ಬಿಜೆಪಿ ಶಾಸಕ ಪಿ.ರಾಜೀವ್‌ಗೆ ಮಹತ್ವದ ಹುದ್ದೆ ನೀಡಿದ ರಾಜ್ಯ ಸರ್ಕಾರ
ಬೆಳಗಾವಿ ಜಿಲ್ಲೆಯ ಕುಡಚಿ ವಿಧಾನಸಭಾ ಕ್ಷೇತ್ರ ಬಿಜೆಪಿ ಶಾಸಕ ಪಿ.ರಾಜೀವ್ ಅವರಿಗೆ ರಾಜ್ಯ ಸರ್ಕಾರ ಮಹತ್ವದ ಹುದ್ದೆ ನೀಡಿದೆ.ಗೋಕಾಕ್ ಉಪ ಚುನಾವಣೆ ಗಮನದಲ್ಲಿಟ್ಟುಕೊಂಡು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಈ ಹುದ್ದೆ ನೀಡಿದ್ದಾರೆ.
ಬೆಂಗಳೂರು, [ಅ.16]: ಕುಡಚಿ ಶಾಸಕ ಪಿ. ರಾಜೀವ್ ಅವರನ್ನು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಇಂದು [ಬುಧವಾರ] ರಾಜೀವ್ ಅವರನ್ನು ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷರನ್ನಾಗಿ ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಗೋಕಾಕ್ ಉಪ ಚುನಾವಣೆ ಗಮನದಲ್ಲಿಟ್ಟುಕೊಂಡು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಈ ಹುದ್ದೆ ನೀಡಿದ್ದಾರೆ ಎನ್ನಲಾಗಿದೆ.
ಖರ್ಗೆ ಸೋಲಿಸಲು ಪಣತೊಟ್ಟು ಯಶಸ್ವಿಯಾದ ಚಿಂಚನಸೂರ್‌ಗೆ ಜಾಕ್ ಪಾಟ್
ಇದೇ ಡಿಸೆಂಬರ್ 5ರಂದು ಗೋಕಾಕ್ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಲಂಬಾಣಿ ಮತಗಳನ್ನು ಸೆಳೆಯಲು ರಾಜೀವ್ ಅವರಿಗೆ ರಾಜ್ಯ ತಾಂಡಾ ಅಭಿವೃ ನಿಗಮ ಅಧ್ಯಕ್ಷ ಗಿರಿ ನೀಡಲಾಗಿದೆ.
ಇದೇ ಡಿಸೆಂಬರ್ 5ರಂದು ಗೋಕಾಕ್ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಲಂಬಾಣಿ ಮತಗಳನ್ನು ಸೆಳೆಯಲು ರಾಜೀವ್ ಅವರಿಗೆ ರಾಜ್ಯ ತಾಂಡಾ ಅಭಿವೃ ನಿಗಮ ಅಧ್ಯಕ್ಷ ಗಿರಿ ನೀಡಲಾಗಿದೆ.
2008ರಲ್ಲಿ ಪಿ.ರಾಜೀವ್ ಅವರು ಕುಡಚಿಗೆ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡಿದ್ದರು. ಬಳಿಕ ಅವರು ರಾಜಕೀಯ ಕ್ಷೇತ್ರಕ್ಕೆ ಎಂಟ್ರಿಕೊಟ್ಟು 2013ರಲ್ಲಿ ಬಡವರ ಶ್ರಮಿಕರ ರೈತರ ಕಾಂಗ್ರೆಸ್ ಪಕ್ಷದಿಂದ ಕುಡಚಿಯಿಂದ ಗೆಲುವು ಸಾಧಿಸಿದ್ದರು. ನಂತರ ಬಿಜೆಪಿ ಸೇರಿದ ರಾಜೀವ್ 2018ರಲ್ಲೂ ಗೆಲುವು ಸಾಧಿಸಿ 2ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
ಮೊನ್ನೇ ಅಷ್ಟೇ ಸೋಲಿಲ್ಲದ ಸರದಾನ ಸೋಲಿಗೆ ಶ್ರಮಿಸಿದ್ದ ಮಾಜಿ ಸಚಿವ, ಬಿಜೆಪಿ ನಾಯಕ ಚಿಂಚನಸೂರ್ ಅವರನ್ನು ಕೋಲಿ ಸಮುದಾಯ ಅಭಿವೃದ್ಧಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಹೀಗೆ ಪಕ್ಷ ಸಂಘಟನೆಯಲ್ಲಿ ತೊಡಗಿರುವರಿಗೆ ಯಡಿಯೂರಪ್ಪ ಅವರು ಸರ್ಕಾರದಲ್ಲಿ ಮಹತ್ವದ ಹುದ್ದೆಗಳನ್ನು ನೀಡುತ್ತಿದ್ದಾರೆ.