ಮದುವೆ ಮಂಟಪದಲ್ಲೂ ಪೌರತ್ವ ಕಾಯ್ದೆಯದ್ದೇ ಹವಾ..!
ಮದುವೆ ಮನೆಯಲ್ಲಿ ಪೌರತ್ವ ಕಾಯ್ದೆ ಹವಾ ಕಂಡು ಬಂದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮದುವೆ ಮಂಟಪದಲ್ಲೇನು ನಡೆಯಿತು..? ನೀವೇ ಓದಿ.
ಮಂಗಳೂರು(ಜ.19): ಬಂಟ್ವಾಳದ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಗೀತಾಂಜಲಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಾಹ ಕಾರ್ಯಕ್ರಮದಲ್ಲಿ ಬಡಗಬೆಳ್ಳೂರು ಸಮೀಪದ ಕಮ್ಮಾಜೆ ಯುವಕರು ‘ಪೌರತ್ವ ತಿದ್ದುಪಡಿ ಕಾಯ್ದೆ’ ಬೆಂಬಲಿಸಿ ಭಿತ್ತಿಚಿತ್ರ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.
ತಾಲೂಕಿನ ತೆಂಗಬೆಳ್ಳೂರು ಗ್ರಾಮದ ಹೆಬ್ಬರಬೈಲು ನಿವಾಸಿ ರೋಹಿತ್ ಗಾಣಿಗ ಮತ್ತು ಕಡೇಶಿವಾಲಯ ನಿವಾಸಿ ಶೋಭಾ ಅವರ ವಿವಾಹ ಕಾರ್ಯಕ್ರಮ ಶುಕ್ರವಾರ ನಡೆದಿದ್ದು, ಇಲ್ಲಿಗೆ ಬಂದಿದ್ದ ಅಪಾರ ಮಂದಿ ಸಂಬಂಧಿಕರು ಮತ್ತು ಸ್ನೇಹಿತರು ನೂತನ ವಧು-ವರರಿಗೆ ಶುಭ ಹಾರೈಸಿದ್ದಾರೆ.
ಅಡ್ಯಾರ್ ಪೌರತ್ವ ಪ್ರತಿಭಟನೆ: 'ಹೋರಾಟ ಇಲ್ಲಿಗೇ ಮುಗಿದಿಲ್ಲ'..!
ಇದೇ ವೇಳೆ ಬಡಗಬೆಳ್ಳೂರು ಸಮೀಪದ ಕಮ್ಮಾಜೆ ನಾಗಶ್ರೀ ಮಿತ್ರ ವೃಂದ ಸಂಘಟನೆ ಯುವಕರು ವಿವಾಹ ಮಂಟಪದಲ್ಲಿ ಬಂದು ‘ಪೌರತ್ವ ತಿದ್ದುಪಡಿ ಕಾಯ್ದೆ’ ಬೆಂಬಲಿಸಿ ಭಿತ್ತಿಚಿತ್ರ ಪ್ರದರ್ಶಿಸಿ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆದಿದ್ದಾರೆ.