ಕೋಲಾರದಲ್ಲಿ ಮಳೆ: ಟೊಮೆಟೊ, ಕ್ಯಾಪ್ಸಿಕಂಗೆ ಹಾನಿ, ಕೆಜಿ ಗಾತ್ರದ ಆಲಿಕಲ್ಲು
ಕೋಲಾರ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ. ಕೋಲಾರ ಸೇರಿದಂತೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಸುತ್ತಮುತ್ತ ಆಲಿ ಕಲ್ಲು ಸಹಿತ ಜೋರು ಮಳೆಯಾಗಿದೆ.
ಕೋಲಾರ(ಏ.29): ಕೋಲಾರ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ. ಕೋಲಾರ ಸೇರಿದಂತೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಸುತ್ತಮುತ್ತ ಆಲಿ ಕಲ್ಲು ಸಹಿತ ಜೋರು ಮಳೆಯಾಗಿದೆ.
ಕೆಜಿಎಫ್ ತಾಲೂಕಿನ ಸುತ್ತಮುತ್ತ ಬಿರುಗಾಳಿ ಸಹಿತ ಜೋರು ಮಳೆಯಾಗಿದೆ. ಆದರೆ ಮಾಲೂರು, ಮುಳಬಾಗಲು, ಶ್ರೀನಿವಾಸಪುರ ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣವಿದ್ದು ಮಳೆಯಾಗಿಲ್ಲ. ಕೆಜಿಎಫ್ ಹಾಗೂ ಬಂಗಾರಪೇಟೆ ತಾಲ್ಲೂಕುಗಳಲ್ಲಿ ಆಲಿಕಲ್ಲು ಮಳೆಯಿಂದ ವಿವಿಧ ರೈತರ ಬೆಳೆಗಳಿಗೆ ಹಾನಿಯಾಗಿದೆ.
1 ಕೆಜಿ ಗಾತ್ರದ ಆಲಿಕಲ್ಲು
ಕೋಲಾರ ತಾಲೂಕಿನ ತಂಬಿಹಳ್ಳಿ ಬಳಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಬಿದ್ದಿದೆ. ಸುಮಾರು ಒಂದು ಕೆ.ಜಿ.ಗಾತ್ರದ ಆಲಿಕಲ್ಲುಗಳು ಬಿದ್ದು ಮನೆಗಳ ಮೇಲ್ಚಾವಣಿಗಳು ಹಾಳಾಗಿದೆ.
ಇದೇ ಗ್ರಾಮದ ಚಲಪತಿ ಅವರ ಮನೆಯ 30 ಸಿಮೆಂಟ್ ಶೀಟ್‌ಗಳು ಹಾಳಾಗಿವೆ. ಆಲಿಕಲ್ಲು ಮಳೆಯಿಂದ ಗ್ರಾಮದ ಅನೇಕರ ಟೊಮೆಟೊ ಬೆಳೆ ಹಾಳಾಗಿವೆ, ಅಲ್ಲದೆ ಕ್ಯಾಪ್ಸಿಕಂ ತೋಟಗಳಿಗೂ ಹಾನಿಯಾಗಿದೆ.
ಜವಳಿ ನಗರದಲ್ಲಿ ಬಟ್ಟೆ ಅಂಗಡಿ ತೆರೆಯಲು ಇಲ್ಲ ಅನುಮತಿ, ಹೀಗಿದೆ ದಾವಣಗೆರೆ ಪರಿಸ್ಥಿತಿ
ಹುತ್ತೂರು ಹೋಬಳಿಯಲ್ಲಿಯೂ ಆಲಿಕಲ್ಲು ಮಳೆಯಾಗಿದ್ದು ಬೆಳೆಗಳಿಗೆ ಸಾಕಷ್ಟುಹಾನಿ ಆಗಿದೆ, ಬೀನ್ಸ್, ಹೀರೇಕಾಯಿ ಮುಂತಾದ ಬೆಳೆಗಳು ಹಾಳಾಗಿ ಲಕ್ಷಾಂತರ ರೂಪಾಯಿ ನಷ್ಟಉಂಟಾಗಿದೆ ರೈತ ನಾಗರಾಜ್ ತಿಳಿಸಿದ್ದಾರೆ.