2022ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಶರದ್ ಪವಾರ್ NDA ಅಭ್ಯರ್ಥಿ: RSS ಚಿಂತಕನ ಭವಿಷ್ಯ!
2022ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಶರದ್ ಪವಾರ್ NDA ಅಭ್ಯರ್ಥಿ| ನಿಜವಾಗುತ್ತಾ RSS ಚಿಂತಕನ ಭವಿಷ್ಯ| ತೆರೆ ಹಿಂದೆ ಬಿಜೆಪಿ ಸರ್ಕಾರ ರಚಿಸಲು ಸಹಾಯ ಮಾಡ್ತಿದ್ದಾರಾ ಶರದ್ ಪವಾರ್?
ಮುಂಬೈ[ನ.24]: RSSಗೆ ಸಂಬಂಧಿಸಿದಂತೆ ಈವರೆಗೂ ಸುಮಾರು 43 ಪುಸ್ತಕಕ ಬರೆದಿರುವ ನಾಗ್ಪುರದ RSS ಚಿಂತಕ ದಿಲೀಪ್ ದೇವ್ಧರ್, ಮಹಾರಾಷ್ಟ್ರದಲ್ಲಾದ ಎಲ್ಲಾ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ್ದಾರೆ. ಈ ವೇಳೆ 'ಮಹಾರಾಷ್ಟ್ರದಲ್ಲಿ ಶನಿವಾರ ಬಿಜೆಪಿ ಸರ್ಕಾರ ರಚಿಸಿದೆ. ಈ ವಿಚಾರದಲ್ಲಿ ಮೌನ ಕಾಪಾಡಿರುವ ಶರದ್ ಪವಾರ್ ಪರೋಕ್ಷವಾಗಿ ಸಮ್ಮತಿ ನೀಡಿದ್ದಾರೆ. ಹೀಗಿರುವಾಗ ಬಿಜೆಪಿಯು 2022ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಶರದ್ ಪವಾರ್‌ರನ್ನು ಅಭ್ಯರ್ಥಿಯನ್ನಾಗಿಸಿ ಅವರಿಗೆ ಬಹುಮಾನ ನೀಡಬಹುದು' ಎಂದು ಭವಿಷ್ಯ ನುಡಿದಿದ್ದಾರೆ.
ಇದೇ ಸಂದರ್ಭದಲ್ಲಿ 'ಶರದ್ ಪವಾರ್ ಮಗಳು, ಸುಪ್ರಿಯಾ ಸುಳೆ ಕೂಡಾ ಶೀಘ್ರದಲ್ಲೇ ಮೋದಿ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳೂ ಇವೆ. NCPಯ ಒಂದು ಭಾಗ ಅಂದರೆ ಅಜಿತ್ ಪವಾರ್ ಜೊತೆ ಸೇರಿ ಬಿಜೆಪಿ ಸರ್ಕಾರ ರಚಿಸಿರುವುದಕ್ಕೆ RSSಗೆ ಖುಷಿ ಇದೆ. ಯಾಕೆಂದರೆ ಶಿವಸೇನೆಯ ವರ್ತನೆ RSS ನಾಯಕರಲ್ಲಿ ಆಕ್ರೋಶ ಹುಟ್ಟುಹಾಕಿತ್ತು. ಬಿಜೆಪಿಗೆ ಇತರ ಪಕ್ಷದ ನಾಯಕರ ಸೇರ್ಪಡೆಯಿಂದ ಸಮಸ್ಯೆ ಎದುರಾಗಬಹುದು. ಆದರೆ ಹೊರಗಿನವರಿಗೆ ಇಲ್ಲಿ ಯಾವತ್ತೂ ಸ್ವಾಗತವಿದೆ' ಎಂದಿದ್ದಾರೆ.
ಫಡ್ನವೀಸ್ ಸರ್ಕಾರಕ್ಕೆ 1 ದಿನದ ಜೀವದಾನ, ತಕ್ಷಣ ಬಹುಮತ ಸಾಬೀತು ಇಲ್ಲ: ಸುಪ್ರೀಂ
ಮಹಾರಾಷ್ಟ್ರ ಚುನಾವಣೆ ಬಳಿಕ ಶರದ್ ಪವಾರ್ ತಮ್ಮ ಯಾವುದೇ ಹೇಳಿಕೆಯಲ್ಲೂ ಬಿಜೆಪಿ ವಿರುದ್ಧ ಹೇಳಿಕೆ ನೀಡಿಲ್ಲ. ರಾಜಕೀಯ ಎಂಬ ಆಟದಲ್ಲಿ ಅವರು ಉತ್ತಮ ಆಟಗಾರ ಎಂದಿದ್ದಾರೆ. 'ಬಿಹಾರದಲ್ಲಿ ಆರ್‌ಜೆಡಿ ಜೊತೆ ಅಸಮಾಧಾನ ಹೊಂದಿದ್ದ ನಿತೀಶ್ ಕುಮಾರ್‌ರನ್ನು NDAಗೆ ಸೇರ್ಪಡೆಗೊಳಿಸಿದ್ದ ಅಂದಿನ ರಾಜ್ಯಪಾಲರಾಗಿದ್ದ ರಾಮನಾಥ್ ಕೋವಿಂದ್‌ಗೆ ಬಹುಮಾನ ಎಂಬಂತೆ ರಾಷ್ಟ್ರಪತಿಯಾಗುವ ಅವಕಾಶ ಒದಗಿ ಬಂತು. ಅದೇ ರೀತಿ ಮಹಾರಾಷ್ಟ್ರ ಸರ್ಕಾರ ರಚನೆ ವೇಳೆ ಮೌನ ಸಹಮತಿ ನೀಡುವ ಶರದ್ ಪವಾರ್‌ರನ್ನು ರಾಷ್ಟ್ರಪತಿ ಅಭ್ಯರ್ಥಿಯಗಿಸುವ ಮೂಲಕ ಬಿಜೆಪಿ ಬಹುಮಾನ ನೀಡಬಹುದು' ಎಂದಿದ್ದಾರೆ.
ಶರದ್ ಪವಾರ್ ಮೌನವಾಗಿ ಸಹಕಾರ ನೀಡುತ್ತಿದ್ದಾರೆಂದಾದರೆ ಅವರು ತನ್ನ ಅಣ್ಣನ ಮಗನನ್ನು NCP ಶಾಸಕಾಂಗ ಮಂಡಳಿಯಿಂದ ಯಾಕೆ ಹೊರದಬ್ಬಿದರು? ಎಂಬ ಪ್ರಶ್ನೆಗೆ ಉತ್ತರಿಸಿದ ದಿಲೀಪ್ ದೇವ್ಧರ್, 'ಮೈತ್ರಿ ಧರ್ಮವನ್ನು ಪಾಲಿಸುತ್ತಿದ್ದೇನೆಂದು ತೋರಿಸಿಕೊಳ್ಳಲು ನಾಟಕವಾಡಲೇಬೇಕಲ್ವೇ? ನೆನಪಿರಲಿ, ಸೋನಿಯಾ ಗಾಂಧಿ ಇಟಲಿಯವರೆಂಬ ಕಾರಣ ನೀಡಿ ಇದೇ ಶರದ್ ಪವಾರ್ ಅಂದು ಕಾಂಗ್ರೆಸ್ ಬಿಟ್ಟು NCP ಹುಟ್ಟುಕಾಕಿದ್ದರು' ಎಂದಿದ್ದಾರೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು
ನವೆಂಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: