ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ ಬೆಂಗಳೂರು ಐಟಿ ಕಂಪನಿ ಮಾಲೀಕ| 1 ಕೋಟಿ ರೂ. ದೇಣಿಗೆ ನೀಡಿದ ಬೆಂಗಳೂರಿನ ಅಮರನಾಥ್ ಚೌಧರಿ| ಹರಕೆ ತೀರಿಸಿದ ಅಮರನಾಥ್ ಚೌಧರಿ| ಶ್ರೀ ವೆಂಕಟೇಶ್ವರ್ ಗೋಸಂರಕ್ಷಣೆ ಸಮಿತಿಗೆ 1 ಕೋಟಿ ರೂ. ದೇಣಿಗೆ|

ಬೆಂಗಳೂರು(ಜ.07): ತಿರುಪತಿ ತಿಮ್ಮಪನಿಗೆ ವಿಶ್ವದಾದ್ಯಂತ ಭಕ್ತರಿದ್ದಾರೆ. ಎಲ್ಲ ವರ್ಗಗಳ ಜನರ ಭಕ್ತಿಯನ್ನು ತನ್ನತ್ತ ಸೆಳೆದಿರುವ ತಿಮ್ಮಪ್ಪ, ತಿರುಮಲ ಬೆಟ್ಟದಲ್ಲಿ ರಾರಾಜಿಸುತ್ತಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದರಂತೆ ಬೆಂಗಳೂರು ಮೂಲದ ಐಟಿ ಕಂಪನಿಯೊಂದರ ಮಾಲೀಕ ತಿರುಪತಿ ತಿಮ್ಮಪ್ಪನಿಗೆ ಬರೋಬ್ಬರಿ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ಮೂಲಕ ತಿಮ್ಮಪ್ಪನ ಮೇಲಿನ ತಮ್ಮ ಭಕ್ತಿಯನ್ನು ನಮ್ರತೆಯಿಂದ ತೋರಿಸಿದ್ದಾರೆ.

ತಿಮ್ಮಪ್ಪನ ಮೇಲಿನ ಭಕ್ತಿ ಖಚಿತ: ತಿರುಪತಿ ಲಡ್ಡು ಇನ್ಮುಂದೆ ಉಚಿತ!

ಹೌದು, ಬೆಂಗಳೂರು ಮೂಲದ ಐಟಿ ಕಂಪನಿ ಮಾಲೀಕರಾದ ಅಮರನಾಥ್ ಚೌಧರಿ, ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದು, ಇದನ್ನು ಟಿಟಿಡಿ ಯ ಅಧೀನದಲ್ಲಿರುವ ಶ್ರೀ ವೆಂಕಟೇಶ್ವರ್ ಗೋಸಂರಕ್ಷಣೆ ಸಮಿತಿಗೆ ನೀಡುವಂತೆ ಮನವಿ ಮಾಡಿದ್ದಾರೆ.

ಕಳೆದ 9 ವರ್ಷಗಳಿಂದ ಅಮರನಾಥ್ ಅವರ ಐಟಿ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಇದಕ್ಕಾಗಿ ಹರಕೆ ಹೊತ್ತಿದ್ದ ಅಮರನಾಥ್ ಟಿಟಿಡಿ ಗೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಕಾಶ್ಮೀರ, ಮೋದಿ ಕ್ಷೇತ್ರ ವಾರಾಣಸಿಯಲ್ಲೂ ತಿಮ್ಮಪ್ಪನ ದೇಗುಲ!