ಹೆದರಬೇಡಿ, ಕೊರೋನಾ ಚಿಕಿತ್ಸೆಗೆ 1 ಲಕ್ಷ ಬೆಡ್‌ ಇವೆ!

ಹೆದರಬೇಡಿ, ಕೊರೋನಾ ಚಿಕಿತ್ಸೆಗೆ 1 ಲಕ್ಷ ಬೆಡ್‌ ಇವೆ| ಸದ್ಯಕ್ಕೆ 1600 ಬೆಡ್‌ ಸಾಕು: ಕೇಂದ್ರ ಸರ್ಕಾರ

Over 1 lakh isolation beds with oxygen support ready for coronavirus patients says govt

ನವದೆಹಲಿ(ಏ.13): ‘ಕೊರೋನಾ ವೈರಸ್‌ ಹರಡುವಿಕೆ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ. ಇದರ ಚಿಕಿತ್ಸೆಗೆ ಬೇಕಾದಷ್ಟುಪೂರ್ವಸಿದ್ಧತೆಗಳನ್ನು ಸರ್ಕಾರ ಮಾಡಿಕೊಂಡಿದೆ. ಕೊರೋನಾ ಚಿಕಿತ್ಸೆಗಾಗಿ ಇಂದಿನ ಮಟ್ಟಿಗೆ 1671 ಹಾಸಿಗೆಗಳ ಅಗತ್ಯವಿದೆ. ಆದರೆ ನಮ್ಮ ಆಸ್ಪತ್ರೆಗಳಲ್ಲಿ 1.05 ಲಕ್ಷ ಹಾಸಿಗೆಗಳು ಈಗಾಗಲೇ ಲಭ್ಯವಿವೆ’ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕೊರೋನಾ ಕುರಿತ ತಮ್ಮ ದೈನಂದಿನ ವಿವರಣೆ ನೀಡುವ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌, ‘ಭಾನುವಾರ ಸಂಜೆ 4 ಗಂಟೆಯವರೆಗೆ 8,356 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇವರಲ್ಲಿ ಕೇವಲ ಶೇ.5 ಜನರಿಗೆ ಮಾತ್ರ ಆಮ್ಲಜನಕ ಸಹಾಯ ಬೇಕಾಗುತ್ತದೆ. ಅಂದರೆ 1671 ಬೆಡ್‌ಗಳು ಈ ರೋಗಿಗಳಿಗೆ ಸಾಕು. ಆದರೆ ನಮ್ಮ ಬಳಿ ಈಗಾಗಲೇ 1.05 ಲಕ್ಷ ಹಾಸಿಗೆಗಳು ಲಭ್ಯವಿವೆ. ನಾವು ಮುಂಜಾಗ್ರತಾ ಕ್ರಮವಾಗಿ ಹೆಚ್ಚು ಪೂರ್ವಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.

ಹೆರಿಗೆ ರಜೆ ಕ್ಯಾನ್ಸಲ್, ಕಂದನನ್ನೆತ್ತಿ ಕರ್ತವ್ಯಕ್ಕೆ ಹಾಜರಾದ IAS ಆಫೀಸರ್!

‘ಶೇ.85 ರೋಗಿಗಳಿಗೆ ಸಣ್ಣ ಪ್ರಮಾಣದ ಕೊರೋನಾ ಲಕ್ಷಣಗಳಿದ್ದು, ಅವರಿಗೆ ಸಾಮಾನ್ಯ ಚಿಕಿತ್ಸೆ ಸಾಕು. ಶೇ.5 ಜನರಿಗೆ ಆಮ್ಲಜನಕ ಸಹಾಯ ಹಾಗೂ ಶೇ.2 ಜನರಿಗೆ ಐಸಿಯುದಲ್ಲಿ ಕೃತಕ ಉಸಿರಾಟ ವ್ಯವಸ್ಥೆ ಬೇಕಾಗಿದೆ’ ಎಂದು ಅಂಕಿ-ಅಂಶ ವಿವರಿಸಿದರು.

‘ದೇಶದಲ್ಲಿ ಕೇವಲ ಕೊರೋನಾಗೆಂದೇ ಚಿಕಿತ್ಸೆಗೆ ನೀಡುವ 601 ಆಸ್ಪತ್ರೆಗಳಿವೆ. ಸಶಸ್ತ್ರ ಪಡೆಗಳು 51 ಆಸ್ಪತ್ರೆಗಳನ್ನು ಸಿದ್ಧಪಡಿಸಿವೆ. ಅದರಲ್ಲಿ 9000 ಬೆಡ್‌ಗಳಿವೆ’ ಎಂದರು.

ಕೊರೋನಾ ಆತಂಕದ ನಡುವೆಯೂ ಕರ್ನಾಟಕದ ಜನರಿಗೆ ಗುಡ್‌ ನ್ಯೂಸ್...!

ದೇಶದಲ್ಲಿ ಈವರೆಗೆ 716 ಜನ ಗುಣಮುಖ

ಶನಿವಾರ ಸಂಜೆ 4ರಿಂದ ಭಾನುವಾರ ಸಂಜೆ 4ರವರೆಗಿನ ಅಂಕಿ ಅಂಶ ನೀಡಿದ ಲವ್‌ ಅಗರ್‌ವಾಲ್‌ ಅವರು, ‘ಈ ಅವಧಿಯವರೆಗೆ 8,356 ಜನ ಸೋಂಕಿತರಾಗಿದ್ದಾರೆ. 909 ಹೊಸ ಪ್ರಕರಣ ದಾಖಲಾಗಿವೆ. 34 ಜನ ಸಾವನ್ನಪ್ಪಿದ್ದಾರೆ. ಶುಭ ಸಮಾಚಾರವೆಂದರೆ 716 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಶನಿವಾರ ಸಂಜೆಯಿಂದ ಭಾನುವರ ಸಂಜೆಯವರೆಗೆ ಒಂದೇ ದಿನ 74 ಮಂದಿ ಗುಣಮುಖರಾಗಿದ್ದಾರೆ’ ಎಂದು ಹೇಳಿದರು. ಕೊರೋನಾ ಟೆಸ್ಟಿಂಗ್‌ ಕೈಗೊಳ್ಳುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಸಲಹೆ ನೀಡಲು ಬೆಂಗಳೂರಿನ ನಿಮ್ಹಾನ್ಸ್‌ ಹಾಗೂ ಏಮ್ಸ್‌ ಸೇರಿದಂತೆ 14 ಸಂಸ್ಥೆಗಳನ್ನು ಗುರುತಿಸಲಾಗಿದೆ ಎಂದರು.

Latest Videos
Follow Us:
Download App:
  • android
  • ios