ಅಪಘಾತ ಮಾಡಿದ್ದಕ್ಕೆ ಸಿಕ್ಕಿದೆ ಸಾಕ್ಷಿ, ಹ್ಯಾರಿಸ್ ಪುತ್ರ ನಲಪಾಡ್‌ಗೆ ನೋಟಿಸ್
ಎರಡು ದಿನಗಳ ಹಿಂದೆ ಮೇಖ್ರಿ ಸರ್ಕಲ್‌ನಲ್ಲಿ ಐಷರಾಮಿ ಕಾರಿನಲ್ಲಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದು, ಸರಣಿ ಅಪಘಾತಕ್ಕೆ ಸಂಬಂಧಿಸಿದಂತೆ ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಲಾಗಿದೆ.
ಬೆಂಗಳೂರು (ಫೆ.11): ಎರಡು ದಿನಗಳ ಹಿಂದೆ ಮೇಕ್ರಿ ಸರ್ಕಲ್‌ನಲ್ಲಿ ಐಷರಾಮಿ ಕಾರಿನಲ್ಲಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಸರಣಿ ಅಪಘಾತಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಲಾಗಿದೆ.
ಘಟನೆ ಸಂಬಂಧ ಸಂಚಾರಿ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿಕೆ ನೀಡಿದ್ದು, ಕಳೆದ ಎರಡು ದಿನಗಳ ಹಿಂದೆ ಮೇಕ್ರಿ ಸರ್ಕಲ್‌ನಲ್ಲಿ ಅಪಘಾತವಾಗಿತ್ತು. ಈ ಪ್ರಕರಣ ಸಂಬಂಧ ಮೊಹಮದ್ ನಲಪಾಡ್ ಚಾಲನೆ ಮಾಡುತ್ತಿದ್ದಿದ್ದು ಬೆಳಕಿಗೆ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಭಾವಿ ಶಾಸಕರ ಪುತ್ರನ ಹಿಟ್ ಆ್ಯಂಡ್ ರನ್, ಬೈಕ್ ಗೆ ಗುದ್ದಿದ ಲ್ಯಾಂಬೋರ್ಗಿನಿ ಎಸ್ಕೇಪ್
ನಿನ್ನೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿ ಬಂದು ನಾನೇ ಕೃತ್ಯ ಮಾಡಿದ್ದು ಎಂದು ಶರಣಾಗಲು ಬಂದಿದ್ದ. ಆದರೆ ಟೆಕ್ನಿಕಲ್ ದಾಖಲೆಗಳ ಪ್ರಕಾರ ನಲಪಾಡ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದು ಖಚಿತವಾಗಿದೆ. ಬೈಕ್ ಸವಾರನ ಕಾಲಿಗೆ ಗಂಭೀರವಾಗಿ ಏಟು ಬಿದ್ದಿದ್ದು, ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದಾರೆ.
"
ನಲಪಾಡ್ ಆ್ಯಕ್ಸಿಡೆಂಟ್ ಮಾಡಿ ಬೇರೆ ಕಾರನ್ನು ಹತ್ತುವಾಗ ನಮ್ಮ ಪಿಸಿ ದೂರದಿಂದ ದೃಶ್ಯವನ್ನು ನೋಡಿದ್ದಾರೆ. Rash Driving ಮತ್ತು ತಪ್ಪಿಸಿಕೊಂಡಿರುವುದಕ್ಕೆ ಪೊಲೀಸರ ಬಳಿ ಸಾಕ್ಷ್ಯ ಇದೆ, ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಶಾಸಕ ಹ್ಯಾರಿಸ್ ಪುತ್ರನ ಹುಟ್ಟುಹಬ್ಬಕ್ಕೆ ನಿಯಮ ಉಲ್ಲಂಘಿಸಿ ಫ್ಲೆಕ್ಸ್!
ನಿನ್ನೆ ಒಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಲಾಂಬೋರ್ಗಿನಿ ರೇಸ್ ಮಾಡಿರೋ ಬಗ್ಗೆ ಮಾಹಿತಿ ಇದೆ. ಮಾಹಿತಿ ಎಲ್ಲವನ್ನೂ ಕಲೆ ಹಾಕಿ ವಿಚಾರಣೆಗೆ ಒಳಪಡಿಸುತ್ತೇವೆ. ಬೇರೊಬ್ಬ ಶರಣಾಗಲು ಬಂದಿದ್ದ, ಈ ಬಗ್ಗೆಯೂ ನಮಗೆ ಮಾಹಿತಿ ಇತ್ತು. ಅದಕ್ಕೆ ಆತನ ಬಂಧನ ಮಾಡಿಲ್ಲ.
ಸೆರೆ ವಾಸ, ಇದೀ ಬೇಲ್ ಮೇಲೆ ಬಂಧ ಮುಕ್ತ
2018ರಲ್ಲಿ ಯುಬಿ ಸಿಟಿಯಲ್ಲಿ ವಿದ್ವತ್ ಎಂಬುವರ ಮೇಲಿನ ಹಲ್ಲೆ ನಡೆಸಿದ್ದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ 116 ದಿನಗಳ ಕಾಲ ಸೆರೆ ವಾಸ ಅನುಭವಿಸಿದ್ದರು. ಜಾಮೀನನ ಮೇಲೆ ಅವರು ಪುಂಡಾಟ ಕಡಿಮೆ ಮಾಡಿದಂತೆ ಕಾಣಿಸುತ್ತಿಲ್ಲ. ಕುಡಿದ ಮತ್ತಿನಲ್ಲಿ ಕಾರು ಓಡಿಸುತ್ತಿದ್ದು, ಈ ಸರಣಿ ಅಪಘಾತವೆಸಗಿದ್ದಾರೆ, ಎನ್ನಲಾಗಿದೆ.