RSS ಕಾರ್ಯದರ್ಶಿಯಿಂದ ಸೋತ ಅಭ್ಯರ್ಥಿಗೆ ಸಚಿವ ಸ್ಥಾನದ ಭರವಸೆ

ಸಿಎಂ ಬಿ.ಎಸ್. ಯಡಿಯೂರಪ್ಪ ಮಾತ್ರವಲ್ಲ, ಆರ್‌ಎಸ್‌ಎಸ್‌ ಕಾರ್ಯದರ್ಶಿಯೂ ಸಚಿವ ಸ್ಥಾನದ ಭರವಸೆ ಕೊಟ್ಟಿರುವುದಾಗಿ ಎಚ್‌. ವಿಶ್ವನಾಥ್ ಹೇಳಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು ಸಚಿವ ಸ್ಥಾನ ಸಿಗುವ ಭರವಸೆ ವ್ಯಕ್ತಪಡಿಸಿದ್ದಾರೆ.

rss state secretory assures Portfolio to h vishwanath

ಮೈಸೂರು(ಜ.25): ಸಿಎಂ ಬಿ.ಎಸ್. ಯಡಿಯೂರಪ್ಪ ಮಾತ್ರವಲ್ಲ, ಆರ್‌ಎಸ್‌ಎಸ್‌ ಕಾರ್ಯದರ್ಶಿಯೂ ಸಚಿವ ಸ್ಥಾನದ ಭರವಸೆ ಕೊಟ್ಟಿರುವುದಾಗಿ ಎಚ್‌. ವಿಶ್ವನಾಥ್ ಹೇಳಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು ಸಚಿವ ಸ್ಥಾನ ಸಿಗುವ ಭರವಸೆ ವ್ಯಕ್ತಪಡಿಸಿದ್ದಾರೆ.

ನನಗೆ ಸಚಿವ ಸ್ಥಾನ ಕೊಡುತ್ತೀನಿ ಅಂತ ಯಡಿಯೂರಪ್ಪ ಮಾತ್ರ ಹೇಳಿಲ್ಲ. ಆರ್‌ಎಸ್‌ಎಸ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಸಚಿವ ಆರ್.ಅಶೋಕ್, ಬಿಜೆಪಿಯ ಹಲವು ಮಂತ್ರಿಗಳು ಹೇಳಿದ್ದಾರೆ. ನಿಮ್ಮಿಂದಲೇ ಈ ಸರ್ಕಾರ ಅಂತ ಹೇಳುತ್ತಾ ಬಂದಿದ್ದಾರೆ. ಹೀಗಾಗಿ ಅವರು ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದು ಅವರು ಹೇಳಿದ್ದಾರೆ.

ಫ್ರೀ ಕಾಶ್ಮೀರ: ನಳಿನಿ ಪರ ಬ್ಯಾಟಿಂಗ್‌, ಸಿದ್ದುಗೆ ಸಂಕಷ್ಟ

ಮೈಸೂರಿನಲ್ಲಿ ಪರಾಜಿತ ಅಭ್ಯರ್ಥಿ ಹೆಚ್.ವಿಶ್ವನಾಥ್ ಮಾತನಾಡಿ, ರಾಜೀನಾಮೆ ಕೊಟ್ಟು ಬಂದ 17 ಜನರಿಗೂ ಸ್ಥಾನಮಾನ ಕೊಡಬೇಕು. ಈಗಲೂ ನಮ್ಮಲ್ಲಿ ಅದೇ ಒಗ್ಗಟ್ಟು ಇದೆ. ಕೊಡದೇ ಇದ್ದರೆ ಏನಾಗುತ್ತೋ ನೋಡೊಣ ಎಂದಿದ್ದಾರೆ.

ಸುಪ್ರೀಂಕೋರ್ಟ್ ಎಲ್ಲಿಯೂ ನೀವು ಗೆದ್ದುಬನ್ನಿ ಎಂದು ಹೇಳಿಲ್ಲ. ನೀವು ಅಪವಿತ್ರರಾಗಿದ್ದೀರಿ ಚುನಾವಣೆಗೆ ನಿಂತು ಪವಿತ್ರರಾಗಿ ಎಂದಿದ್ದಾರೆ. ಸುಪ್ರಿಂ ತೀರ್ಪಿನಲ್ಲಿ ಗೆಲುವು ಸೋಲಿನ ಪ್ರಶ್ನೆ ಇಲ್ಲ. ಬಿಜೆಪಿ ಸೆಂಟ್ರಲೈಸ್ಡ್ ಪಾರ್ಟಿ. ಈಗಲೇ ಆಗಬೇಕು ಎನ್ನುವಂತಿಲ್ಲ. ಎಲ್ಲವೂ ಚರ್ಚೆ ಆಗಬೇಕು, ನೋಡೋಣ ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಿಗೆ ಬಿಜೆಪಿ ನಾಯಕ BL ಸಂತೋಷ್ ಸನ್ಮಾನ: ಸುತ್ತೂರು ಶ್ರೀ ಸಾಕ್ಷಿ

ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸಚಿವ ಸ್ಥಾನಮಾನ ಇಲ್ಲ ಎಂಬುದು ಕೇವಲ ಊಹಾಪೋಹ. ಸಂಪುಟ ವಿಸ್ಥರಣೆಗೆ ಏನು ತೊಡಕಾಗಿದೆ ಎಂಬುದನ್ನು ಯಡಿಯೂರಪ್ಪ ಅವರನ್ನು ಕೇಳಬೇಕು. ಯಡಿಯೂರಪ್ಪ ಮಾತಿಗೆ ನಿಲ್ಲುವ ನಾಯಕ. ಅವರು ಅದನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಹುಣಸೂರಿನಲ್ಲಿ ಬಿಜೆಪಿ ಎಲ್ಲಿತ್ತು..? ನಾನು ಹುಣಸೂರಿನಲ್ಲಿ ಸೋತಿರಬಹುದು. ಮೊದಲೆಲ್ಲ 5,6 ಸಾವಿರ ದಾಟಿರಲಿಲ್ಲ. ನಾನು ಸೋತರೂ 54 ಸಾವಿರ ಮತ ಪಡೆದಿದ್ದೇನೆ. ಅಲ್ಲಿ ಪಕ್ಷ ಬೆಳೆದಿದೆ, ಇದನ್ನ ನೋಡಬೇಕು. ಹಾಗಾಗಿ ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ. 17 ಜನರಿಗೂ ಸ್ಥಾನಮಾನ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios