ಉಡುಪಿ, ದಕ್ಷಿಣ ಕನ್ನಡಕ್ಕೆ ಅಬಕಾರಿ ಇಲಾಖೆಯಿಂದ ಸ್ಯಾನಿಟೈಸರ್‌

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೊರೋನಾ ವೈರಸ್‌ ಹರಡುವುದನ್ನು ನಿಯಂತ್ರಿಸಲು ಕೊರತೆಯಾಗಿದ್ದ ಸ್ಯಾನಿಟೈಸರ್‌ನ್ನು ಇದೀಗ ಉಡುಪಿ ಜಿಲ್ಲಾ ಅಬಕಾರಿ ಇಲಾಖೆ ಯಸ್ವಿಯಾಗಿ ಪೂರೈಕೆ ಮಾಡಿದೆ.

 

Excise Department provides sanitizer to udupi and dakshina kannada

ಉಡುಪಿ(ಏ.07): ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೊರೋನಾ ವೈರಸ್‌ ಹರಡುವುದನ್ನು ನಿಯಂತ್ರಿಸಲು ಕೊರತೆಯಾಗಿದ್ದ ಸ್ಯಾನಿಟೈಸರ್‌ನ್ನು ಇದೀಗ ಉಡುಪಿ ಜಿಲ್ಲಾ ಅಬಕಾರಿ ಇಲಾಖೆ ಯಸ್ವಿಯಾಗಿ ಪೂರೈಕೆ ಮಾಡಿದೆ.

ಪ್ರಸ್ತುತ ಲಾಕ್‌ ಡೌನ್‌ನಿಂದಾಗಿ ಜಿಲ್ಲೆಯ ಎಲ್ಲಾ ಮದ್ಯದಂಗಡಿಗಳು ಮುಚ್ಚಲಾಗಿದ್ದು, ಮದ್ಯ ತಯಾರಿಸುವ ಡಿಸ್ಟಿಲರಿಗಳಲ್ಲಿ ಆಲ್ಕೋಹಾಲ್‌ ಬೇಸ್ಡ್‌ ಸ್ಯಾನಿಟೈಸರ್‌ಗಳನ್ನು ತಯಾರಿಸಲಾಗುತ್ತಿದೆ. ಔಷಧಿ ನಿಯಂತ್ರಣ ಇಲಾಖೆಯ ಪರವಾನಿಗೆಯೊಂದಿಗೆ ಉಡುಪಿ ಜಿಲ್ಲೆಯ ಸರ್ವೋದಯ ಡಿಸ್ಟಿಲರಿಯಲ್ಲಿ ಈ ಸ್ಯಾನಿಟೈಸರ್‌ನ್ನು ತಯಾರಿಸಲಾಗುತ್ತಿದೆ ಎಂದು ಜಿಲ್ಲಾ ಅಬಕಾರಿ ಇಲಾಖೆಯ ಉಪಾಯುಕ್ತ ನಾಗೇಶ್‌ ಕುಮಾರ್‌ ತಿಳಿಸಿದ್ದಾರೆ.

ನಕಲಿ ಪ್ರೆಸ್‌ ಸ್ಟಿಕ್ಕರ್‌ ಅಂಟಿಸಿ ಓಡಾಡುತ್ತಿದ್ದ ವಾಹನ ವಶಕ್ಕೆ

ಶೇ. 70ಕ್ಕಿಂತ ಹೆಚ್ಚು ಆಲ್ಕೋಹಾಲ್‌ ಇರುವ ಸ್ಯಾನಿಟೈಸರ್‌ಗಳಲ್ಲಿ ಮಾತ್ರ ಕೊರೋನಾ ವೈರಸ್‌ ಸಾಯುತ್ತವೆ. ಆದ್ದರಿಂದ ಈ ಸ್ಯಾನಿಟೈಸರ್‌ಗಳಲ್ಲಿ ಶೇ. 80ರಷ್ಟುಆಲ್ಕೋಹಾಲ್, ಶೇ 1.53 ಗ್ಲಿಸರಲ್, ಶೇ 0.125 ಹೈಡ್ರೋಜನ್‌ ಪೆರಾಕ್ಸೈಡ್‌ ಮತ್ತು ಉಳಿದ ಭಾಗ ಡಿಮಿನರಲೈಸ್‌ ನೀರನ್ನು ಬಳಸಲಾಗುತ್ತಿದೆ.

ಈಗಾಗಲೇ 3 ಹಂತಗಳಲ್ಲಿ ಉಡುಪಿ ಜಿಲ್ಲೆಗೆ 1350 ಲೀಟರ್‌ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ 1800 ಲೀಟರ್‌ ಸ್ಯಾನಿಟೈಸರ್‌ ಪೂರೈಕೆ ಮಾಡಲಾಗಿದೆ. ದಕ ಜಿಲ್ಲೆಯಿಂದ ಇನ್ನೂ ಬೇಡಿಕೆ ಬಂದಿದೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚು ಸ್ಯಾನಿಟೈಸರ್‌ ತಯಾರಿಸಲು ಇಲಾಖೆ ಸಿದ್ಧ ಇದೆ ಎಂದು ನಾಗೇಶ್‌ ಕುಮಾರ್‌ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios