Asianet Suvarna News Asianet Suvarna News

ಕೇವಲ 4 ಸೆಕೆಂಡ್‌ ತಡವಾಗಿದ್ದರೆ, ನಾನು ಸಾಯುತ್ತಿದ್ದೆ: ಕಮಲ್ ಹಾಸನ್

ಕೂದಲೆಳೆ ಅಂತರದಲ್ಲಿ ಕಮಲ್‌, ಶಂಕರ್‌ ಪಾರು| 4 ಸೆಕೆಂಡ್‌ ತಡವಾಗಿದ್ದರೆ, ನಾನು, ನಿರ್ದೇಶಕನೂ ಸಾಯುತ್ತಿದ್ದೆವು| ಕ್ರೇನ್‌ ಕುಸಿದುಬಿದ್ದ ದುರ್ಘಟನೆ ಬಗ್ಗೆ ನಟ ಕಮಲ್‌ ವಿವರಣೆ|ಅವಘಡದಲ್ಲಿ ಮೃತರ ಕುಟುಂಬಕ್ಕೆ .1 ಕೋಟಿ ಪರಿಹಾರ|

Kamal Haasan Talks Over Crane Crashes on Film Set
Author
Bengaluru, First Published Feb 21, 2020, 8:13 AM IST

ಚೆನ್ನೈ(ಫೆ.21): 3 ಜನರನ್ನು ಬಲಿ ಪಡೆದ ಇಂಡಿಯನ್‌ -2 ಚಿತ್ರದ ಶೂಟಿಂಗ್‌ ವೇಳೆ ನಟ ಕಮಲ್‌ಹಾಸನ್‌ ಮತ್ತು ಖ್ಯಾತ ನಿರ್ದೇಶಕ ಶಂಕರ್‌ ಕೂಡಾ ಕೂದಲೆಳೆ ಅಂತರದಿಂದ ಪ್ರಾಣಾಪಾಯಾದಿಂದ ಪಾರಾಗಿರುವ ವಿಷಯ ಬೆಳಕಿಗೆ ಬಂದಿದೆ.

ಕಮಲ್‌ ಹಾಸನ್‌ ಚಿತ್ರದ ಶೂಟಿಂಗ್‌ ವೇಳೆ ಕ್ರೇನ್ ಬಿದ್ದು 3 ಬಲಿ!

ಬುಧವಾರ ಚೆನ್ನೈ ಹೊರವಲಯದಲ್ಲಿ ನಡೆದ ದುರ್ಘಟನೆ ಬಗ್ಗೆ ಮಾಹಿತಿ ನೀಡಿರುವ ಕಮಲ್‌, ‘ಚಿತ್ರೀಕರಣದ ವೇಳೆ ಭಾರೀ ಗಾತ್ರದ ಕ್ರೇನ್‌ ಕುಸಿದುಬಿದ್ದ ಘಟನೆಯಲ್ಲಿ ನಾನೂ ಸಾಯುತ್ತಿದ್ದೆ. ಆದರೆ, ಈ ಘಟನೆ ಸಂಭವಿಸುವ ಕೇವಲ 4 ಸೆಕೆಂಡ್‌ ಮುನ್ನ ನಾನು, ನಿರ್ದೇಶಕ ಶಂಕರ್‌, ಕ್ಯಾಮೆರಾಮನ್‌ ಹಾಗೂ ನಟಿ ಬೇರೆಡೆ ತೆರಳಿದ್ದೆವು. ಹೀಗಾಗಿ, ನಾವು ಬದುಕಿ ಉಳಿದೆವು. ಒಂದು ವೇಳೆ ನಾವು 4 ಸೆಕೆಂಡ್‌ ತಡ ಮಾಡಿದ್ದರೆ, ನಮ್ಮ ಜಾಗದಲ್ಲಿ ಬೇರೊಬ್ಬರು ನಿಂತು ಮಾತನಾಡಬೇಕಿತ್ತು’ ಎಂದು ಹೇಳಿದ್ದಾರೆ.

ಪರಿಹಾರ: 

ಇದೇ ವೇಳೆ ಈ ಘಟನೆಯಲ್ಲಿ ಮೃತರಾದ ಕುಟುಂಬ ಸದಸ್ಯರಿಗೆ ಕಮಲ್‌ ಹಾಸನ್ ತಲಾ 1 ಕೋಟಿ ರು. ಪರಿಹಾರ ಘೋಷಿಸಿದ್ದಾರೆ.

ಏನಾಗಿತ್ತು:

ಚೆನ್ನೈ ಹೊರವಲಯದಲ್ಲಿರುವ ಇವಿಪಿ ಸ್ಟುಡಿಯೋದಲ್ಲಿ ಬುಧವಾರ ಲೈಟಿಂಗ್‌ಗೆಂದು ಬಳಸಲಾಗಿದ್ದ ಭಾರೀ ಗಾತ್ರದ ಕ್ರೇನ್‌ 150 ಅಡಿ ಎತ್ತರದಿಂದ ಕುಸಿದು ಬಿದ್ದು ದುರ್ಘಟನೆ ಸಂಭವಿಸಿತ್ತು. ಈ ಘಟನೆಯಲ್ಲಿ ಸಹಾಯಕ ನಿರ್ದೇಶಕ ಕೃಷ್ಣ, ಸಹಾಯಕ ಕಲಾವಿದ ಚಂದ್ರನ್‌ ಹಾಗೂ ಮಧು ಅವರು ಸಾವನ್ನಪ್ಪಿದ್ದರು.
 

Follow Us:
Download App:
  • android
  • ios