ ಹೂ ಬಿಡುವ ಆರ್ಕಿಡ್‌ಗಳು ಹೆಚ್ಚು ಅದೃಷ್ಟಕಾರಿ. ಇವು ಮನೆಯಲ್ಲಿ ಧನಾತ್ಮಕ, ಪ್ರೇಮಮಯ ವಾತಾವರಣ ಉಂಟುಮಾಡುತ್ತವೆ. ಇದು ಮನೇಲಿದ್ರೆ ನೀವು ಸಂಗಾತಿ ಜೊತೆ ಜಗಳ ಮಾಡೋದು ಸಾಧ್ಯವೇ ಇಲ್ಲ.

Follow Us:
Download App:
  • android
  • ios