ಅಜಿತ್ ಸೆಳೆದುಕೊಂಡ ಬಿಜೆಪಿ ಎದುರಿದೆ 'ಕಳಂಕ' ಅಳಿಸುವ ಹೊಣೆ!
ಮಹಾರಾಷ್ಟ್ರದಲ್ಲಿ ರಾತ್ರೋ ರಾತ್ರಿ ನಡೆದ ಬೆಳವಣಿಗೆಗಳಿಂದ, ದಿನ ಬೆಳಗಾಗುತ್ತಿದ್ದಂತೆಯೇ ಬಿಜೆಪಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದೆ ಹೀಗಿದ್ದರೂ ಆಟ ಮಾತ್ರ ಇನ್ನೂ ಮುಗಿದಿಲ್ಲ. ಅಜಿತ್ ಪವಾರ್ ಸೆಳೆದುಕೊಂಡ ಬಿಜೆಪಿ ಹೆಗಲಿಗೆ ಬಹುದೊಡ್ಡ ಜವಾಬ್ದಾರಿ ಸೇರಿದೆ.
ಮುಂಬೈ[ನ.24]: 'ನಾ ಖಾವೂಂಗಾ, ನಾ ಖಾನೆ ದೂಂಗಾ' ಎನ್ನುವ ಮೂಲಕ ಮತದಾರರ ವಿಶ್ವಾಸ ಗಳಿಸಿದ್ದ ಮೋದಿ ನೇತೃತ್ವದ ಬಿಜೆಪಿ, ಅಜಿತ್ ಪವಾರ್ ಸೆಳೆಯುವ ಮೂಲಕ ಮಹಾರಾಷ್ಟ್ರದಲ್ಲಿ ರಾತ್ರೋ ರಾತ್ರಿ ಸರ್ಕಾರ ರಚಿಸಿದೆ. ಆದರೆ ಇತ್ತ ಅಜಿತ್ ಪವಾರ್ ಹೆಸರು ಹಲವಾರು ಹಗರಣ ಹಾಗೂ ವಿವಾದದಲ್ಲಿ ತಳುಕು ಹಾಕಿದ್ದು, ಇವುಗಳಲ್ಲಿ ಭಾಗಿಯಾದ ಆರೋಪವಿದೆ. ಸದ್ಯ ಬಿಜೆಪಿಗೆ ಇದೊಂದು ಬಹುದೊಡ್ಡ ಸವಾಲಾಗಿದೆ. ಭ್ರಷ್ಟಾಚಾರ ತೊಡೆದು ಹಾಕುವ ಭರವಸೆ ನೀಡಿದ್ದ ಬಿಜೆಪಿ ಅಜಿತ್ ಪವಾರ್ ಮೇಲಿನ ಕಳಂಕ ತೆಗೆದು ಹಾಕುತ್ತೆ ಎನ್ನುವುದೇ ಪ್ರಶ್ನೆ.
ಹಗರಣಗಳ ಸರದಾರ 'ಮಹಾ' ಸರ್ಕಾರದ 'ಕಿಂಗ್ ಮೇಕರ್' ಅಜಿತ್ ಪವಾರ್!
ಮಹಾರಾಷ್ಟ್ರ ಬಿಜೆಪಿ ಮುಂದಿನ ಹಾದಿ: ವಿಶ್ವಾಸಮತ ಗೆದ್ದು, ಅಜಿತ್ ಕಳಂಕ ದೂರು ಮಾಡುವ ಹೊಣೆ
1. ಹೆಚ್ಚು ಸ್ಥಾನ ಇಲ್ಲದಿದ್ದರೂ ಗೋವಾ, ಮಣಿಪುರದಲ್ಲಿ ಅಧಿಕಾರ ಹಿಡಿದಿತ್ತು ಬಿಜೆಪಿ. ಮಹಾರಾಷ್ಟ್ರದಲ್ಲಿ ಶಿವಸೇನೆಯು ಕೈಕೊಟ್ಟರೂ ಎನ್‌ಸಿಪಿ ವಿಭಜಿಸಿ, ವಿಭಜಿತ ಗುಂಪಿನೊಂದಿಗೆ ಅಧಿಕಾರ ಏರಿದ್ದು ಸಾಧನೆ
2. ಮೋದಿ-ಶಾ ಅವರ ರಹಸ್ಯ ಕಾರ್ಯಾಚರಣೆ ಮೂಲಕ ಮತ್ತೊಂದು ರಾಜ್ಯದಲ್ಲಿ ಅಧಿಕಾರ. ಬಿಜೆಪಿ ನಾಗಾಲೋಟ ಮುಂದುವರಿಕೆ
ಕೊಟ್ಟ ಹೊಡೆತಕ್ಕಿಂತ ದೊಡ್ಡ ಏಟು ತಿನ್ನುತ್ತಾ ಬಿಜೆಪಿ? NCP ಮುಂದಿನ ಆಯ್ಕೆ ಹೀಗಿದೆ
3. ಬಿಜೆಪಿ-ಅಜಿತ್ ಪವಾರ್ ಮೈತ್ರಿಕೂಟ ಕಿತ್ತಾಟವಿಲ್ಲದೇ ಆಡಳಿತ ನಡೆಸಿಕೊಂಡು ಹೋದರೆ ಬಿಜೆಪಿಗೆ ಪ್ಲಸ್ ಪಾಯಿಂಟ್
4. ಸರ್ಕಾರ ಸುಸೂತ್ರವಾಗಿ ನಡೆಯಲು ಅಜಿತ್ ಪವಾರ್ ಅವರನ್ನು ‘ಚೆನ್ನಾಗಿ’ ನೋಡಿಕೊಳ್ಳುವ ಅನಿವಾರ‍್ಯತೆ ಬಿಜೆಪಿಗೆ
ಸಿಎಂ ಹುದ್ದೆಗಾಗಿ ಎಲ್ಲಾ ಕಳಕೊಂಡ ಶಿವಸೇನೆ ಬಿಗ್ ಲೂಸರ್: ಮುಂದಿನ ಆಯ್ಕೆಗಳೇನು?
5. ಈ ಹಿಂದೆ ಎನ್‌ಸಿಪಿ ಮೇಲೇ ಭ್ರಷ್ಟಾಚಾರ ಆರೋಪ ಮಾಡಿದವರು ಫಡ್ನವೀಸ್. ಈಗ ಅದನ್ನು ಹೇಗೆ ನಿಭಾಯಿಸಬಲ್ಲರು ಎಂಬುದು ಯಕ್ಷಪ್ರಶ್ನೆ
6. ಅಜಿತ್ ಪವಾರ್ ಹಿಂದೆ ಎಲ್ಲ ಎನ್‌ಸಿಪಿ ಶಾಸಕರೂ ಬರದಿದ್ದರೆ ಬಹುಮತ ಸಾಬೀತಿಗೆ ಅನ್ಯ ಪಕ್ಷಗಳ ಶಾಸಕರ ಸೆಳೆಯಲು ‘ಆಪರೇಷನ್ ಕಮಲ’ ಸಾಧ್ಯತೆ
ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು