ಪ್ರೀತಿ ಪ್ರೇಮ ಅಂದರೆ.... ಇವರು ಹೇಳ್ತಾರೆ ನೀವು ಮಾಡಿ!

ಪ್ರೀತಿಯೆಂದರೇನು ಅಂತ ಲೋಕಕ್ಕೇ ಹೇಳಿಕೊಡುವವರು ಇವರು. ಪ್ರೇಮಚಿತ್ರಗಳಲ್ಲಿ ನಾಚಿ, ಬಳುಕಿ, ಮುಗುಳ್ನಕ್ಕು, ಮಂದಹಾಸ ಸೂಸಿ, ಮಿನುಗಿ, ಮರ ಸುತ್ತಿ, ಕೈ ಹಿಡಿದು ಕರಗಿ ನೋಡುಗರನ್ನೂ ಕರಗಿಸುವ ಈ ಕಿನ್ನರ ಕಿನ್ನರಿಯರು ವ್ಯಾಲೆಂಟೇನ್‌ ದಿನದಂದು ತಮ್ಮ ಪ್ರಕಾರ ಪ್ರೀತಿ ಏನು ಅನ್ನೋದನ್ನು ಹೇಳಿಕೊಂಡಿದ್ದಾರೆ. ಓದಿ, ಪ್ರೀತಿ ಮಾಡಿ!

Valentines day special Rachita ram Aditi prabhudeva Harshika Poonacha

1. ರಚಿತಾ ರಾಮ್‌, ನಟಿ

ಪ್ರೀತಿ ಅಂದ​ರೇನು ಎಂದರೆ ಒಂದು ವಾಕ್ಯ​ದಲ್ಲಿ ಹೇಳಲಾಗದು. ಅದು ಸ್ವಚ್ಚ​ವಾದ ಮನಸ್ಸಿನ ಭಾವನೆ. ಅದಕ್ಕೆ ವಿಶಾ​ಲ​ವಾದ ಅರ್ಥ​ವಿದೆ. ಪ್ರೀತಿ ಎಲ್ಲರ ಮೇಲೂ, ಎಲ್ಲ ವಿಚಾ​ರ​ದಲ್ಲೂ ಆಗು​ತ್ತದೆ. ನಾವು ಮಾಡೋ ಕೆಲಸ, ಅಣ್ಣ- ಅಕ್ಕ, ತಂಗಿ, ಅಮ್ಮ- ಅಪ್ಪ ಹೀಗೆ ಎಲ್ಲ ಸಂಬಂಧ​ಗ​ಳಲ್ಲೂ ಪ್ರೀತಿ ಹುಟ್ಟು​ಕೊ​ಳ್ಳು​ತ್ತದೆ. ಆದರೆ, ಹುಡುಗ ಅಥವಾ ಹುಡುಗಿ ತಮ್ಮ ವೈಯ​ಕ್ತಿಕ ಜೀವನ ಇವರ ಜತೆಗೆ ಅಂತ ನಿರ್ಧರಿ​ಸಿ​ಕೊಂಡಾಗ ಮನ​ಸ್ಸಿ​ನಲ್ಲಿ ಹುಟ್ಟಿ​ಕೊ​ಳ್ಳುವ ಭಾವ​ನೆ​ಗಳು ಇವೆ​ಯಲ್ಲ ಅದು ಪ್ರೀತಿ. ನಾನು ಇಂಥ ನಿಜ​ವಾದ ಪ್ರೀತಿ​ಯನ್ನು ಮೊದಲು ನೋಡಿದ್ದೇ ನನ್ನ ತಂದೆ- ತಾಯಿ ಅವ​ರ​ಲ್ಲಿ. ಏನೇ ಜಗಳ, ಕೋಪ, ಮುನಿಸು ಬಂದರೂ ಇಬ್ಬರೂ ಇಷ್ಟುವರ್ಷ ಆದರೂ ಜತೆಗೆ ಇದ್ದಾ​ರಲ್ಲ ಅವರಿಗಿಂತ ನಿಜ​ವಾದ ಪ್ರೇಮಿ​ಗ​ಳನ್ನ ನಾನು ನೋಡಿಲ್ಲ. ನಂಬಿ, ನಾನು ಪ್ರತಿ ವರ್ಷ ಪ್ರೇಮಿ​ಗಳ ದಿನ​ವನ್ನು ಆಚ​ರಿ​ಸು​ವುದು ನನ್ನ ಅಪ್ಪ ಅಮ್ಮನ ಜತೆಗೆ.

ಯಾರೋ ಮೋಹನ ಯಾವ ರಾಧೆಗೋ ಪಡುತಿರುವನು ಪರಿತಾಪ;ಒಂದು ಮಧುರ ಕಥಾ ಪ್ರಸಂಗ!

ಒಂದು ಹಾರ್ಟ್‌ ಆಕಾ​ರ​ದ​ ರೆಡ್‌ ಕೇಕ್‌ ತರಿಸಿ ಅಪ್ಪ- ಅಮ್ಮನ ಕೈಯಲ್ಲಿ ಆ ಕೇಕ್‌ ಕಟ್‌ ಮಾಡಿ​ಸು​ತ್ತೇನೆ. ಆ ಕ್ಷಣ ಅವ​ರಿ​ಬ್ಬರಲ್ಲೂ ಕಾಣುವ ನಾಚಿಕೆ, ನಗು, ಸಂಭ್ರ​ಮವೇ ನನಗೆ ಪ್ರೇಮಿ​ಗಳ ದಿನ ಮತ್ತು ಪ್ರೀತಿ ಎಂದ​ರೇನು ಎನ್ನು​ವು​ದಕ್ಕೆ ಅರ್ಥ ಸಿಗು​ತ್ತಿದೆ. ನಂಬಿಕೆ, ಪ್ರಾಮಾ​ಣಿ​ಕತೆ, ಪರ​ಸ್ಪರ ಅರ್ಥ ಮಾಡಿ​ಕೊ​ಳ್ಳುವ ಗುಣ ಪ್ರೀತಿಗೆ ಇದೆ. ಮದುವೆ ಆದ ಮೇಲೂ ತಮ್ಮ ಸಂಗಾ​ತಿ​ಯನ್ನು ಪ್ರೀತಿ​ಸು​ವುದು ಇದೆ​ಯಲ್ಲ ಅದೇ ನಿಜ​ವಾದ ಲವ್ವು. ಒಂದು ಗುಲಾಬಿ ಕೊಟ್ಟು ಈ ವರ್ಷ ಐ ಲವ್‌ ಯೂ ಅಂತೇಳಿ, ಮತ್ತೊಂದು ವರ್ಷ ಅದೇ ರೀತಿಯ ಗುಲಾಬಿ ಇನ್ನೊ​ಬ್ಬ​ರಿಗೆ ಕೊಟ್ಟು ಐ ಲವ್‌ ಯೂ ಅನ್ನುವುದು ಇದೆ​ಯಲ್ಲ ಅದೇ ಪ್ರೀತಿ​ಯನ್ನು ಕೊಲ್ಲು​ತ್ತಿ​ರು​ವುದು. ಹೀಗಾಗಿ ನಮ್ಮ ಜನ​ರೇ​ಷ​ನ್‌ಗೆ ಪ್ರೀತಿ ಅನ್ನೋದು ಬರೀ ಟೈಮ್‌ ಪಾಸ್‌ ಆಚ​ರಣೆ. ರೋಜಾ, ಮಿಲನಾ, ಮಿಸ್ಟರ್‌ ಆಂಡ್‌ ಮಿಸಸ್‌ ರಾಮಾ​ಚಾರಿ, ಅರ್ಜುನ್‌ ರೆಡ್ಡಿ... ನಾನು ನೋಡಿ ಮೆಚ್ಚಿದ ಅತ್ಯುತ್ತ ಪ್ರೇಮ ಕತೆಯ ಚಿತ್ರ​ಗ​ಳು.

