Asianet Suvarna News Asianet Suvarna News

ಪೌರತ್ವ ಕಾಯ್ದೆ ವಿರೋಧ: ಭೀಮ್‌ ಆರ್ಮಿ 'ರಾವಣ' ಆಜಾದ್ ಅರೆಸ್ಟ್!

ಪೌರತ್ವ ಕಾಯ್ದೆ, ಭುಗಿಲೆದ್ದ ಆಕ್ರೋಶ| ದೇಶದೆಲ್ಲೆಡೆ ಕಾಯ್ದೆ ವಿರೋಧಿಸಿ ಭಾರೀ ಪ್ರತಿಭಟನೆ| ದೆಹಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಕೊನೆಗೂ ಅರೆಸ್ಟ್| 

Bhim Army chief Chandrashekhar Azad taken into police custody from Jama Masjid
Author
Bangalore, First Published Dec 21, 2019, 11:40 AM IST

ನವದೆಹಲಿ[ಡಿ.21]: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಮೊದಲು ಖುದ್ದು ಆಜಾದ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ದೆಹಲಿ ಗೇಟ್ ಬಳಿ ಬಂಧಿಸಲಾಗಿದ್ದ ಎಲ್ಲರನ್ನೂ ಬಿಡುಗಡೆಗೊಳಿಸಿದರೆ, ತಾನು ಶರಣಾಗಲು ಸಿದ್ಧ ಎಂದಿದ್ದರು. ಪೌರತ್ವ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಶುಕ್ರವಾರ ನಡೆದಿದ್ದ ಪ್ರತಿಭಟನೆಯನ್ನು ಚಂದ್ರಶೇಖರ್ ಆಜಾದ್ ಕೂಡಾ ಭಾಗವಹಿಸಿದ್ದರು. ಈ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದರು. ಹೀಗಿದ್ದರೂ ಅವರು ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದರು. ಬಳಿಕ ಅವರಿಗಾಘಿ ತೀವ್ರ ಶೋಧರ್ಧ ನಡೆಸಲಾಗಿತ್ತು.

ಅರೆಸ್ಟ್ ಆಗುವುದಕ್ಕೂ ಮುನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಚಂದ್ರಶೇಖರ್ ಆಜಾದ್ 'ಒಂದು ವೇಳೆ ದೆಹಲಿ ಪೊಲೀಸರು ಮಾತುಕತೆ ನಡೆಸಲಿ ಇಚ್ಛಿಸುತ್ತಾರೆಂದಾದರೆ, ಮೊದಲು ದೆಹಲಿ ಗೇಟ್ ಬಳಿ ಬಂಧಿಸಿರುವ ನಮ್ಮ ಜನರನ್ನು ಬಿಡುಗಡೆಗೊಳಿಸಲಿ' ಎಂದಿದ್ದಾರೆ.

ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ಆಜಾದ್: ಹೈಡ್ರಾಮಾಗಳಿಗೆ ಸಾಕ್ಷಿಯಾದ ದೆಹಲಿ!

ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿದ ಆಜಾದ್ 'ಎಲ್ಲರನ್ನೂ ಬಿಡುಗಡೆಗೊಳಿಸಿ, ನಾನು ಅರೆಸ್ಟ್ ಆಗಲು ಸಿದ್ಧ. ಗೆಳೆಯರೇ ಸಂಘರ್ಷ ಮುಂದುವರೆಸಿ ಹಾಗೂ ಸಂವಿಧಾನ ರಕ್ಷಿಸಲು ಒಗ್ಗಟ್ಟಿನಿಂದಿರಿ. ಜಯ್ ಭೀಮ್, ಜಯ್ ಸಂವಿಧಾನ್' ಎಂಟದು ಬರೆದಿದ್ದಾರೆ.

ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ ಜಮಾ ಮಸೀದಿ ತಲುಪಿದ್ದ ಆಜಾದ್

ಚಂದ್ರಶೇಖರ್ ಆಜಾದ್ ಶುಕ್ರವಾರ ತಾನು ಜಮಾ ಮಸೀದಿಯಿಂದ ಜಂತರ್ ಮಂತರ್ ವರೆಗೆ ಮೆರವಣಿಗೆ ನಡೆಸುವುದಾಗಿ ಗುರುವಾದಂದು ಘೋಷಿಸಿದ್ದರು. ಹೀಗಾಗಿ ಅವರನ್ನು ಬಂಧಿಸಲು ಪೊಲೀಸರು ಸಜ್ಜಾಗಿದ್ದರು. ಆದರೆ ಆಜಾದ್ ಮಾತ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಜಮಾ ಮಸೀದಿ ಒಳಗೆ ಸೇರಿದ್ದರು. ಹೀಗಿರುವಾಗ ಪೊಲೀಸರು ಅವರನ್ನು ಬಂಧಿಸಲು ಹಲವಾರು ತಾಸು ಹುಡುಕಾಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ್ದ ಭೀಮ್ ಆರ್ಮಿ ವಕ್ತಾರ 'ಸುಮಾರು 1 ತಾಸು ಆಜಾದ್ ರನ್ನು ಬಂಧಿಸಿದ್ದಾರೆಂದು ನಾವು ಕೂಡಾ ಭಾವಿಸಿದ್ದೆವು. ಆದರೆ 4 ತಾಸು ಕಳೆದ ಬಳಿಕ ಅವರು ಜಮಾ ಮಸೀದಿಯೊಳಗೆ ಕಾಣಿಸಿಕೊಂಡರು. ಅಲ್ಲಿದ್ದ ಜನರಿಗೆ ಸಂವಿಧಾನದ ಆಶಯ ಅರ್ಥೈಸುತ್ತಿದ್ದರು. ಅಲ್ಲಿದ್ದ ಧಾರ್ಮಿಕ ಗುರುಗಳು ಆಜಾದ್ ನಮ್ಮ ಅತಿಥಿ ಎಂದಿದ್ದಾರೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಮೋದಿ ವಿರುದ್ಧ ಭೀಮ್‌ ಆರ್ಮಿ 'ರಾವಣ' ಕಣಕ್ಕೆ!

ಈ ಹಿಂದೆ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಿಂದ ಇವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿ ಭಾರೀ ಸಸದ್ದು ಮಾಡಿದ್ದರು.

Follow Us:
Download App:
  • android
  • ios