Asianet Suvarna News Asianet Suvarna News

ಈಗ ಲಾಕ್‌ಡೌನ್ 3.0, ಅನೇಕ ಚಟುವಟಿಕೆ ಪುನಾರಂಭ: ಎಲ್ಲಿ, ಏನಿರುತ್ತೆ?

ಈಗ ಅನ್‌ಲಾಕ್‌ 1.0!| ಇಂದಿನಿಂದ ಅನೇಕ ಚಟುವಟಿಕೆ ಪುನಾರಂಭ| ಕೆಂಪು, ಕಿತ್ತಳೆ, ಹಸಿರು ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ| ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಕಠಿಣ ನಿರ್ಬಂಧ| 17ರವರೆಗೆ ಲಾಕ್‌ಡೌನ್‌

With Lockdown 3 Many Economic Activities Starts In Karnataka From Monday
Author
Bangalore, First Published May 4, 2020, 7:17 AM IST

ಬೆಂಗಲೂರು(ಮೇ.04):  ಹಂತ ಹಂತವಾಗಿ ದೇಶ ಹಹಾಗೂ ರಾಜ್ಯದಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಸಡಿಲಗೊಳಿಸಲಾಗುತ್ತಿದೆ. ಮೂರನೇ ಹಂತದಲ್ಲಿ ಅನೇಕ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಹೀಗಿರುವಾಗ ಮೂರು ವಲಯದಲ್ಲಿ ಏನೇನು ಲಭ್ಯವಿರುತ್ತೆ? ಇಲ್ಲಿದೆ ಮಾಹಿತಿ

ಯಾವ ವಲಯದಲ್ಲಿ ಏನಿರುತ್ತೆ?

ಕೆಂಪು ವಲಯ

(ಕಂಟೈನ್ಮೆಂಟ್‌ ಹೊರತಾಗಿ)

- ಹಾಲಿ ಇರುವ ಅಗತ್ಯ ಸೇವೆಗಳು, ಖಾಸಗಿ ಆಸ್ಪತ್ರೆಗಳ ಒಪಿಡಿಗಳು, ವೈದ್ಯಕೀಯ ಕ್ಲಿನಿಕ್‌ಗಳು. ಷರತ್ತುಬದ್ಧ ಮದ್ಯ ಮಾರಾಟ

- ಅನುಮತಿ ಪಡೆದ ವಾಹನಗಳ ಸಂಚಾರ. ನಾಲ್ಕು ಚಕ್ರ ವಾಹನ (ಚಾಲಕ+ಇಬ್ಬರು), ದ್ವಿಚಕ್ರ ವಾಹನ (ಸವಾರ ಮಾತ್ರ)

- ಅಗತ್ಯ ವಸ್ತುಗಳ ಸೇವೆ ಒದಗಿಸುವ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ, ಇ-ಕಾಮರ್ಸ್‌. ಇತರೆಡೆ ಎಲ್ಲ ರೀತಿಯ ಅಂಗಡಿ

- 33% ನೌಕರರೊಂದಿಗೆ ಸರ್ಕಾರಿ, ಖಾಸಗಿ ಕಚೇರಿಗೆ. ನಗರಗಳಲ್ಲಿ ಎಸ್‌ಇಜೆಡ್‌, ರಫ್ತು ಆಧರಿತ ಕೈಗಾರಿಕೆ, ಪ್ಯಾಕಿಂಗ್‌ ಉದ್ದಿಮೆ

- ಸ್ಥಳೀಯ ನೌಕರರು, ಕಾರ್ಮಿಕರ ಬಳಸಿ ಮಾಡುವ ಎಲ್ಲ ನಿರ್ಮಾಣ ಕಾರ‍್ಯ, ನವೀಕರಿಸಬಹುದಾದ ಇಂಧನ ಯೋಜನೆಗಳು

ರೋಣದಲ್ಲಿ ದೃಢಪಟ್ಟ ಮಹಾಮಾರಿ ಕೊರೋನಾ: ಹುಬ್ಬಳ್ಳಿಯಲ್ಲಿ ಆತಂಕ

ಕಿತ್ತಳೆ ವಲಯ

(ಕಂಟೈನ್ಮೆಂಟ್‌ ಹೊರತಾಗಿ)

- ಕೆಂಪು ವಲಯದಲ್ಲಿ ಅನುಮತಿ ಇರುವ ಎಲ್ಲ ವ್ಯವಸ್ಥೆಗಳು

- ಹೆಚ್ಚುವರಿಯಾಗಿ ಕ್ಷೌರದಂಗಡಿಗೆ ಷರತ್ತುಬದ್ಧ ಅನುಮತಿ

- ಇ-ಕಾಮರ್ಸ್‌ ಸೇವೆಯಡಿ ಎಲ್ಲಾ ರೀತಿಯ ವಸ್ತು ಪೂರೈಕೆ

- ಎಲ್ಲ ಸರ್ಕಾರಿ ನೌಕರರೂ ಕಚೇರಿಗೆ

ಹಸಿರು ವಲಯ

- ಕೆಂಪು, ಕಿತ್ತಳೆ ವಲಯದಲ್ಲಿ ಇರುವ ಎಲ್ಲಾ ವ್ಯವಸ್ಥೆಗಳು

- ಜಿಲ್ಲೆಯೊಳಗೆ ಷರತ್ತುಬದ್ಧ ಸರ್ಕಾರಿ ಬಸ್‌ ಸಂಚಾರ

- ಎಲ್ಲ ಸರ್ಕಾರಿ ನೌಕರರೂ ಕಚೇರಿಗೆ

ದಾವಣಗೆರೆಯಲ್ಲಿ 21 ಕೇಸ್‌ ಸ್ಫೋಟ: ರಾಜ್ಯದಲ್ಲಿ ಒಂದೇ ದಿನ 34 ಮಂದಿಗೆ ಸೋಂಕು!

ಎಲ್ಲಾ ಕಡೆ ಏನಿರಲ್ಲ?

- ರೈಲು, ಮೆಟ್ರೋ, ವಿಮಾನ ಸೇರಿ ಬಹುತೇಕ ಸಾರಿಗೆ ಸೇವೆ

- ಶಾಲಾ, ಕಾಲೇಜು ಸೇರಿದಂತೆ ಎಲ್ಲ ರೀತಿಯ ಶಿಕ್ಷಣ ಸಂಸ್ಥೆಗಳು

- ಮಾಲ್‌, ಥಿಯೇಟರ್‌ ಸೇರಿದಂತೆ ಮನರಂಜನಾ ಕೇಂದ್ರಗಳು

- ಧಾರ್ಮಿಕ, ಸಾಮಾಜಿಕ, ರಾಜಕೀಯ ಸಭೆ-ಸಮಾರಂಭಗಳು

"

Follow Us:
Download App:
  • android
  • ios