'ಅಯೋಧ್ಯೆ ಬದಲು ರಾಹುಲ್ ಗಾಂಧಿ ಜತೆ ಹಜ್ ಯಾತ್ರೆ ಹೋಗಿ' ಠಾಕ್ರೆಗೆ ಡಿಚ್ಚಿ
ಮಹಾರಾಷ್ಟ್ರ ಸಿಎಂ ಠಾಕ್ರೆ ಮೇಲೆ ವಾಗ್ದಾಳಿ/ ಅಯೋಧ್ಯೆಗೆ ಭೇಟಿ ನೀಡುವ ಬದಲು ಹಜ್ ಯಾತ್ರೆ ಕೈಗೊಳ್ಳಲಿ/ ಠಾಕ್ರೆ ಮೇಲೆ ತಿರುಗಿ ಬಿದ್ದ ಬಿಜೆಪಿ ನಾಯಕ
ಮುಂಬೈ(ಜ. 26) ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ನಡೆದು ಅಂತಿಮವಾಗಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 100 ದಿನ ಉರುಳಿದೆ.
ಸಿಎಂ ಆಗಿ ಅಧಿಕಾರ ಸ್ವೀಕರಿಸಿರುವ ಉದ್ಧವ್ ಠಾಕ್ರೆ ವಿರುದ್ಧ ಬಿಜೆಪಿ ನಾಯಕ ಜಿವಿಎಲ್ ನರಸಿಂಹ ರಾವ್ ವಾಗ್ದಾಳಿ ಮಾಡಿದ್ದಾರೆ. ಅಯೋಧ್ಯೆಗೆ ತೆರಳುವ ಬದಲಿ ಠಾಕ್ರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಹಜ್ ಯಾತ್ರೆ ಕೈಗೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ.
ಅಯೋಧ್ಯೆಗೆ ತೆರಳುವ ಬದಲು ರಾಹುಲ್ ಗಾಂಧಿಯೊಂದಿಗೆ ಹಜ್ ಯಾತ್ರೆ ಬುಕ್ ಮಾಡಲಿ. ಸದ್ಯದ ಪರಿಸ್ಥಿಗೆ ಅವರಿಗೆ ಅದು ಸರಿಯಾಗಿ ಒಪ್ಪುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಸುಪ್ರೀಂನಲ್ಲಿ ಅಯೋಧ್ಯೆ ರಾಮಮಂದಿರ: ಆರಂಭದಿಂದ ಅಂತ್ಯದವರೆಗೆ
ನಾವು ಕಾಂಗ್ರೆಸ್ ಮತ್ತು ಎನ್ ಸಿಪಿಯ ಜತೆ ಮೈತ್ರಿ ಮಾಡಿಕೊಂಡಿರಬಹುದು. ಆದರೆ ಹಿಂದುತ್ವ ತೊರೆದಿಲ್ಲ ಎಂದು ಠಾಕ್ರೆ ಹೇಳಿದ್ದರು. ಸರ್ಕಾರಕ್ಕೆ 100 ದಿನ ಪೂರೈಸಿದ ಸಂದರ್ಭದಲ್ಲಿ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡುವ ನಿರ್ಧಾರ ಮಾಡಿದ್ದರು.
ಅಯೋಧ್ಯೆಗೆ ಭೇಟಿ ನೀಡಿಒದರೆ ಠಾಕ್ರೆ ಮಾಡಿದ ಪಾಪ ಒಂದು ಚೂರು ಕಡಿಮೆ ಆಗಬಹುದು. ಇದರಿಂದ ಯಾರಿಗೂ ನೆರವಾಗಲಾರದು. ಉದ್ಧವ್ ಠಾಕ್ರೆ ಇಂದು ಹಿಂದುತ್ವದ ಪ್ರತಿನಿಧಿಯಾಗಿ ಉಳಿದುಕೊಂಡಿಲ್ಲ ಎಂದು ರಾವ್ ಗಂಭೀರ ಆರೋಪ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ನೆಪ ಮಾತ್ರಕ್ಕೆ ಒಂದು ಸರ್ಕಾರ ನಡೆಯುತ್ತಿದೆ. ಎನ್ ಸಿಪಿ ಮತ್ತು ಕಾಂಗ್ರೆಸ್ ನಾಯಕರು ಶಿವಸೇನೆಯೊಂದಿಗೆ ಹೆಜ್ಜೆ ಹಾಕುತ್ತಿಲ್ಲ ಎಂದು ರಾವ್ ಆರೋಪಿಸಿದ್ದಾರೆ.