ತಿರುಪತಿ ತಿಮ್ಮಪ್ಪನ ಮಂಡಳಿಗೆ ಮತ್ತೊಮ್ಮೆ ಸುಧಾಮೂರ್ತಿ
ದೇಶದ ಅತ್ಯಂತ ಶ್ರೀಮಂತ ದೇಗುಲ ತಿರುಪತಿ ತಿರುಮಲ ದೇವಾಲಯದ ಟಿಟಿಡಿ ಟ್ರಸ್ಟ್ ಗೆ ನೂತನ ಸದಸ್ಯರನ್ನು ನೇಮಕ ಮಾಡಲಾಗಿದೆ. ಸುಧಾಮೂರ್ತಿ ಸೇರಿದಂತೆ ಕರ್ನಾಟಕದ ಮೂವರು ಟಿಟಿಡಿ ಸದಸ್ಯರಾಗಿ ನೇಮಕವಾಗಿದ್ದಾರೆ.
ಅಮರಾವತಿ, [ಸೆ.17]: ತಿರುಪತಿ ತಿರುಮಲ ದೇವಸ್ಥಾನದ (ಟಿಟಿಡಿ) ಮಂಡಳಿಗೆ ನೂತನ ಸದಸ್ಯರನ್ನು ನೇಮಕ ಮಾಡಿ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಇಂದು [ಮಂಗಳವಾರ] ಆದೇಶ ಹೊರಡಿಸಿದ್ದಾರೆ.
ಟಿಟಿಡಿ ಮಂಡಳಿಗೆ ರಾಜೀನಾಮೆ ಸಲ್ಲಿಸಿದ್ದ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಅವರು ಮತ್ತೊಮ್ಮೆ ಟಿಟಿಡಿ ಮಂಡಳಿ ಸದಸ್ಯರಾಗಿ ನೇಮಕವಾಗಿದ್ದಾರೆ.
ತಿರುಪತಿ ಟ್ರಸ್ಟ್‌ಗೆ ಕರ್ನಾಟಕದಿಂದ ಯಾರು?
ಸುಧಾ ಮೂರ್ತಿ ಸೇರಿದಂತೆ ಕರ್ನಾಟಕದ ಮೂವರು ತಿರುಪತಿ ವೆಂಕಟೇಶ ದೇವಸ್ಥಾನದ ಟ್ರಸ್ಟ್ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕರ್ನಾಟಕದಿಂದ ಸುಧಾ ಮೂರ್ತಿ, ಸಂಪತ್ ರವಿ ನಾರಾಯಣ ಮತ್ತು ರಮೇಶ್ ಶೆಟ್ಟಿ ಅವರನ್ನು ನೇಮಕ ಮಾಡಿ ಆಂಧ್ರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.
ವಿಶೇಷ ಅಂದ್ರೆ ಈ ಹಿಂದೆ ಚಂದ್ರಬಾಬು ನಾಯ್ಡು ಸರ್ಕಾರವಿದ್ದಾಗ ಕರ್ನಾಟಕದಿಂದ ಕೇವಲ ಸುಧಾಮೂರ್ತಿ ಮಾತ್ರ ಸದಸ್ಯರಾಗಿದ್ದರು. ಆದ್ರೆ ಇದೀಗ ರಾಜ್ಯದ ಮೂವರು ಟಿಟಿಡಿ ಸದಸ್ಯರಾಗಿ ಆಯ್ಕೆಯಾಗಿರುವುದು ನಿಜಕ್ಕೂ ಸಂತಸದ ಸಂಗತಿ.
ತಿರುಪತಿ ದೇವಸ್ಥಾನದ 44 ಹಿಂದೂಯೇತರ ಸಿಬ್ಬಂದಿ ವರ್ಗಾವಣೆ
ಆಂಧ್ರ ಪ್ರದೇಶದಿಂದ 8 ಜನ, ತೆಲಂಗಾಣದಿಂದ 7, ತಮಿಳುನಾಡಿನಿಂದ 4, ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ತಲಾ 3 ಹಾಗೂ ದೆಹಲಿಯಿಂದ ಒಬ್ಬರನ್ನು ತಿರುಪತಿ ತಿಮ್ಮಪ್ಪನ ಟ್ರಸ್ಟ್ ಮಂಡಳಿ ಸದಸ್ಯರಾನ್ನಾಗಿ ನೇಮಕ ಮಾಡಲಾಗಿದೆ.
ಆಂಧ್ರ ಪ್ರದೇಶದಲ್ಲಿ ಈ ಹಿಂದೆ ಚಂದ್ರಬಾಬು ನಾಯ್ಡು ಸರ್ಕಾರ ಸುಧಾಮೂರ್ತಿ ಅವರನ್ನು ಟಿಟಿಡಿಯ ಸದಸ್ಯರನ್ನಾಗಿ ಮಾಡಿತ್ತು. ಬಳಿಕ ಜಗನ್ ಮೋಹನ್ ರೆಡ್ಡಿ ಅವರ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸುಧಾಮೂರ್ತಿ ಅವರು ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದೀಗ ಜಗನ್ ಮೋಹನ್ ರೆಡ್ಡಿ ಸರ್ಕಾರವೂ ಸಹ ಸುಧಾಮೂರ್ತಿ ಅವರನ್ನು ಟಿಟಿಡಿಯ ಸದಸ್ಯರನ್ನಾಗಿ ನೇಮಿಸಿದೆ.