Asianet Suvarna News Asianet Suvarna News

ಪ್ರಧಾನಿ ಕೇರ್ಸ್‌ನಿಂದ ಮೊದಲ ಕಂತು, 3100 ಕೋಟಿ ರಿಲೀಸ್‌!

50 ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ರಚಿಸಿದ್ದ ‘ಪಿಎಂ ಕೇ​ರ್‍ಸ್’ ನಿಧಿ|  ಪ್ರಧಾನಿ ಕೇರ್ಸ್‌ನಿಂದ ಮೊದಲ ಕಂತು| 3100 ಕೋಟಿ ರಿಲೀಸ್‌: ವಲಸಿಗರಿಗೂ ನೆರವು

Rs 3100 Crore From PM CARES Fund Allocated For Ventilators Migrants
Author
Bangalore, First Published May 14, 2020, 8:54 AM IST

ನವದೆಹಲಿ(ಮೇ.14): ಕೊರೋನಾ ವಿರುದ್ಧ ಹೋರಾಡಲು 50 ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ರಚಿಸಿದ್ದ ‘ಪಿಎಂ ಕೇ​ರ್‍ಸ್’ ನಿಧಿಯಿಂದ ಇದೇ ಮೊದಲ ಬಾರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.

ವೆಂಟಿಲೇಟರ್‌ ಖರೀದಿಗೆ 2000 ಕೋಟಿ, ವಲಸೆ ಕಾರ್ಮಿಕರ ಹಿತರಕ್ಷಣೆಗೆ 1000 ಕೋಟಿ ಹಾಗೂ ಲಸಿಕೆ ಶೋಧನೆಗೆ ನೆರವಾಗಲು 100 ಕೋಟಿ ರು. ನೆರವನ್ನು ಪ್ರಕಟಿಸಲಾಗಿದೆ.

2000 ಕೋಟಿ ರು. ನೆರವು ಬಳಸಿ 50 ಸಾವಿರ ವೆಂಟಿಲೇಟರ್‌ ಖರೀದಿಸಿ, ಆಸ್ಪತ್ರೆಗಳಿಗೆ ನೀಡಲಾಗುತ್ತದೆ. ವಲಸೆ ಕಾರ್ಮಿಕರ ವಸತಿ, ಆಹಾರ, ವೈದ್ಯಕೀಯ ಚಿಕಿತ್ಸೆ, ಸಾರಿಗೆ ವೆಚ್ಚಕ್ಕಾಗಿ 1000 ಕೋಟಿ ರು. ಬಳಸಲು ಉದ್ದೇಶಿಸಲಾಗಿದೆ.

Follow Us:
Download App:
  • android
  • ios