2. ಅದಿತಿ ಪ್ರಭು​ದೇ​ವ, ನಟಿ

ಪ್ರೀತಿಗೆ ತುಂಬಾ ಜನ ಹಲವು ರೀತಿಯ ಅರ್ಥ ಮತ್ತು ವ್ಯಾಪ್ತಿ​ಯನ್ನು ಕೊಟ್ಟಿ​ದ್ದಾರೆ. ಆದರೆ, ನನ್ನ ಪ್ರಕಾ​ರ ಪ್ರೀತಿ ಎಂದರೆ ಜವಾ​ಬ್ದಾರಿ. ಇಲ್ಲಿ ಹುಡು​ಗ ಮತ್ತು ಹುಡುಗಿ ಇಬ್ಬರೂ ಪರ​ಸ್ಪರ ಜವಾ​ಬ್ದಾ​ರಿ​ಯು​ತ​ವಾಗಿ ಜೀವನ ನಡೆ​ಯು​ಸುದೇ ಪ್ರೀತಿ. ಹಾಗಂತ ಪ್ರೀತಿ ಕೇವಲ ಹುಡುಗ- ಹುಡುಗಿ ಮೇಲೆ, ಹುಡು​ಗಿಗೆ ಹುಡು​ಗನ ಮೇಲೆ ಆಗು​ವಂತ​ದ್ದಲ್ಲ. ನಮ್ಮ ಜೀವ​ನ​ದಲ್ಲಿ ಎದು​ರಾ​ಗುವ ಎಲ್ಲ ಸಂಬಂಧ​ಗ​ಳನ್ನೂ ಸ್ನೇಹ​ದಿಂದ ಕಾಣು​ವುದು, ಆ ಸಂಬಂಧ​ಗ​ಳನ್ನು ಉಳಿ​ಸಿ​ಕೊ​ಳ್ಳು​ವುದು ಕೂಡ ಪ್ರೀತಿನೇ. ಆದರೆ, ನಿನ್ನ ಜತೆಗೆ ನಾನು ಜೀವನ ಮಾಡುವೆ ಎಂದು ಹೇಳಿ​ಕೊ​ಳ್ಳುವ ಪ್ರೀತಿ ಮುಂದೆ ಮದುವೆ ವರೆಗೂ ಹೋಗು​ತ್ತದೆ. ಮದು​ವೆಗೂ ಮೊದಲು ಮತ್ತು ಮದುವೆ ನಂತ​ರವೂ ‘ನಾನು ನಿನಗೆ, ನೀನು ನನ​ಗೆ’ ಎನ್ನುವ ಮಾತು ಕೊನೆ​ಯ​ವ​ರೆಗೂ ಉಳಿ​ಯ​ಬೇಕು.

ಅವನಿಗೆ ಗೊತ್ತಿಲ್ಲ, ಅವಳು ಹೇಳಲ್ಲ; ಇದೊಂದು ಕ್ಯೂಟ್‌ ಲವ್‌ ಸ್ಟೋರಿ!

ವೈಯ​ಕ್ತಿಕ​ವಾಗಿ ನಾನು ಇಂಥ ಭಾವ​ನಾ​ತ್ಮಕ ಪ್ರೀತಿ​ಗಾ​ಗಿಯೇ ಕಾಯು​ತ್ತಿ​ದ್ದೇನೆ. ಅಂದರೆ ಜವಾ​ಬ್ದಾ​ರಿ​ಯುತ, ಭಾವ​ನೆ​ಗ​ಳಿಗೆ ಬೆಲೆ ಕೊಡುವ, ಸಂಬಂಧ​ಗ​ಳನ್ನು ಅರ್ಥ ಮಾಡಿ​ಕೊ​ಳ್ಳುವ ಹುಡುಗ ಸಿಗ​ಬೇಕು. ಅಂಥ ಹುಡು​ಗನ ಜತೆ​ಗೆ ನನ್ನ ಪ್ರೀತಿ ಮತ್ತು ಮದುವೆ ಆಗ​ಬೇಕು ಎನ್ನುವ ಆಸೆ ನನ್ನದು. ಇದು ನಾನು ಕೇವಲ ಹೇಳಿ​ಕೆ​ಗಾಗಿ ಹೇಳು​ತ್ತಿ​ರುವ ಮಾತಲ್ಲ. ನನ್ನ ಪ್ರೇಮಿ ಕಷ್ಟಕ್ಕೆ ಹೆಗ​ಲು ಕೊಡ​ಬೇಕು. ಅವನ ಗುರಿ ಮತ್ತು ಜೀವ​ನಕ್ಕೆ ನಾನು ಜತೆ​ಯಾಗಿ ನಿಲ್ಲ​ಬೇಕು. ಇಂಥ ಪ್ರಾಮಾ​ಣಿಕ ಪ್ರೀತಿ- ಪ್ರೇಮಿ​ಗಾಗಿ ಎದುರು ನೋಡು​ತ್ತಿ​ದ್ದೇ​ನೆ. ಇನ್ನೂ ಸಿನಿಮಾ ವಿಚಾ​ರಕ್ಕೆ ಬಂದರೆ ‘ನಾನಿನ್ನ ಮರೆ​ಯ​ಲಾ​ರೆ’ ನಾನು ನೋಡಿ ಮೆಚ್ಚಿದ ಎವ​ರ್‌​ಗ್ರೀನ್‌ ಪ್ರೇಮ ಕತೆಯ ಸಿನಿಮಾ. ಆ ಚಿತ್ರ​ದಲ್ಲಿ ನಾಯಕಿ ಚೆನ್ನಾ​ಗಿ​ರ​ಬೇಕು ಎಂದು ನಾಯಕ, ನಾಯಕ ಚೆನ್ನಾ​ಗಿ​ರ​ಬೇ​ಕೆಂದು ನಾಯಕಿ... ಹೀಗೆ ಇಬ್ಬರು ಖುಷಿ​ಯಾ​ಗಿ​ರ​ಬೇಕು ಎಂದು ಬಯ​ಸುತ್ತ ಕೊನೆಗೂ ಬಂದು ಜತೆಯಾ​ಗುವ ಸನ್ನಿ​ವೇಶ ಇದೆ​ಯಲ್ಲ, ಅಮೇ​ಜಿಂಗ್‌. ಈ ರೀತಿಯ ಪ್ರೇಮ ಕತೆ​ಗಳು ಈಗ ಬರು​ತ್ತಿಲ್ಲ ನಿಜ. ಈಗ ಕೇವಲ ಆಚ​ರ​ಣೆಗೆ ಸೀಮಿತ ಮಾಡು​ತ್ತಿ​ರುವ ಪ್ರೀತಿ​ಯ ನಿಜ​ವಾದ ಅರ್ಥ ತಿಳಿ​ಯಲು ಈ ಸಿನಿಮಾ ನೋಡಬೇ​ಕು.

