Asianet Suvarna News Asianet Suvarna News

ನಲ್ಮೇಯ ಮಾತಿಗೆ ಹಿರಿ ಹಿರಿ ಹಿಗ್ಗುವ ಹಿರಿಯರು

ಅಜ್ಜ-ಅಜ್ಜಿಯೆಂದರೆ ಬಗೆದಷ್ಟೂ ಖಾಲಿಯಾಗದ ಪ್ರೀತಿಯ ಖಜಾನೆ. ಅವರ ಅನುಭವ, ಮಾರ್ಗದರ್ಶನ ಕಿರಿಯರಿಗೆ ದಾರಿದೀಪ. ಇಂಥ ಹಿರಿಯರ ಇಷ್ಟ-ಕಷ್ಟಗಳಿಗೆ ಕಿವಿಯಾಗುವ ಜೊತೆಗೆ ಆಸರೆ ಒದಗಿಸಿದಾಗ ಮಾತ್ರ ಬದುಕು
ಸಾರ್ಥಕತೆಯತ್ತ ಸಾಗಲು ಸಾಧ್ಯ.

How we should treat the elders
Author
Bangalore, First Published Jan 7, 2020, 5:23 PM IST

ಬಾಲ್ಯದಲ್ಲಿ ಅಜ್ಜ-ಅಜ್ಜಿ ಎಂದರೆ ಕುಣಿದು ಕುಪ್ಪಳಿಸುವ ನಾವು, ಯೌವನಕ್ಕೆ ಕಾಲಿಡುತ್ತಿದ್ದಂತೆ ಅವರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುತ್ತೇವೆ. ಓದು, ಉದ್ಯೋಗ ಎಂದು ಬದುಕಿನ ಕುರಿತು ಸೀರಿಯಸ್ಸಾಗುವ ಕಾರಣ ಅವರೆಡೆಗೆ ಹೆಚ್ಚಿನ
ಗಮನ ನೀಡಲು ಸಾಧ್ಯವಾಗದೇ ಇರಬಹುದು. ಆದರೆ, ಎಷ್ಟೋ ಬಾರಿ ನಮ್ಮ ಇಂಥ ವರ್ತನೆಯೇ ಹಿರಿಯರ ಮನಸ್ಸಿಗೆ ಘಾಸಿಯುಂಟು ಮಾಡುತ್ತವೆ.

ಮಾತಿಗೆ ತವಕಿಸುವ ಮನ: ವಯಸ್ಸಾದ ಕಾರಣಕ್ಕೆ ವೃದ್ಧರಿಗೆ ಮೊದಲಿನಂತೆ ಕೆಲಸ-ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಕೆಲವರಂತೂ ಅನಾರೋಗ್ಯದ ಕಾರಣಕ್ಕೆ ಹಾಸಿಗೆ ಹಿಡಿದು ಬಿಟ್ಟಿರುತ್ತಾರೆ. ಮನೆಯ ಉಳಿದ
ಸದಸ್ಯರು ಅವರವರ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ. ಹಿರಿಯರಿಗೆ ಕೋಣೆಯೊಳಗಡೆಯೇ ಕೂತು, ಮಲಗಿ ಬೇಸರ ಮೂಡಲಾರಂಭಿಸುತ್ತದೆ. ಇದೇ ಕಾರಣಕ್ಕೆ ಅವರು ಪದೇಪದೆ ಮನೆಯ ಸದಸ್ಯರನ್ನು ಕರೆಯಬಹುದು ಇಲ್ಲವೆ
ಯಾರಾದರೂ ಕಂಡರೆ ಸಾಕು, ಅವರೊಂದಿಗೆ ಮಾತನಾಡಲು ತವಕಿಸಬಹುದು. ಮಗು ಹೇಗೆ ಅಪ್ಪ-ಅಮ್ಮ ತನಗೆ ಸಮಯ ನೀಡಬೇಕೆಂದು ಬಯಸುತ್ತದೋ ಅದೇ ರೀತಿ ಹಿರಿಯ ಜೀವಗಳು ಮನೆಯ ಸದಸ್ಯರು ತನ್ನಡೆಗೆ ಗಮನ
ನೀಡಬೇಕೆಂದು ಆಶಿಸುತ್ತಾರೆ. ಆದಕಾರಣ ನಿಮ್ಮ ಮನೆಯಲ್ಲಿರುವ ಅಜ್ಜ-ಅಜ್ಜಿಯೊಂದಿಗೆ ಪ್ರತಿದಿನ ಒಂದಿಷ್ಟು ಸಮಯ ಕಳೆಯಿರಿ. ಅವರೇನೇ ಮಾತನಾಡಿದರೂ ಅದನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ಕಾಯಿಲೆ, ನೋವುಗಳ ಬಗ್ಗೆ
ಅಳಲು ತೋಡಿಕೊಂಡರೆ ಒಂದಿಷ್ಟು ಸಾಂತ್ವನದ ಮಾತುಗಳನ್ನಾಡಿ. 

ಹಿರಿಯರನ್ನೂ ಸಾಕದಿದ್ದರೆ ಅಳಿಯ, ಸೊಸೆಗೂ ಶಿಕ್ಷೆ

ಪ್ರೀತಿಯ ಹಂಬಲ: ವಯಸ್ಸಾಗುತ್ತಿದ್ದಂತೆ ಮನೆಯವರೆಲ್ಲ ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಭಾವನೆ ಹಿರಿಯರಲ್ಲಿ ಮೂಡಲಾರಂಭಿಸುತ್ತದೆ. ಅದರಲ್ಲೂ ಅವರು ಕರೆದಾಗ ಬಾರದಿದ್ದರೆ ಅಥವಾ ಬೇರೆ ಊರಲ್ಲಿ ನೆಲೆಸಿರುವ ಮಕ್ಕಳು
ಅಥವಾ ಮೊಮ್ಮಕ್ಕಳು ದಿನಕ್ಕೋ ಅಥವಾ ಎರಡು ದಿನಕ್ಕೊಮ್ಮೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸದಿದ್ದರೆ ‘ನಾನು ಯಾರಿಗೂ ಬೇಡವಾದೆ’ ಎಂಬ ಭಾವನೆ ಮನಸ್ಸಿನಲ್ಲಿ ಮೂಡುತ್ತದೆ. ಹಿರಿಯರು ನಿಮ್ಮಿಂದ ಅಪೇಕ್ಷಿಸುವುದು ನಾಲ್ಕು
ಪ್ರೀತಿಯ ಮಾತುಗಳನ್ನಷ್ಟೇ. ಹೀಗಾಗಿ ನಿಮ್ಮ ಅಜ್ಜ-ಅಜ್ಜಿ ಮಾತ್ರವಲ್ಲ, ಎಲ್ಲಿಯೇ ಯಾರೇ ಹಿರಿಯರು ಸಿಕ್ಕರೂ ಅವರ ಯೋಗಕ್ಷೇಮ ವಿಚಾರಿಸಿ, ನಾಲ್ಕು ಪ್ರೀತಿಯ ಮಾತುಗಳನ್ನಾಡಿ.

ಸುಳ್ಳುಗಾರನ ಗುಟ್ಟು ರಟ್ಟು ಮಾಡೋದು ಹೇಗೆ ಗೊತ್ತಾ?

ಹಳೆಯ ನೆನಪುಗಳನ್ನು ಹಂಚಿಕೊಳ್ಳಿ: ಬಾಲ್ಯದಲ್ಲಿ ಅಜ್ಜ ಅಥವಾ ಅಜ್ಜಿಯೊಂದಿಗೆ ನೀವು ಕಳೆದ ಸಮಯ, ಆಡಿದ ಆಟಗಳು, ಅವರು ಮಾಡಿಕೊಡುತ್ತಿದ್ದ ತಿಂಡಿಗಳು, ಹೇಳುತ್ತಿದ್ದ ಕಥೆಗಳು...ಇವೆಲ್ಲವನ್ನೂ ಅವರಿಗೆ ನೆನಪಿಸಿ. ತಕ್ಷಣ
ಅವರ ಮುಖದಲ್ಲಿ ಉತ್ಸಾಹ, ಖುಷಿ ಎಲ್ಲವೂ ಮೂಡುತ್ತದೆ. ಎಷ್ಟೇ ಅನಾರೋಗ್ಯವಿದ್ದರೂ ಎನರ್ಜಿ ಡ್ರಿಂಕ್ ಸಿಕ್ಕಂತೆ ಮತ್ತಷ್ಟು ಹಳೆಯ ನೆನಪುಗಳಿಗೆ ಮರುಜೀವ ನೀಡಲು ಪ್ರಾರಂಭಿಸುತ್ತಾರೆ. ಪ್ರತಿದಿನ ಈ ಕೆಲಸ ಮಾಡಲು
ಸಾಧ್ಯವಾಗದಿರಬಹುದು. ಆದರೆ, ವಾರಕ್ಕೊಮ್ಮೆಯಾದರೂ ಇಂಥ ಪ್ರಯತ್ನ ಮಾಡಿ. 

ಆರೋಗ್ಯದ ಕುರಿತು ಕಾಳಜಿ ತೋರಿ: ವೃದ್ಧಾಪ್ಯದಲ್ಲಿ ಆರೋಗ್ಯ ಸಮಸ್ಯೆಗಳು ಹೈರಾಣಾಗಿಸುತ್ತವೆ. ಪ್ರತಿದಿನ ಅವರು ಆರೋಗ್ಯದ ಕುರಿತು ಒಂದಲ್ಲೊಂದು ಕಂಪ್ಲೇಟ್ ಹೇಳುತ್ತಲೇ ಇರಬಹುದು. ಅವರು ಸಮಸ್ಯೆ
ಹೇಳಿಕೊಳ್ಳುವಾಗ ತಾಳ್ಮೆಯಿಂದ ಕೇಳಿಸಿಕೊಳ್ಳಿ. ಅಗತ್ಯವೆನಿಸಿದರೆ ವೈದ್ಯರ ಬಳಿ ಕರೆದೊಯ್ಯಿರಿ ಇಲ್ಲವೆ ಔಷಧ ತಂದು ಕೊಡಿ. 

ಬಾಯಿ ಚಪಲ ತೀರಿಸಿ: ಮಕ್ಕಳು ಹೇಗೆ ಚಾಕೋಲೇಟ್ ಸೇರಿದಂತೆ ನಾನಾ ತರಹದ ತಿನಿಸುಗಳಿಗಾಗಿ ಹೆತ್ತವರಿಗೆ ದುಬಾಲು ಬೀಳುತ್ತಾರೋ ಅದೇರೀತಿ ಹಿರಿಯರು ವಿಧವಿಧದ ತಿನಿಸುಗಳಿಗೆ ಬೇಡಿಕೆಯಿಡುತ್ತಾರೆ. ಅವರಿಷ್ಟದ
ತಿಂಡಿ-ತಿನಿಸುಗಳನ್ನು ತಂದು ಕೊಡಲು ಮರೆಯಬೇಡಿ. ಆದರೆ, ತಿಂಡಿ ತರುವಾಗ ಅವರ ಆರೋಗ್ಯ ಸ್ಥಿತಿ ಗಮನದಲ್ಲಿರಲಿ. ಮಧುಮೇಹ ಇರುವವರು ಸ್ವೀಟ್ ಕೇಳಿದರು ಎಂದು ತಂದುಕೊಟ್ಟರೆ ತೊಂದರೆಯಾದೀತು. ಹೀಗಾಗಿ ಅವರ
ಆರೋಗ್ಯಕ್ಕೆ ಹಿತವೆನಿಸುವ ತಿಂಡಿಗಳನ್ನು ಮಾತ್ರ ತನ್ನಿ.

ಸದಾ ಗೌರವಿಸಿ: ಹಿರಿಯರು ಗೊಣಗಬಹುದು, ಬೈಯಬಹುದು, ಹಾಗಂತ ತಾಳ್ಮೆ ಕಳೆದುಕೊಳ್ಳಬೇಡಿ. ಅವರಿಗೆ ಸದಾ ಗೌರವ ನೀಡಿ. ಅಗೌರವವಾಗುವಂತಹ ಘಟನೆ ನಡೆದಾಗ ಹಿರಿಯರು ತುಂಬಾ ನೊಂದುಕೊಳ್ಳುತ್ತಾರೆ. ಅಷ್ಟೇ
ಅಲ್ಲ, ಮಾನಸಿಕವಾಗಿ ಸಾಕಷ್ಟು ಕುಸಿದು ಹೋಗುತ್ತಾರೆ.

 ಈ ಅಭ್ಯಾಸಗಳು ನಿಮಗಿದ್ರೆ ಸೆಕ್ಸ್‌ ಲೈಫ್‌ ಹಾಳಾಗೋದು ಗ್ಯಾರಂಟಿ!

ಸೇವೆಗೆ ಹಿಂಜರಿಯದಿರಿ: ವೃದ್ಧಾಪ್ಯದಲ್ಲಿ ತಲೆ ಬಾಚಿಕೊಳ್ಳುವುದು, ಉಗುರು ತೆಗೆಯೋದು, ಸ್ನಾನ ಮಾಡೋವಂತಹ ಕೆಲಸಗಳು ಕಷ್ಟವಾಗುತ್ತವೆ. ಇಂಥ ಕೆಲಸಗಳನ್ನು ಮಾಡಲು ಅಸಹ್ಯ ಪಡುವುದು ಅಥವಾ ಹಿಂಜರಿಯುವುದು
ಮಾಡಬೇಡಿ. ಹಿರಿಯರ ಕೆಲಸ-ಕಾರ್ಯಗಳಿಗೆ ಕೈಲಾದಷ್ಟು ನೆರವು ನೀಡಿ.

ನ್ಯೂಸ್‍ಪೇಪರ್, ಕಥೆ ಪುಸ್ತಕ ಓದಿ :  ಒಂದೇ ಕಡೆ ಮಲಗಿ ಅಥವಾ ಕೂತು ಕೂತು ಬೇಜಾರು ಬಂದಿರುವ ಹಿರಿಯರಿಗೆ ನ್ಯೂಸ್‍ಪೇಪರ್‍ನಲ್ಲಿ ಬಂದಿರುವ ಸುದ್ದಿಗಳನ್ನು ಓದಿ ಹೇಳಿ. ಧರ್ಮ, ಪುರಾಣ ಅಥವಾ ಅವರಿಗೆ ಇಷ್ಟವಾದ
ಪ್ರಕಾರದ ಕಥೆ ಪುಸ್ತಕಗಳನ್ನು ಅವರ ಮುಂದೆ ಓದಿ. ಇದರಿಂದ ಅವರ ಮನಸ್ಸಿನಲ್ಲಿದ್ದ ಬೇಸರ ದೂರವಾಗಿ ಹೊಸ ಚೈತನ್ಯ ಮೂಡುತ್ತದೆ. 

How we should treat the elders
 

Follow Us:
Download App:
  • android
  • ios