ಲಾಕ್‌​ಡೌನ್‌ ಕೊಂಚ ಸಡಿಲ ಬೇಕರಿ ತಿನಿಸು ಮಾರಾ​ಟಕ್ಕೆ ಅವ​ಕಾಶ| ಬ್ರೆಡ್‌, ಬನ್‌, ಕೇಕ್‌, ಸಿಹಿ​ತಿಂಡಿ ಪಾರ್ಸೆ​ಲ್‌ ಮಾತ್ರ| ಸ್ಥಳ​ದಲ್ಲೇ ಸೇವ​ನೆಗೆ ಈ ತಿನಿ​ಸು ನೀಡುವಂತಿ​ಲ್ಲ: ರಾಜ್ಯ| ಕೇಂದ್ರ ಸರ್ಕಾ​ರ​ದಿಂದ ಈಗಾ​ಗಲೇ ಬೇಕ​ರಿಗೆ ಅನು​ಮ​ತಿ| ಇದರ ಬೆನ್ನಲ್ಲೇ ರಾಜ್ಯ​ಸ​ರ್ಕಾ​ರ​ದಿಂದಲೂ ಸಮ್ಮತಿ| ಗುಣ​ಮಟ್ಟ, ಸ್ವಚ್ಛತೆ, ಸಾಮಾ​ಜಿಕ ಅಂತರ ಕಾಯ್ದು​ಕೊ​ಳ್ಳುವ ಷರತ್ತು

 ಬೆಂಗಳೂರು(ಏ.07): ಲಾಕ್‌ಡೌನ್‌ನಿಂದ ಜನಸಾಮಾನ್ಯರಿಗೆ ತೊಂದರೆಯಾಗದಂತೆ ನಿತ್ಯ ಬಳಕೆಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದ್ದ ರಾಜ್ಯ ಸರ್ಕಾರ ಈಗ ಬೇಕರಿ ಉತ್ಪ​ನ್ನ​ಗಳು, ಸಿಹಿ ತಿಂಡಿಗಳ ಮಾರಾಟಕ್ಕೆ ಅವಕಾಶ ನೀಡಿದೆ.

ಬೇಕರಿ ಹಾಗೂ ಸಂಬಂಧಪಟ್ಟಉತ್ಪನ್ನಗಳನ್ನು ವಿಶೇಷವಾಗಿ ರೋಗಿಗಳು, ಹಿರಿಯರು, ಮಕ್ಕಳು ಹೆಚ್ಚು ಬಳಕೆ ಮಾಡುತ್ತಾರೆ.ಈ ಹಿನ್ನೆಲೆಯಲ್ಲಿ ಬೇಕರಿ, ಬಿಸ್ಕತ್‌, ಕಾಂಡಿಮೆಂಟ್‌, ಸಿಹಿ ತಿಂಡಿಗಳ ಉತ್ಪಾದನೆ, ಪೂರೈಕೆ, ಹಾಗೂ ಕನಿಷ್ಠ ಸಿಬ್ಬಂದಿಯೊಂದಿಗೆ ಬೇರೆ ಬೇರೆ ಕಡೆಗೆ ಇಲ್ಲವೇ ಸಣ್ಣ ಅಂಗಡಿಗಳಿಗೆ ಪೂರೈಸಲು ಅವಕಾಶ ನೀಡಿದೆ.

ಈ ಸಂಬಂಧ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ, ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಈ ಘಟಕಗಳು ಅತ್ಯುತ್ತಮ ಗುಣಮಟ್ಟದ ವ್ಯವಸ್ಥೆಯಡಿ, ಸ್ವಚ್ಛವಾದ ವಾತಾವರಣದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕಾರ್ಯನಿರ್ವಹಿಸಬೇಕು, ಆದರೆ ಯಾವುದೇ ಸಂದರ್ಭದಲ್ಲಿ ಇಂತಹ ಘಟಕಗಳಲ್ಲಿ ಗ್ರಾಹಕರಿಗೆ ಪೂರೈಸುವ, ಸೇವಿಸುವ ಅವಕಾಶ ಇರುವುದಿಲ್ಲ, ಕೇವಲ ಪಾರ್ಸೆಲ್‌ಗೆ ಮಾತ್ರ ಅವಕಾಶ ಇರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜನ ಲಾಕ್‌ಡೌನ್‌ ಪಾಲಿ​ಸ​ದಿದ್ದರೆ 14ರ ನಂತರವೂ ಮುಂದುವರಿಕೆ: ಸಿಎಂ

ಕೇಂದ್ರ ಸರ್ಕಾರ ಈಗಾಗಲೇ ಬೇಕರಿ, ಬಿಸ್ಕತ್‌, ಸಿಹಿ ತಿಂಡಿಗಳ ಉತ್ಪಾದನೆ, ಮಾರಾಟಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಹ ಲಾಕ್‌ಡೌನ್‌ ಆದೇಶದಿಂದ ವಿನಾಯಿತಿ ನೀಡಿದೆ. ಈಗಾಗಲೇ ನಿತ್ಯ ಬಳಕೆಯ ದಿನಸಿ ವಸ್ತುಗಳು, ತರಕಾರಿ, ಹಾಲು ಹಾಗೂ ಆನ್‌ಲೈನ್‌ ಮೂಲಕ ಆಹಾರ, ತಿಂಡಿ ತಿನಿಸುಗಳ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ.

ಪಡಿತರ ಪಡೆಯಲು ಒಟಿಪಿ ವಿನಾಯಿತಿ

ಬೆಂಗಳೂರು: ಪಡಿತರ ಅಂಗಡಿಗಳಲ್ಲಿ ಒಟಿಪಿ (ಒನ್‌ ಟೈಂ ಪಾಸ್‌ವರ್ಡ್‌) ಮೂಲಕ ಗ್ರಾಹಕರು ಪಡಿತರ ಪಡೆಯುವ ಪದ್ಧತಿಗೆ ಸದ್ಯ ವಿನಾಯಿತಿ ನೀಡಲಾಗಿದೆ. ಗ್ರಾಹಕರಿಗೆ ಏಪ್ರಿಲ್‌ ತಿಂಗಳ ಆಹಾರ ಧಾನ್ಯಗಳನ್ನು ಪಡಿತರ ಅಂಗಡಿಗಳಲ್ಲಿ ಒಟಿಪಿ ಪಡೆಯದೇ ಕೇವಲ ಸಹಿ ಪಡೆದು ವಿತರಿಸುವಂತೆ ಸರ್ಕಾರ ಆದೇಶಿಸಿದೆ.

ಕೊರೋನಾ ಎದು​ರಿ​ಸಲು ರಾಜ್ಯದಲ್ಲಿ ಭರ್ಜರಿ ಸಿದ್ಧತೆ, ಲಾಕ್‌​ಡೌನ್‌ ತೆರವು ಕಷ್ಟ!

ಹೊಸ ಪದ್ಧತಿಯಂತೆ ಗ್ರಾಹಕರಿಗೆ ಆಹಾರ ಧಾನ್ಯ ಪೂರೈಸುವಲ್ಲಿ ಯಾವುದೇ ರೀತಿ ತೊಂದರೆ ಆಗದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಆದೇಶಿಸಿದೆ.