Asianet Suvarna News Asianet Suvarna News

ಜನ ಲಾಕ್‌ಡೌನ್‌ ಪಾಲಿ​ಸ​ದಿದ್ದರೆ 14ರ ನಂತರವೂ ಮುಂದುವರಿಕೆ: ಸಿಎಂ

ಜನ ಲಾಕ್‌ಡೌನ್‌ ಪಾಲಿ​ಸ​ದಿದ್ದರೆ 14ರ ನಂತರವೂ ಮುಂದುವರಿಕೆ: ಸಿಎಂ| ನಿರ್ಲಕ್ಷ್ಯ ಮುಂದುವರೆದರೆ ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಹಿಂಪಡೆಯಲ್ಲ| ‘ಸುವರ್ಣನ್ಯೂಸ್‌-ಕನ್ನಡಪ್ರಭ’ಕ್ಕೆ ಯಡಿಯೂರಪ್ಪ ಸಂದರ್ಶನ| ಕೆಲವು ಜಿಲ್ಲೆಗಳಲ್ಲಿ ಸಡಿಲವಾದರೂ ಅಂತರ್‌ಜಿಲ್ಲಾ ಓಡಾಟಕ್ಕೆ ಅವಕಾಶ ಇಲ್ಲ| ಕೈಮುಗಿದು ಕೇಳ್ಕೋತೀನಿ, ಮನೆಯಿಂದ ಹೊರಬರಬೇಡಿ| ಈ ತಿಂಗಳು ಸರ್ಕಾರಿ ನೌಕರರ ಸಂಬಳಕ್ಕೆ ತೊಂದರೆ ಇಲ್ಲ, ಮಂದಿನ ದಿನಗಳಲ್ಲಿ ಕಷ್ಟ

CM BS Yediyurappa Interview Speaks On Lockdown In Karnataka
Author
Bangalore, First Published Apr 7, 2020, 7:16 AM IST

ಬೆಂಗಳೂರು(ಏ.07): ಲಾಕ್‌ಡೌನ್‌ ಅವಧಿಯ ಕಟ್ಟುಪಾಡುಗಳನ್ನು ರಾಜ್ಯದ ಜನತೆ ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಬಾಕಿ ಉಳಿದಿರುವ ದಿನಗಳಾದರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಏ. 14ರ ನಂತರವೂ ಲಾಕ್‌ಡೌನ್‌ ಮುಂದುವರೆಸುವುದು ಅನಿವಾರ್ಯವಾಗಲಿದೆ. ಜನರ ನಿರ್ಲಕ್ಷ್ಯ ಮುಂದುವರೆದರೆ ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಹಿಂಪಡೆಯುವುದಿಲ್ಲ.

ಹೀಗಂತ ಖಡಕ್‌ ಎಚ್ಚರಿಕೆ ನೀಡಿದ್ದಾರೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ.

ಕೊರೋನಾ ಹಾವಳಿ ತಡೆಗೆ ಕೇಂದ್ರ ಸರ್ಕಾರಕ್ಕಿಂತಲೂ ಒಂದು ವಾರ ಮೊದಲೇ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಸೋಂಕು ನಿಯಂತ್ರಣದಲ್ಲಿ ಪಾತ್ರ ವಹಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ‘ಸುವರ್ಣನ್ಯೂಸ್‌-ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ಕೊರೋನಾ ತಡೆಗೆ ಮುಂದಿನ ಸರ್ಕಾರದ ನಡೆಯೇನು ಎಂಬ ಬಗ್ಗೆ ನೀಡಿದ ಸುಳಿವು ಇದು.

ಹೊತ್ತಿನ ಊಟ ಬಿಡಲು ಸಿಎಂ ಬಿಎಸ್ ಯಡಿಯೂರಪ್ಪ ನಿರ್ಧಾರ, ಏನ್ ಕಾರಣ?

ಲಾಕ್‌ಡೌನ್‌ ಅವಧಿಯನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಈ ಮಹಾಮಾರಿಯನ್ನು ನಿಗ್ರಹಿಸಲು ಸಾಧ್ಯವಾಗುವುದಿಲ್ಲ. ಆಗ ಲಾಕ್‌ಡೌನ್‌ ಮುಂದುವರೆಸುವುದು ಸರ್ಕಾರಕ್ಕೆ ಅನಿವಾರ್ಯವಾಗಲಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಕೊರೋನಾ ತಡೆ ದಿಸೆಯಲ್ಲಿ ರಾಜ್ಯ ಸವಸಿದ ಹಾದಿಯನ್ನು ನೆನೆದ ಅವರು, ದೇಶದಲ್ಲಿ ಕೊರೋನಾ ಸೋಂಕು ಅತಿ ವೇಗವಾಗಿ ಹರಡುತ್ತಿದ್ದ ರಾಜ್ಯ ಕರ್ನಾಟಕವಾಗಿತ್ತು. ಕೊರೋನಾಗೆ ದೇಶದಲ್ಲೇ ಮೊದಲ ಸಾವು ನಮ್ಮ ರಾಜ್ಯದಲ್ಲೇ. ಆದರೆ, ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ಸೋಂಕಿನ ಪ್ರಮಾಣ ಹತೋಟಿಯಲ್ಲಿದೆ. ಅತಿ ಹೆಚ್ಚು ಸೋಂಕಿತ ಪ್ರಕರಣಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ರಾಜ್ಯ ಪ್ರಸ್ತುತ ಹತ್ತನೇ ಸ್ಥಾನಕ್ಕೆ ಜಾರಿದೆ. ಆದರೆ, ಇದಿಷ್ಟೇ ಸಾಕಾಗುವುದಿಲ್ಲ. ಜನರು ಸರ್ಕಾರಕ್ಕೆ ಸ್ಪಂದಿಸಿದರೆ ಇನ್ನಷ್ಟುಸಾಧನೆ ತೋರಬಹುದು ಎನ್ನುತ್ತಾರೆ.

ಸಂದರ್ಶನದಲ್ಲಿ ಯಡಿಯೂರಪ್ಪ ಅವರು ಹೇಳಿದ ಮಾತುಗಳ ವಿವರ ಈ ರೀತಿ ಇದೆ.

- ಏ.14ರ ಬಳಿಕ ಲಾಕ್‌ಡೌನ್‌ ಮುಗಿಯುವುದೆ?

ಡಾ.ದೇವಿಶೆಟ್ಟಿಸೇರಿದಂತೆ ಆರೋಗ್ಯ ಕ್ಷೇತ್ರದ ತಜ್ಞರು ಏಪ್ರಿಲ್‌ ಮಧ್ಯಾಂತರದಿಂದ ಮೇ ಮೊದಲ ವಾರದವರೆಗೆ ಭಾರೀ ಪ್ರಮಾಣದಲ್ಲಿ ಸೋಂಕು ಪ್ರಕರಣ ವರದಿಯಾಗಲಿದೆ. ಹೀಗಾಗಿ ಇದಕ್ಕೆ ಮನೆಯಿಂದ ಹೊರಗೆ ಬಾರದಿರುವುದೇ ಮದ್ದು ಎಂದು ಸರ್ಕಾರವೂ ಎಚ್ಚರಿಸಿ ಲಾಕ್‌ಡೌನ್‌ ವಿಧಿಸಿದೆ. ಆದರೆ, ನಮ್ಮ ದುರ್ದೈವ ಎಂದರೆ ಜನರು ಇಷ್ಟೆಲ್ಲಾ ಕಟ್ಟುನಿಟ್ಟಿನ ಕ್ರಮಗಳ ಹೊರತಾಗಿಯೂ ಅನಗತ್ಯವಾಗಿ ರಸ್ತೆಗೆ ಇಳಿಯುತ್ತಿದ್ದಾರೆ. ಏಪ್ರಿಲ್‌ 14 ಒಳಗಾಗಿ ಲಾಕ್‌ಡೌನ್‌ ನಿಲ್ಲಿಸಬಹುದು ಎಂದು ಯೋಜಿಸಿದ್ದೆವು. ಆದರೆ, ಜನರು ಅದಕ್ಕೆ ಕಲ್ಲು ಹಾಕುವ ರೀತಿ ವರ್ತಿಸುತ್ತಿದ್ದಾರೆ. ಹೀಗಾಗಿ ಕೈ ಜೋಡಿಸಿ ಪ್ರಾರ್ಥಿಸುತ್ತೇನೆ. ಮನೆಯಿಂದ ಹೊರಗೆ ಬರಬೇಡಿ. ಹೊರಗೆ ಬಂದರೆ ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಹಿಂಪಡೆಯುವುದಿಲ್ಲ.

- ಜನರು ಕಟ್ಟುನಿಟ್ಟಾಗಿ ಲಾಕ್‌ಡೌನ್‌ ಪಾಲಿಸಿದರೆ ಲಾಕ್‌ಡೌನ್‌ ಸಡಿಲಿಕೆ ಸ್ವರೂಪವೇನು?

ಈ ಬಗ್ಗೆ ಕೇಂದ್ರ ಸರ್ಕಾರ ಮಾಗದರ್ಶನ ನೀಡುತ್ತಿದೆ. ನಮ್ಮ ಪ್ರಕಾರ ಹಂತ-ಹಂತವಾಗಿ ಲಾಕ್‌ಡೌನ್‌ ಸಡಿಲಗೊಳಿಸುವ ಆಪೇಕ್ಷೆ ಇದೆ. 14ರ ಬಳಿಕ ಸಡಿಲಗೊಳಿಸಬೇಕೆ ಅಥವಾ ಬೇಡವೇ ಎಂಬುದನ್ನು ಆ ಪರಿಸ್ಥಿತಿ ಹಾಗೂ ಕೇಂದ್ರದ ಮಾರ್ಗದರ್ಶನದ ಅನುಸಾರ ನಿರ್ಣಯಿಸಲಾಗುವುದು. ಲಾಕ್‌ಡೌನ್‌ ಕೆಲವು ಜಿಲ್ಲೆಗಳಲ್ಲಿ ಸಡಿಲಗೊಳಿಸಿದರೂ ಆಯಾ ಜಿಲ್ಲೆಯಲ್ಲಿ ಅನಿವಾರ್ಯ ಸಂದರ್ಭದಲ್ಲಿ ಓಡಾಡಲು ಅವಕಾಶ ನೀಡಲಾಗುವುದು. ಆದರೆ ಯಾವುದೇ ಕಾರಣಕ್ಕೂ ಬೇರೆ ಜಿಲ್ಲೆಗಳಿಗೆ ಓಡಾಡಲು ಅವಕಾಶ ನೀಡುವುದಿಲ್ಲ. ಅನಗತ್ಯವಾಗಿ ಬೀದಿಗೆ ಇಳಿಯಲೂ ಸಹ ಅವಕಾಶ ನೀಡುವುದಿಲ್ಲ. ಹೀಗಾಗಿ ಕಟ್ಟುನಿಟ್ಟಿನ ಕಫä್ರ್ಯ ಪಾಲಿಸಿ ಲಾಕ್‌ಡೌನ್‌ ಕೊನೆಗೊಳ್ಳಲು ಅವಕಾಶ ಕೊಡಿ ಎಂದು ಜನರಲ್ಲಿ ಪ್ರಾರ್ಥಿಸುತ್ತೇನೆ.

ಸಿಎಂ BSY ಮತ್ತು ಸಿದ್ದರಾಮಯ್ಯ ನಡುವೆ ಫೋನ್ ಸಂಭಾಷಣೆ, ಚರ್ಚೆಯಾದ ವಿಚಾರಗಳು

* ದೇಶದ ಸೋಂಕಿತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ದೇಶ 10ನೇ ಸ್ಥಾನಕ್ಕೆ ಬಂದಿದೆ. ಈ ಸಾಧನೆ ಸಾಧ್ಯವಾಗಿದ್ದು ಹೇಗೆ?

ಕೊರೋನಾ ಸೋಂಕಿನ ಹಾವಳಿಯನ್ನು ಹಾಗೇ ಗಮನಿಸುತ್ತಿದ್ದಾಗ ಇದು ನಮ್ಮನ್ನೂ ದೊಡ್ಡಮಟ್ಟದಲ್ಲಿ ಕಾಡಬಹುದು ಎಂದೆನಿಸಿತು. ಹೀಗಾಗಿ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಒಂದು ವಾರ ಮೊದಲೇ ನಮ್ಮಲ್ಲಿ ಹಲವು ಸೇವೆಗಳಿಗೆ ನಿರ್ಬಂಧ ವಿಧಿಸಿ ಬಿಗಿ ಮಾಡಿದೆವು. ಪೂರ್ವಭಾವಿ ಸಿದ್ಧತೆ ಮಾಡಿಕೊಂಡು ಜನದಟ್ಟಣೆ ಕಡಿಮೆ ಮಾಡಿದೆವು. ನಂಜನಗೂಡು ಹಾಗೂ ಮತ್ತಿತರ ಕೆಲ ಪ್ರಕರಣ ಹೊರತುಪಡಿಸಿದ್ದರೆ ನಮ್ಮಲ್ಲಿ ಸೋಂಕು 70-80 ಕೂಡ ದಾಟುತ್ತಿರಲಿಲ್ಲ. ಇದೀಗ ವಿದೇಶಿ ಪ್ರಯಾಣಿಕರೂ ಸಹ ಕ್ವಾರೆಂಟೈನ್‌ ಅವಧಿಯಿಂದ ಮುಕ್ತರಾಗಿದ್ದಾರೆ. ಇನ್ನೂ ಕಟ್ಟುನಿಟ್ಟಿನ ಕ್ರಮ ಅಗತ್ಯವಿದ್ದು, ಇನ್ನೂ ಬಿಗಿ ಕ್ರಮ ಕೈಗೊಳ್ಳುತ್ತೇವೆ.

* ರಾಜ್ಯದಲ್ಲೂ ಕೊರೋನಾ ಪರೀಕ್ಷೆಗಳು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ವೈದ್ಯರಿಗೆ ಸುರಕ್ಷತೆ ಇಲ್ಲ ಅಂತಾರಲ್ಲ?

ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಅಗತ್ಯವಿರುವುದಕ್ಕೆ ಅನುದಾನದ ಕೊರತೆ ಇಲ್ಲದಂತೆ ನೋಡಿಕೊಂಡಿದ್ದೇವೆ. ಈಗಾಗಲೇ 53,040 ಪಿಪಿಇ ಕಿಟ್‌ ಲಭ್ಯವಿದ್ದು, ಇನ್ನೂ ಹೆಚ್ಚಿನ ಕಿಟ್‌ಗಳಿಗೆ ಆರ್ಡರ ಮಾಡಲಾಗಿದೆ. 2.40 ಲಕ್ಷ ಎನ್‌-95 ಮಾಸ್ಕ್‌, 6.93 ಲಕ್ಷ ಮೂರು ಪದರದ ಮಾಸ್ಕ್‌ ಸ್ಟಾಕ್‌ ಮಾಡಲಾಗಿದೆ. ಅಲ್ಲದೆ, ಪರೀಕ್ಷೆಗೆ 1 ಲಕ್ಷ ಕಿಟ್‌ಗಳ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಸ್ಯಾನಿಟೈಸರ್‌ ಸರಬರಾಜಿಗೆ 65 ಕಂಪೆನಿಗಳಿಗೆ ಸೂಚಿಸಿದ್ದು ನಿತ್ಯ 25 ಸಾವಿರ ಲೀಟರ್‌ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಪ್ರಸ್ತುತ 506 ವೆಂಟಿಲೇಟರ್‌ ಇದ್ದು, 326 ಹೊಸದಾಗಿ ಹೆಚ್ಚುವರಿಯಾಗಿ ಖರೀದಿಸುತ್ತಿದ್ದೇವೆ. ಇದಕ್ಕಾಗಿ ಎಷ್ಟುಹಣ ಬೇಕಾದರೂ ನೀಡುತ್ತಿದ್ದೇವೆ.

* ರಾಜ್ಯದ ಹಣಕಾಸು ಸ್ಥಿತಿ ಸರಿಯಿಲ್ಲ. ಸರ್ಕಾರಿ ನೌಕರರ ವೇತನಕ್ಕೂ ಹಣವಿಲ್ಲ ಎನ್ನಲಾಗುತ್ತಿದೆ?

ರಾಜ್ಯ ಹಾಗೂ ಕೇಂದ್ರ ಎರಡೂ ಕಡೆ ಹಣಕಾಸು ಸ್ಥಿತಿ ಸರಿಯಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಸದರ ಶೇ.30 ರಷ್ಟುವೇತನ ಕಡಿತಗೊಳಿಸಿ ಆದೇಶ ಮಾಡಿದ್ದಾರೆ. ರಾಜ್ಯದಲ್ಲೂ ಆರ್ಥಿಕ ಸ್ಥಿತಿ ಸರಿಯಿಲ್ಲ. ಹೀಗಾಗಿ ಪ್ರಸ್ತುತ ತಿಂಗಳು ಕಷ್ಟಪಟ್ಟಾದರೂ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ವೇತನ ನೀಡುವಂತೆ ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ವೇತನಕ್ಕೂ ಕಷ್ಟವಾಗಬಹುದು. ಸರ್ಕಾರಿ ನೌಕರರೂ ಸಹ ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ. ಅವರು ಅರ್ಥ ಮಾಡಿಕೊಂಡು ಸಹಕರಿಸಿದರೆ ಗಟ್ಟಿಯಾಗಿ ಮುನ್ನುಗ್ಗಲು ಸಾಧ್ಯವಾಗುತ್ತದೆ.

ಕರ್ನಾಟಕ-ಕೇರಳ ಗಡಿ: ದೇವೇಗೌಡ್ರ ಪತ್ರಕ್ಕೆ ಬಿಎಸ್‌ವೈ ಕೊಟ್ಟ ಜಾಣ್ಮೆ ಉತ್ತರ, ಅಬ್ಬಬ್ಬಾ...!

* ಕೊರೋನಾ ನಿಯಂತ್ರಣದ ಬಳಿಕವೂ ಹಣಕಾಸು ಸಮಸ್ಯೆ ಮುಂದುವರೆಯುತ್ತದೆಯೇ?

ಖಂಡಿತ ಮುಂದುವರೆಯುತ್ತದೆ. ಪ್ರಸ್ತುತ ಲಾಕ್‌ಡೌನ್‌ ಅವಧಿಯಲ್ಲಿ ರಾಜ್ಯಕ್ಕೆ ಯಾವುದೇ ಆದಾಯ ಇಲ್ಲ. ಹೀಗಾಗಿ ಬಜೆಟ್‌ನಲ್ಲಿ ಘೋಷಿಸಿರುವ ಪ್ರಮುಖ ಯೋಜನೆಗಳನ್ನು ಕೈ ಬಿಡಬೇಕಾಗಬಹುದು. ನಮ್ಮ ಆದ್ಯತೆ ಬಡವರಿಗೆ ಊಟ ಕೊಡುವುದು.

* ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆವ್ಯವಸ್ಥೆ ಇಲ್ಲದೆ ರಸ್ತೆಗೆ ಎಸೆಯುವಂತಾಗಿದೆ. ಮಳೆಗಾಲ ಪ್ರಾರಂಭವಾಗಿದ್ದು, ಬಿತ್ತನೆ ಬೀಜ, ರಸಗೊಬ್ಬರಕ್ಕೆ ಏನು ಸಿದ್ಧತೆಯಾಗಿದೆ?

ಮಾರುಕಟ್ಟೆಸಮಸ್ಯೆ ಕಣ್ಣಿಗೆ ಬಿದ್ದ ತಕ್ಷಣ ಟೊಮೆಟೊ ಸೇರಿದಂತೆ ಎಲ್ಲೆಲ್ಲಿ ಏನೇನು ಬೆಳೆದಿದ್ದಾರೋ ಅದನ್ನು ಮಾರುಕಟ್ಟೆಗೆ ಕಳುಹಿಸಲು ವ್ಯವಸ್ಥೆ ಮಾಡಿದ್ದೇವೆ. ಹಾಪ್‌ಕಾಮ್ಸ್‌ಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ತರಕಾರಿ ವಿತರಣೆ ಮಾಡಲು ಕ್ರಮ ಕೈಗೊಂಡಿದ್ದೇವೆ. ನಮಗೆ ಆಹಾರ, ತರಕಾರಿ, ಹಣ್ಣುಗಳ ಕೊರತೆ ಇಲ್ಲ. ನೀವು ಮುಗಿ ಬಿದ್ದು ಖರೀದಿ ಮಾಡಲು ಹೋಗಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದೇವೆ. ಅಲ್ಲದೆ, ರೈತನ ಮಗನಾಗಿ ಹೇಳುತ್ತಿದ್ದೇನೆ. ಬಿತ್ತನೆ ಬೀಜ, ರಸಗೊಬ್ಬರ ಈಗಾಗಲೇ ದಾಸ್ತಾನು ಮಾಡಿದ್ದೇವೆ. ವೈಯಕ್ತಿಕವಾಗಿ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇವೆ.

'ಲಾಕ್‌ಡೌನ್‌ ಪಾಲಿಸದಿದ್ದರೆ ಗಂಡಾಂತರ, ಎಚ್ಚರ ತಪ್ಪಿದ್ರೆ ಪಾಶ್ಚಾತ್ಯ ದೇಶಗಳ ಸ್ಥಿತಿ'

ಸರ್ಕಾರಿ ನೌಕ​ರರಿಗೆ ಸಂಬಳ ಕೊಡೋದು ಕಷ್ಟ​ವಾ​ಗು​ತ್ತೆ

ರಾಜ್ಯದಲ್ಲೂ ಆರ್ಥಿಕ ಸ್ಥಿತಿ ಸರಿಯಿಲ್ಲ. ಹೀಗಾಗಿ ಪ್ರಸ್ತುತ ತಿಂಗಳು ಕಷ್ಟಪಟ್ಟಾದರೂ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ವೇತನ ನೀಡುವಂತೆ ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ವೇತನಕ್ಕೂ ಕಷ್ಟವಾಗಬಹುದು.

"

Follow Us:
Download App:
  • android
  • ios