Asianet Suvarna News Asianet Suvarna News

ಲಾಕ್‌ಡೌನ್‌ ಎಫೆಕ್ಟ್‌: ಜರ್ಮನಿಯಿಂದ ತಾಯ್ನಾಡಿಗೆ ಮರಳಿದ ಗರ್ಭಿಣಿ-ಮಗಳು

ಮಾರ್ಚ್‌ 20ರಿಂದಲೇ ಜರ್ಮನಿಯಲ್ಲಿ ಲಾಕ್‌ ಆಗಿದ್ದ ಅಳ್ನಾವರ ತಾಯಿ, ಮಗಳು| ಭಾರತಕ್ಕೆ ಮರಳಿದ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ, ಪಟ್ಟಣದ ನಿವಾಸಿ ಎಂ.ಸಿ. ಹಿರೇಮಠ ಅವರ ಪುತ್ರಿ ವಿಜೇತಾ ಹಾಗೂ ಮೊಮ್ಮಗಳು ನವ್ಯಾ|
 

Pregnant and Daughter Back to Hubballi From Germany due to Lockdown
Author
Bengaluru, First Published Jun 1, 2020, 10:01 AM IST

ಅಳ್ನಾವರ(ಜೂ.01): ಕೊರೋನಾ ಲಾಕ್‌ಡೌನ್‌ ಪರಿಸ್ಥಿತಿಯಲ್ಲಿ ಜರ್ಮನಿಯಲ್ಲಿದ್ದು, ಹೆರಿಗೆಗಾಗಿ ಮರಳಿ ಭಾರತಕ್ಕೆ ಬರಲು ಹಾತೊರೆಯುತ್ತಿದ್ದ ಅಳ್ನಾವರದ ವಿಜೇತಾ ಶಶಾಂಕ ಅವರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆ ತಂದು ಅಲ್ಲಿಯೇ ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ, ಪಟ್ಟಣದ ನಿವಾಸಿ ಎಂ.ಸಿ. ಹಿರೇಮಠ ಅವರ ಪುತ್ರಿ ವಿಜೇತಾ ಹಾಗೂ ಮೊಮ್ಮಗಳು ನವ್ಯಾ ಮರಳಿ ಭಾರತಕ್ಕೆ ಮರಳಿದ್ದಾರೆ. ಜರ್ಮನಿಯಿಂದ ಪ್ರಯಾಣ ಬೆಳೆಸಿದ ಇವರಿಬ್ಬರೂ ಮೇ 30ರಂದು ದೆಹಲಿಗೆ ಬಂದಿಳಿದು ನಂತರ ಅದೇ ವಿಮಾನದಲ್ಲಿ ಬೆಂಗಳೂರಿಗೆ ಬಂದರು.

Pregnant and Daughter Back to Hubballi From Germany due to Lockdown

ಹುಬ್ಬಳ್ಳಿ: ಕೊರೋನಾ ರೋಗಿಗೆ ಗ್ಯಾಂಗ್ರಿನ್‌, ಯಶಸ್ವಿ ಶಸ್ತ್ರಚಿಕಿತ್ಸೆ

ಮಗಳು ಗರ್ಭಿಣಿ ಇರುವುದರಿಂದ ಹಿರೇಮಠ ಕುಟುಂಬ ಸಾಕಷ್ಟುಚಿಂತೆಗೀಡಾಗಿತ್ತು. ಆದಷ್ಟುಬೇಗ ವಿಜೇತಾ ಅವರನ್ನು ಕರೆ ತರುವ ಪ್ರಯತ್ನ ಮಾಡುತ್ತಿದ್ದರು. ಸಕಾಲದಲ್ಲಿ ಅವರ ಸಹಾಯಕ್ಕೆ ಬಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಜೇತಾ ಅವರನ್ನು ತಾಯ್ನಾಡಿಗೆ ಕರೆ ತರಲು ನೆರವಾದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೂಚನೆ ಮೇರೆಗೆ ಹಿರೇಮಠ ಅವರು ನಿಗದಿತ ನಮೂನೆಯ ಅರ್ಜಿ ತುಂಬಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರು. ಇದಾದ ಮರು ದಿನವೇ ನಿಗದಿತ ನಮೂನೆಯಲ್ಲಿ ಜರ್ಮನಿಯಲ್ಲಿರುವ ಭಾರತೀಯ ದೂತವಾಸ ಕಚೇರಿ ಕೂಡಾ ಅರ್ಜಿ ಸ್ವೀಕರಿಸಿದಾಗ ತವರಿನತ್ತ ಮುಖ ಮಾಡಲು ವಿಜೇತಾ ಅವರಿಗೆ ಹೊಸ ಆಶಾಭಾವನೆ ಮೂಡಿತು. ಭಾರತೀಯ ದೂತವಾಸ ಬಿಡುಗಡೆ ಮಾಡಿದ ಜರ್ಮನಿಯಿಂದ ಭಾರತಕ್ಕೆ ಬರುವ ಪ್ರಥಮ ವಿಮಾನ ಯಾನದ ಪಟ್ಟಿಯಲ್ಲಿ ವಿಜೇತಾ ಮತ್ತು ಅವರ ಪುತ್ರಿ ನವ್ಯಾ ಅವರ ಹೆಸರು ಇತ್ತು. ಪ್ರಸ್ತುತ ವಿಜೇತಾ ಸುರಕ್ಷಿತವಾಗಿ ತವರು ಭೂಮಿಗೆ ಬಂದಿದ್ದು ಅವರ ಇಡೀ ಕುಟುಂಬ ಖುಷಿಯಲ್ಲಿದೆ.

ವಾಸ್ತವವಾಗಿ ವಿಜೇತಾ ಅವರು ತಮ್ಮ ಪುತ್ರಿಯೊಂದಿಗೆ ಭಾರತಕ್ಕೆ ಬರಲು ಮಾಚ್‌ರ್‍ 20ರಂದು ವಿಮಾನಕ್ಕೆ ಟಿಕೆಟ್‌ ಕಾಯ್ದಿರಿಸಿದ್ದರು. ಅಷ್ಟರಲ್ಲಿಯೇ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಾ ಎಲ್ಲೆಡೆ ಲಾಕ್‌ಡೌನ್‌ ಆಗಿ ಹೊರ ರಾಷ್ಟ್ರದಿಂದ ಭಾರತಕ್ಕೆ ಬರುವ ವಿಮಾನ ಸಂಚಾರ ರದ್ದು ಮಾಡಲಾಯಿತು. ಕಾರಣ ಇವರು ಪತಿಯೊಂದಿಗೆ ಜರ್ಮನಿಯಲ್ಲಿಯೇ ತಂಗಬೇಕಾಗಿತ್ತು. ತಾಯಿ, ಮಗಳು ಇಬ್ಬರೂ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದು ವರದಿಗೆ ಕಾಯಲಾಗುತ್ತಿದೆ.
 

Follow Us:
Download App:
  • android
  • ios