ಕೊರೋನಾ ಲಸಿಕೆ, ಮತ್ತೊಂದು ಹೆಜ್ಜೆ ಮುಂದೆ ಇಟ್ಟ ಭಾರತ!
10 ರೂಪಗಳಲ್ಲಿ ಹಬ್ಬುತ್ತಿದೆ ಕೊರೋನಾ ವೈರಸ್!| ಸಾರ್ಸ್ ಕೋವ್, ಎ2ಎ ಮತ್ತಿತರ ಹೆಸರಲ್ಲಿ ಸೋಂಕು| ಇವುಗಳಲ್ಲಿ ಎ2ಎ ವೈರಸ್ ಹೆಚ್ಚು ಅಪಾಯಕಾರಿ| ಭಾರತದಲ್ಲಿ ಹರಡಿರುವುದು ಇದೇ ಜಾತಿಯ ವೈರಸ್
ಮುಂಬೈ(ಏ.29): ಚೀನಾದ ವುಹಾನ್‌ನಲ್ಲಿ ಮೊದಲಿಗೆ ಪತ್ತೆಯಾದ ಕೊರೋನಾ ವೈರಸ್ ಇದೀಗ ಹತ್ತು ವಿವಿಧ ರೂಪಗಳನ್ನು ಪಡೆದು ಜಗತ್ತಿನಾದ್ಯಂತ ಹರಡುತ್ತಿದೆ ಎಂಬ ಆಘಾತಕಾರಿ ಸಂಗತಿ ಹೊರಬಿದ್ದಿದೆ. ವಿಶೇಷವೆಂದರೆ ಭಾರತೀಯ ವಿಜ್ಞಾನಿಗಳೇ ಇದನ್ನು ಪತ್ತೆಹಚ್ಚಿದ್ದಾರೆ.
ಕೋವಿಡ್-19 ವೈರಸ್‌ನ ಮೂಲ ರೂಪ ‘ಸಾರ್ಸ್-ಕೋವ್’ ಎಂಬ 10 ವರ್ಷಗಳ ಹಿಂದೆ ಪತ್ತೆಯಾಗಿದ್ದ ವೈರಸ್. ಅದೇ ಆಗ ಸಾರ್ಸ್ ಎಂದು ಪ್ರಸಿದ್ಧವಾಗಿತ್ತು. ಆ ವೈರಸ್ ಕಾಲಕ್ರಮೇಣ ‘ಸಾರ್ಸ್-ಕೋವ್2’ ವೈರಸ್ ಆಗಿ ರೂಪಾಂತರಗೊಂಡು ಚೀನಾದ ವುಹಾನ್‌ನಲ್ಲಿ ಕಳೆದ ವರ್ಷ ಮನುಷ್ಯರಿಗೆ ಸೋಂಕು ಹರಡತೊಡಗಿತು. ಅದನ್ನೇ ಕೊರೋನಾ ವೈರಸ್ ಅಥವಾ ಕೋವಿಡ್-19 ಎಂದು ಕರೆಯಲಾಯಿತು. ಈ ಕೋವಿಡ್-19 ವೈರಸ್ ಈಗ ಹತ್ತು ವಿವಿಧ ರೂಪಗಳನ್ನು ಪಡೆದು ಜಗತ್ತಿನಲ್ಲಿ ಹರಡುತ್ತಿದೆ. ಅವುಗಳಲ್ಲಿ ಎ2ಎ ಎಂಬ ವಿಧದ ವೈರಸ್ ಅತ್ಯಂತ ಶಕ್ತಿಶಾಲಿಯಾಗಿದ್ದು, ಈ ವೈರಸ್ಸೇ ಭಾರತವೂ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ ಭಾರಿ ಹಾನಿ ಉಂಟುಮಾಡುತ್ತಿದೆ. ಕೋವಿಡ್-19 ವೈರಸ್ಸಿನ ಎ2ಎ ರೂಪಾಂತರವು ಮೂಲ ಕೊರೋನಾ ವೈರಸ್‌ಗಿಂತ ಬೇಗ ಶ್ವಾಸಕೋಶಕ್ಕೆ ಹರಡಿ ದ್ವಿಗುಣಗೊಳ್ಳುವ ಶಕ್ತಿ ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಲಾಕ್‌ಡೌನ್ ಮಧ್ಯೆ ಸಿಪಿಐ ಬರ್ತಡೇ ಸಂಭ್ರಮ: 'ಇದೆಲ್ಲಾ ಬೇಕಿತ್ತಾ ಈ ಟೈಮ್‌ನಲ್ಲಿ..?'
ಒಂದು ವೈರಸ್ಸಿನ ನ್ಯೂಕ್ಲಿಯಸ್‌ನಲ್ಲಿ ಆಗುವ ಬದಲಾವಣೆಯಿಂದಾಗಿ ಅದು ಬೇರೆ ಬೇರೆ ರೂಪ ಪಡೆದುಕೊಂಡು, ಯಾವ ರೂಪದ ವೈರಸ್ ಹೆಚ್ಚು ಶಕ್ತಿಶಾಲಿಯೋ ಅದು ಬೇಗ ಎಲ್ಲೆಡೆ ಹರಡುತ್ತಾ ಹೋಗುತ್ತದೆ. ಕೊರೋನಾ ವೈರಸ್‌ನಲ್ಲಿ ಕೇವಲ ನಾಲ್ಕು ತಿಂಗಳಲ್ಲಿ ಈ ರೂಪಾಂತರಗಳು ಆಗಿವೆ ಎಂದು ಇದನ್ನು ಪತ್ತೆ ಹಚ್ಚಿದ ಪಶ್ಚಿಮ ಬಂಗಾಳದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಜೆನೋಮಿಕ್ಸ್‌ನ ವಿಜ್ಞಾನಿಗಳು ಹೇಳಿದ್ದಾರೆ. ಶೀಘ್ರದಲ್ಲೇ ಇವರ ಪ್ರಬಂಧವು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಜರ್ನಲ್‌ನಲ್ಲಿ ಪ್ರಕಟವಾಗಲಿದೆ.
ಆತಂಕಕಾರಿ ಸಂಗತಿಯೆಂದರೆ ಭಾರತದ ಕೊರೋನಾ ರೋಗಿಗಳ ಪೈಕಿ ಶೇ.47.5ರಷ್ಟುರೋಗಿಗಳಲ್ಲಿ ಎ2ಎ ಕೊರೋನಾ ವೈರಸ್ ಪತ್ತೆಯಾಗಿದೆ. ಆದರೆ, ಈ ಕುರಿತು ಇನ್ನಷ್ಟು ಸ್ಯಾಂಪಲ್‌ಗಳನ್ನು ಪರೀಕ್ಷಿಸಬೇಕಿದೆ. ಬಂಗಾಳದ ವಿಜ್ಞಾನಿಗಳ ಸಂಶೋಧನೆಯಿಂದ ಕೊರೋನಾ ವೈರಸ್‌ಗೆ ಲಸಿಕೆ ಕಂಡುಹಿಡಿಯುವವರಿಗೆ ಸಾಕಷ್ಟು ಪ್ರಯೋಜನವಾಗಲಿದೆ.