ಲಾಕ್‌ಡೌನ್ ಸಮಯದಲ್ಲಿ ಜನರಿಗೆ ಮಾದರಿಯಾಗಲು ಸಚಿವರು, ಸಂಸದರು, ಅಧಿಕಾರಿಗಳು ಮತ್ತು ಶಾಸಕರಿಗೆ ಸಿಎಂ ಬಿಎಸ್‌ ಯಡಿಯೂರಪ್ಪ ಸಲಹೆಯೊಂದನ್ನು ನೀಡಿದ್ದಾರೆ. 

ಬೆಂಗಳೂರು,(ಏ.26): ಮುನ್ನೆಚ್ಚರಿಕೆ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಂಪುಟ ಸಹೋದ್ಯೋಗಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲಹೆ ನೀಡಿದ್ದಾರೆ.

ಕೋವಿಡ್-19 ಸೋಂಕಿನಿಂದ ರಕ್ಷಿಸಿಕೊಳ್ಳಲು ಮತ್ತು ಇತರರಿಗೆ ಹರಡುವುದನ್ನು ತಡೆಗಟ್ಟಲು, ಎಲ್ಲರೂ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದೇ ಏಕೈಕ ಮಾರ್ಗ ಎಂದು ಹೇಳಿದ್ದಾರೆ.

 ಹಾಗಾಗಿ, ಸಚಿವರು, ಸಂಸದರು, ಶಾಸಕರು ಹಾಗೂ ಅಧಿಕಾರಿ ವರ್ಗದವರು ಕಡ್ಡಾಯವಾಗಿ ಈ ನಿಯಮವನ್ನು ಅನುಸರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಬೇಕು ಎಂದು ಯಡಿಯೂರಪ್ಪ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.

ಹಿಗ್ಗಾಮುಗ್ಗಾ‌ ಕ್ಲಾಸ್ ತಗೆದುಕೊಂಡ ಸಿಎಂ: ರೇಣುಕಾಚಾರ್ಯಗೆ ಇದು ಬೇಕಿತ್ತಾ..?

ಶಾಸಕ ರೇಣುಕಾಚಾರ್ಯ ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿ‌ ಸಭೆ ಮಾಡಿದ್ದ ವಿಡಿಯೋ ನೋಡಿ ತರಾಟೆ ತೆಗೆದುಕೊಂಡಿದ್ದ ಸಿಎಂ, ಎಲ್ಲರಿಗೂ ಟ್ವೀಟ್ ಮೂಲಕ ಸಾಮಾಜಿಕ ಅಂತರದ ಬಗ್ಗೆ ತಿಳಿ ಹೇಳಿದ್ದಾರೆ.

Scroll to load tweet…

ಆಶಾ ಕಾರ್ಯಕರ್ತೆಯರ ಸಭೆಯಲ್ಲಿ ಸಾಮಾಜಿಕ ಅಂತರವನನ್ಉ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ಕಾಪಾಕಿಕೊಂಡಿರಿರಲಿಲ್ಲ. ಈ ಮೂಲಕ ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿದ್ದರು. ಇದರಿಂದ ಬಿಎಸ್ ಯಡಿಯೂರಪ್ಪ ದೂರವಾಣಿ ಮೂಲಕ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು ಮಂಡ್ಯದಲ್ಲಿ ಪತ್ರಕರ್ತರಿಗೆ ಕೊರೋನಾ ವೈರಸ್ ಪರೀಕ್ಷೆ ಮಾಡುವಾಗ ಜೆಡಿಎಸ್‌ ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ಗುಂಪು ಕಟ್ಟಿಕೊಂಡು ಧಾಂದಲೆ ನಡೆಸಿದ್ದರು.

ಅಷ್ಟೇ ಅಲ್ಲದೇ ಕೊರೋನಾ ಸೋಂಕಿನಿಂದ ಗುರುವಾರ ಮೃತಪಟ್ಟಿದ್ದ ಬಂಟ್ವಾಳ ಮೂಲದ ವೃದ್ಧೆಯ ಅಂತ್ಯಕ್ರಿಯೆಗೆ ವಾಮಂಜೂರು-ಪಚ್ಚನಾಡಿಯಲ್ಲಿ ಅವಕಾಶ ಮಾಡಿಕೊಡದೆ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ಅಡ್ಡಿಪಡಿಸಿದರು. ಮತ್ತೊಂದೆಜ್ಜೆ ಮುಂದೆ ಹೋದ್ರೆ, ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಪಾದರಾಯನಪುರ ಗಲಾಟೆ ಆರೋಪಿಗಳ ಪರ ಬ್ಯಾಟಿಂಗ್ ಮಾಡಿದ್ದು.

ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಬಿಎಸ್ ಯಡಿಯೂರಪ್ಪ ಅವರು ಈ ಸಲಹೆ ನೀಡಿದ್ದಾರೆ.