Asianet Suvarna News Asianet Suvarna News

ಚಂದ್ರಯಾನ-2 ಕಳುಹಿಸಿದ ಚಂದ್ರನ ಕುಳಿಯ 3D ಫೋಟೋ!

ಚಂದ್ರಯಾನ-2 ಕಳುಹಿಸಿದ ಚಂದ್ರನ ಕುಳಿಯ 3D ಫೋಟೋ| 3D ಫೋಟೋ ಬಿಡುಗಡೆ ಮಾಡಿದ ಇಸ್ರೋ| ಬೃಹತ್ ಕುಳಿ ಸೆರೆಹಿಡಿದ ಟೆರೈನ್ ಮ್ಯಾಪಿಂಗ್ ಕ್ಯಾಮೆರಾ|  ಮೇಲ್ಮೈ ರಚನೆಯ ಮ್ಯಾಪಿಂಗ್ ಅಧ್ಯಯನಕ್ಕೆ ಫೋಟೋ ಸಹಾಯಕಾರಿ| 

Chandrayaan-2 Orbiter Sends New Pictures of the Moon Craters
Author
Bengaluru, First Published Nov 15, 2019, 7:20 PM IST

ಬೆಂಗಳೂರು(ನ.15): ಚಂದ್ರಯಾನ-2 ಆರ್ಬಿಟರ್ ಕ್ಲಿಕ್ಕಿಸಿದ  ಚಂದ್ರನ ಮೇಲ್ಮೈಯ ಕುಳಿಯೊಂದರ 3D ಫೋಟೋವನ್ನು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಿಡುಗಡೆ ಮಾಡಿದೆ.

ಚಂದ್ರಯಾನ-2 ನೌಕೆಯಲ್ಲಿರುವ ಟೆರೈನ್ ಮ್ಯಾಪಿಂಗ್ ಕ್ಯಾಮೆರಾ ಈ ಬೃಹತ್ ಕುಳಿಯನ್ನು ಸೆರೆಹಿಡಿದಿದೆ. 

ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಸದೇ ಬಿಡಲ್ಲ: ಇಸ್ರೋ ಅಧ್ಯಕ್ಷರ ಘೋಷಣೆ!

ಡಿಜಿಟಲ್ ಎಲಿವೇಶನ್ ಮಾದರಿಗಳನ್ನು ವಿಶ್ಲೇಷಿಸಿದಾಗ ಚಂದ್ರನ ಮೇಲ್ಮೈ ರಚನೆಯ ಮ್ಯಾಪಿಂಗ್ ಅಧ್ಯಯನಕ್ಕೆ ಈ ಫೋಟೋ ಸಹಾಯಕಾರಿಯಾಗಲಿದೆ ಎನ್ನಲಾಗಿದೆ.

ಚಂದ್ರನ ಮೇಲ್ಮೈ ಕ್ರೇಟರ್ಸ್(ಕುಳಿಗಳು)ಗಳಿಂದ ನಿರ್ಮಿತವಾಗಿದ್ದು, ಲಾವಾ ಟ್ಯೂಬ್‌ಗಳು ಈ ಹಿಂದಿನ ಜೀವಂತ ಜ್ವಾಲಾಮುಖಿಗಳಿಗೆ ಉದಾಹರಣೆಯಾಗಿದೆ ಎಂದು ಇಸ್ರೋ ತಿಳಿಸಿದೆ.

ಚಂದಿರ ನೀನದೆಷ್ಟು ಸುಂದರ: ಅರ್ಬಿಟರ್ ಕ್ಲಿಕ್ಕಿಸಿದ ಫೋಟೋಗಳೇ ಆಧಾರ!
 
ಕುಸಿದ ಲಾವಾ ಟ್ಯೂಬ್‌ಗಳಿಂದ ರೂಪುಗೊಂಡ ಈ ಉಬ್ಬು ಪ್ರದೇಶಗಳು ಭವಿಷ್ಯದ ಮಾನವ ಸಹಿತ ಯೋಜನೆಗಳಿಗೆ ಅನುಕೂಲಕಾರಿ ಎಂದೂ ಇಸ್ರೋ ಅಭಿಪ್ರಾಯಪಟ್ಟಿದೆ.

Follow Us:
Download App:
  • android
  • ios