ಹಿಮಪಾತದ ನಡುವೆ CRPF ಯೋಧನ ಕರ್ತವ್ಯ; ಸಲಾಂ ಹೇಳಿದ ಭಾರತೀಯರು!
ಹಿಮಪಾತದ ನಡುವೆ CRPF ಯೋಧನ ಕರ್ತವ್ಯದ ಫೋಟೋ ವೈರಲ್ ಆಗಿದೆ. ಜಮ್ಮ ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧನ ಫೋಟೋಗೆ ಭಾರತೀಯರು ಸಲಾಂ ಹೇಳಿದ್ದಾರೆ.
ಶ್ರೀನಗರ (ನ.11): ಮಳೆ ಇರಲಿ, ಚಳಿ ಇರಲಿ, ಬಿಸಿಲೇ ಬರಲೇ, ದೇಶ ಕಾಯೋ ಯೋಧರಿಗೂ ಇದ್ಯಾವುದು ಲೆಕ್ಕವಿಲ್ಲ. ದೇಶಕ್ಕೊಸ್ಕರ ಪ್ರಾಣವನ್ನೇ ಮುಡಿಪಾಗಿಟ್ಟಿರುವ ಸೈನಿಕರ ತ್ಯಾಗ ಬಲಿದಾನಗಳಿಂದ ನಮ್ಮ ಸುಂದರ ನಾಳೆಗಳು ನಿಂತಿದೆ. ಹೀಗೆ ಜಮ್ಮ ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ ಕರ್ತವ್ಯ ಸಲ್ಲಿಸುತ್ತಿರುವ CRPF ಯೋಧನಿಗೆ ಭಾರತೀಯರು ಸಲಾಂ ಹೇಳಿದ್ದಾರೆ.
ಇದನ್ನೂ ಓದಿ: ಹಾವು ಕಡಿದ ವ್ಯಕ್ತಿಯ 2.5 ಕಿ.ಮಿ ಹೊತ್ತು ಸಾಹಸ ಮೆರೆದ ಯೋಧರು!
CRPF ಅಸಿಸ್ಟೆಂಟ್ ಕಮಾಂಡರ್ ಕಶ್ಯಪ್ ಕಡಗತ್ತೂರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಫೋಟೋ ಕ್ಷಣಮಾತ್ರದಲ್ಲಿ ವೈರಲ್ ಆಗುತ್ತೆ. ಇವರು ಬ್ಯಾಟ್‌ಮ್ಯಾನ್ ಅಲ್ಲ(ಬ್ರಿಟೀಷ್ ಸೇನಾಧಿಕಾರಿ), ಇವರು ಕೇಂದ್ರಾಡಳಿತ ಜಮ್ಮ ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರತ CRPF ಕಾನ್ಸ್ಟೇಬಲ್ ಐಜಾಝ್. ಹಿಮಾಪಾತವಾಗುತ್ತಿದ್ದರೂ ಕರ್ತವ್ಯ ಮಾಡುತ್ತಿರುವ ಸೈನಿಕ. ವೃತ್ತಿಪರತೆಗೆ ಮತ್ತೊಂದು ಹೆಸರ CRPF ಎಂದು ಕಶ್ಯಪ್ ಕಡಗತ್ತೂರ್ ಟ್ವೀಟ್ ಮಾಡಿದ್ದಾರೆ.
ಈ ಫೋಟೋ ನೋಡಿದ ಭಾರತೀಯರು ತಕ್ಷಣವೇ CRPF ಯೋಧನಿಗೆ ಸಲಾಂ ಹೇಳಿದ್ದಾರೆ. ನಿಮ್ಮ ಸೇವೆಯಿಂದಲೇ ನಾವು ಸುಖವಾಗಿದ್ದೇವೆ ಎಂದು ಪ್ರತ್ರಿಕೆಯೆ ನೀಡಿದ್ದಾರೆ.