3. ಹರ್ಷಿಕಾ ಪೂಣಚ್ಚ, ನಟಿ

ಸಂಭ್ರ​ಮ​ಕ್ಕಾಗಿ ಒಂದು ದಿನ ಆಚ​ರಣೆ ಮಾಡು​ವುದು ಅಥವಾ ಒಂದು ಸಾಲಿ​ನಲ್ಲಿ ಹೇಳು​ವು​ದಕ್ಕೆ ಆಗದೆ ಇರುವ ಭಾವನೆ ಅಂದರೆ ಪ್ರೀತಿ. ಜೀವ​ನ​ದಲ್ಲಿ ನಮಗೆ ತುಂಬಾ ಕಮ್ಮಿ ಜನ ಸಿಗು​ತ್ತಾರೆ. ಅಪ್ಪ- ಅಮ್ಮ, ಸ್ನೇಹಿ​ತರು, ಒಡ ಹುಟ್ಟಿ​ದ​ವರು. ಇವರೆಲ್ಲ ಸದಾ ನಮ್ಮ ಜತೆಗೆ ಇರು​ವ​ವರು. ಆದರೆ, ಏನೇ ಕಷ್ಟಬಂದರೂ, ಏಲೇ ಸಂತೋಷ ಆದರೂ ನಾನು ನಿನ್ನ ಜತೆಗೆ ಇರು​ತ್ತೇನೆ. ನನ್ನ ಮತ್ತು ನಿನ್ನ ಜೀವನ ಒಟ್ಟಿಗೆ ಸಾಗಲಿ ಎಂದು ತೆರೆದ ಮನ​ಸ್ಸಿ​ನಿಂದ ಹೇಳುವ ಹುಡುಗ ಅಥವಾ ಹುಡುಗಿಯ ಮಾತು​ಗ​ಳಲ್ಲಿ ನಿಜ​ವಾದ ಪ್ರೀತಿ ಕಾಣು​ತ್ತೇವೆ. ಪ್ರತಿ ದಿನ ಒಬ್ಬ​ರ​ನ್ನೊ​ಬ್ಬರು ಅರ್ಥ ಮಾಡಿ​ಕೊಂಡು, ನಂಬಿ​ಕೆ​ಯಿಂದ ಜತೆ ಇರು​ವುದು ಪ್ರೀತಿ. ನನ್ನ ತಂದೆ, ತಾಯಿ ಜಗಳ ಆಡು​ವು​ದನ್ನು ನೋಡಿ​ದ್ದೇನೆ. ಆದರೆ, ಊಟ ಮಾಡುವ ಹೊತ್ತಿಗೆ ‘ಆಯ್ತು ಬನ್ನಿ ಊಟ ಮಾಡೋ​ಣ’ ಅಂತ ಕರೆ​ದಾಗ ನನ್ನ ಅಮ್ಮನ ಆ ಮಾತಿ​ನಲ್ಲಿ ಪ್ರಾಮಾ​ಣಿ​ಕ​ವಾದ ಪ್ರೀತಿ​ಯನ್ನು ಕಂಡಿ​ರುವೆ. ಅದಕ್ಕೆ ಎಷ್ಟೇ ವರ್ಷ ಆದರೂ ಆಗಿನ ಸಂಬಂಧ​ಗ​ಳಲ್ಲಿ ಡೈವೋರ್ಸ್‌, ಬ್ರೇಕಪ್‌ ಎನ್ನುವ ಮಾತು​ಗಳೇ ಬರು​ತ್ತಿ​ರ​ಲಿಲ್ಲ.

ಆದರೆ, ಈಗ ಪರಿ​ಸ್ಥಿತಿ ಬದ​ಲಾ​ಗಿದೆ. ಪ್ರೇಮಿ​ಗಳ ದಿನಾ​ಚ​ರಣೆ ಆಚ​ರಿ​ಸುವ ಈ ಜನ​ರೇ​ಷನ್‌ ಮುಂದೆ ಬ್ರೇಕಪ್‌, ಡೈವೋರ್ಸ್‌ ಆಯ್ಕೆ ಕೂಡ ಇದೆ. ವರ್ಷ ಪೂರ್ತಿ ಜಗಳ ಮಾಡಿ​ಕೊಂಡು ಒಂದು ದಿನ ರೋಜಾ ಹೂವು ಕೊಟ್ಟರೆ ಅದು ಹೇಗೆ ಪ್ರೀತಿ ಆಗು​ತ್ತದೆ ತಿಳಿ​ಯದು. ಇರೋತನಕ ಖುಷಿ ಆಗಿ​ರೋದು, ಪರ​ಸ್ಪರ ಗೌರಿರವಿ​ಸು​ವುದು ನಿಜ​ವಾದ ಪ್ರೀತಿ. ನನಗೆ ತುಂಬಾ ಇಷ್ಟ​ವಾದ ಪ್ರೇಮ ಕತೆಯ ಸಿನಿಮಾ ‘ಕುಚ್‌ ಕುಚ್‌ ಹೋತಾ ಹೈ’. ಜಗಳ, ಮುನಿಸು, ಸ್ನೇಹ ಮತ್ತು ಒಂದಾ​ಗು​ವುದು ಎಲ್ಲವೂ ಈ ಚಿತ್ರ​ದ​ಲ್ಲಿದೆ. ಅದಕ್ಕೆ ಇಷ್ಟ.

Latest Videos
Follow Us:
Download App:
  • android
  • ios